Ad Widget .

ಸಂಪಾಜೆ: ಮೋರಿಗೆ ಬೈಕ್ ಗುದ್ದಿ ಸವಾರರು ಸಾವನ್ನಪ್ಪಿದ ಪ್ರಕರಣ| ಧರ್ಮಸ್ಥಳಕ್ಕೆ ಹೊರಟವರು ಮಸಣಕ್ಕೆ

ಸಮಗ್ರ ನ್ಯೂಸ್: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನಪ್ಪಿದ ಘಟನೆ ಸಂಪಾಜೆ ಅರಣ್ಯ ಇಲಾಖಾ ಕಚೇರಿ ಬಳಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.

Ad Widget . Ad Widget .

ಮೃತರನ್ನು ಮೈಸೂರು ಮೂಲದ ಯುವಕರಾದ ಪವನ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಧರ್ಮಸ್ಥಳಕ್ಕೆ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

Ad Widget . Ad Widget .

ಕಳೆದ ರಾತ್ರಿ ವೇಳೆ ಕೊಯ್ನಾಡಿನ ಫಾರೆಸ್ಟ್ ಐಬಿ ಬಳಿ ಮುಖ್ಯರಸ್ತೆಯಲ್ಲಿ ತಲುಪಿದಾಗ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯಲ್ಲಿದ್ದ ಮೋರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಸವಾರರಿಬ್ಬರು ಪಕ್ಕದ ಚರಂಡಿಗೆ ಎಸೆಯಲ್ಪಟ್ಟು ಸ್ಥಳದಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *