Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಗಸ್ಟ್ 04ರಿಂದ ಆಗಸ್ಟ್​ 10 ರವರೆಗಿನ ರಾಶಿ ಫಲ ವಿವರ ಇಲ್ಲಿದೆ. ಈ ವಾರ ಯಾವೆಲ್ಲ ರಾಶಿಗೆ ಶುಭಫಲ? ಯಾವ ರಾಶಿಗೆ ಅಶುಭ? ಎಂದು ಈ ವಾರ ಭವಿಷ್ಯದಲ್ಲಿ ತಿಳಿಯಿರಿ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಯಾವ ರಾಶಿಗೆ ಮಿಶ್ರ ಫಲವಿರಲಿದೆ ತಿಳಿಯೋಣ…

Ad Widget . Ad Widget .

ಮೇಷ ರಾಶಿ:
ರಾಶಿ ಚಕ್ರದ ಮೊದಲ ರಾಶಿಯೂ ಆಗಿದ್ದು, ಈ ರಾಶಿಯವರಿಗೆ ಶುಭ ಫಲವು ಆಧಿಕವಾಗಿ ಇರುವುದು. ಗುರುವು ದ್ವಿತೀಯದಲ್ಲಿ ಜೊತೆಗೆ ಕುಜನೂ ಇರುವನು. ಮಾತಿನ ಮೇಲೆ ಹಿಡಿತ ಕಷ್ಟವಾಗಿ, ಬೇಸರವನ್ನು ಕೊಡುವಿರಿ.‌ ಅನಂತರ ನೀವೇ ಸರಿ ಮಾಡಬೇಕಾಗುವುದು. ವೃತ್ತಿಯಲ್ಲಿ ಉಳಿತಾಯದ ಕಡೆಗೆ ಗಮನ ಬೇಕು. ವಾಹನ ಖರೀದಿಗೆ ಈ ವಾರ ಮುಂದಾಗುವಿರಿ. ಅಧಿಕ ಖರ್ಚಿನಿಂದ ವಸ್ತುಗಳಿಂದ ಪಡೆಯಬೇಕಾಗುವುದು. ಯಾರನ್ನೂ ಅಪಮಾನ ಮಾಡುತ್ತ ಕಾಲ ಕಳೆಯುವುದು ಬೇಡ. ಆದಾಯ ಬರುವ ಕೆಲಸಗಳ ಕಡೆ ನಿಮ್ಮ ಗಮನ ಇರುವುದು.

Ad Widget . Ad Widget .

ವೃಷಭ ರಾಶಿ:
ಈ ವಾರದಲ್ಲಿ ನಿಮಗೆ ಮಿಶ್ರಫಲವಿರಲಿದೆ. ರಾಶಿಯ ಅಧಿಪತಿಯು ನೀಚಗಾಮಿಯಾದ ಕಾರಣ ಪ್ರೇಮದಲ್ಲಿ ಹಿನ್ನಡೆ ಕಾಣಿಸುವುದು. ಯಾವ ಗೊಂದಲವನ್ನೂ ಹೇಳಿಕೊಳ್ಳಲಾಗದ ಸ್ಥಿತಿ ಬರಲಿದೆ. ಉದ್ಯೋಗದಲ್ಲಿ ಒತ್ತಡ ನಿವಾರಣೆ ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗುವುದು. ನೀವು ಮಾಡುವ ಕೆಲಸಗಳಿಗೆ ಸಾಮಾಜಿಕ ಮಾನ್ಯತೆಯನ್ನು ಬಯಸುವಿರಿ. ಮಾಡುವ ಕೆಲಸದಲ್ಲಿ ಸಿದ್ಧಿಸುವುದು. ನಿಮ್ಮ ಬಗ್ಗೆ ಇರುವ ಭಿನ್ನಾಭಿಪ್ರಾಯದಿಂದ ಕಸಿವಿಸಿಗೊಳ್ಳುವಿರಿ. ರೈತರು ಲಾಭಕ್ಕಾಗಿ ಕಾಯಬೇಕಾಗುವುದು. ಅಂಬಿಕೆಯನ್ನು ಅನನ್ಯ ಭಕ್ತಿಯಿಂದ ಆರಾಧಿಸಿ.

ಮಿಥುನ ರಾಶಿ:
ರಾಶಿ ಚಕ್ರದ ಮೂರನೇ ರಾಶಿಯವರಿಗೆ ಅಶುಭ ಫಲ. ರಾಶಿಯ ಅ ಅಧಿಪತಿಯು ತೃತೀಯದಲ್ಲಿ ಇರುವನು. ಸಹೋದರರಿಂದ ಅಸಹಕಾರವು ಕಲಹವಾಗುವುದು. ದೈಹಿಕ ಕ್ಷಮತೆ ಕಡಿಮೆಯಾಗಲಿದೆ. ಅಧಿಕಾರದಲ್ಲಿ ಇರುವವರಿಗೆ ಒತ್ತಡಗಳಿಂದ ಮುಕ್ತಿ ಸಿಗುವುದು. ಖರ್ಚಿನ ಮೇಲೆ ಹಿಡಿತವನ್ನು ಸಾಧಿಸಬೇಕು. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಮಾತಿನಿಂದ ನಿಮ್ಮನ್ನು ನಿಂದಿಸುವರು. ಸಂಗಾತಿಯನ್ನು ದ್ವೇಷಿಸುವಿರಿ. ಎಲ್ಲದಕ್ಕೂ ನಿಷ್ಠುರತೆ ಕಾಣಿಸುವುದು. ಸೀತಾರಾಮರ ಆರಾಧನೆಯಿಂದ ಶುಭ.

ಕಟಕ ರಾಶಿ:
ಈ ರಾಶಿಯವರಿಗೆ ಈ ರಾಶಿಯವರಿಗೆ ಶುಭ. ದ್ವಿತೀಯ ರಾಶಿಯ ಅಧಿಪತಿಯಾದ ಸೂರ್ಯನು ಇದೇ ರಾಶಿಯಲ್ಲಿ ಇದ್ದಾನೆ. ಅನಾರೋಗ್ಯದ ಕಾರಣದಿಂದ ಆರ್ಥಿಕ ನಷ್ಟವಾಗಲಿದೆ. ಭೂ ವಿವಾದಕ್ಕೆ ತೆರೆ ಬೀಳುವುದು. ನಿಮ್ಮ ಪಾಲಿಗೆ ಸಿಗಲಿದೆ. ಕೌಟುಂಬಿಕ ಕಲಹವು ನಿಮ್ಮ ಮೇಲೆ ಒತ್ತಡ ತರುವುದು. ಜವಾಬ್ದಾರಿಯನ್ನು ಅನಿವಾರ್ಯವಾಗಿ ನಿರ್ವಹಿಸಬೇಕಾಗುವುದು. ಶೈಕ್ಷಣಿಕ ಪ್ರಗತಿಯು ನಿಮಗೆ ಸಮಾಧಾನ ಕೊಡುವುದು. ಸಂಗಾತಿಯ ಜೊತೆ ಆಪ್ತವಾಗಿ ಮಾತನಾಡುವಿರಿ. ಇಷ್ಟದೇವರ ಆರಾಧನೆ ಮಾಡಿ.

ಸಿಂಹ ರಾಶಿ:
ಈ ವಾರ ನಿಮಗೆ ಮಿಶ್ರ ಫಲ ಸಿಗಲಿದೆ. ರಾಶಿಯ ಅಧಿಪತಿಯಾದ ರವಿಯು ದ್ವಾದಶದಲ್ಲಿ ಇರುವನು. ನವಾಂಶದಲ್ಲಿ ಗುರುವಿನ ಸ್ಥಾನವಾದ ಕಾರಣ ಅತಿಯಾದ ಹಾನಿಯಾಗದು. ಯಾವುದೇ ತೊಂದರೆಗಳೂ ಅದು ಉತ್ತಮ‌ ಫಲವಾಗಿ ಪರಿವರ್ತನೆ ಆಗುವುದು. ಆದಾಯದಲ್ಲಿಯೂ ಗಣನೀಯ ಅಭಿವೃದ್ಧಿ ಇರುವುದು. ಮಕ್ಕಳ ಆರೋಗ್ಯದ ಕಡೆ ಗಮನ ಅವಶ್ಯಕ. ತಂದೆಯ ಮಾತಿಗೆ ಬದ್ಧರಾಗಿ ನಡೆದುಕೊಳ್ಳುವಿರಿ. ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಪ್ರತಿಕ್ರಿಯೆ ನೀಡುವುದು ಬೇಡ. ವಿದೇಶದ ವ್ಯಾಪಾರದಲ್ಲಿ ಅನುಕೂಲತೆ ಕಾಣಿಸುವುದು. ಅರ್ಧನಾರೀಶ್ವರರ ಉಪಾಸನೆಯಿಂದ ಚಿಂತಿತ ಮನೋರಥ ಸಿದ್ಧಿಸುವುದು.

ಕನ್ಯಾ ರಾಶಿ:
ಈ ವಾರದಲ್ಲಿ ನಿಮಗೆ ಶುಭವಿರಲಿದೆ. ರಾಶಿಯ ಅಧಿಪತಿಯಾದ ಬುಧನು ದ್ವಾದಶದಲ್ಲಿ ಇದ್ದರೂ ಉಚ್ಚಗಾಮಿಯಾದ ಕಾರಣ ಬರುವ ತೊಂದರೆಗಳೂ ಕ್ಷಣದಲ್ಲಿ ನಾಶವಾಗುವುದು. ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಬೇಕಾಗುವುದು. ಹಿಂದಿನ ಉಳಿತಾಯಗಳು ನೆರವಿಗೆ ಬರಲಿದ್ದು ಅದನ್ನು ಉತ್ತಮ‌ ಕಾರ್ಯಗಳಿಗೆ ಜೋಡಿಸುವಿರಿ. ಸಾಲದಿಂದ ತೊಂದರೆಯಲ್ಲಿ ಸಿಕ್ಕಿಬೀಳುವಿರಿ. ನೂತನ ಉದ್ಯೋಗವು ಸದ್ಯ ಕಷ್ಟವಾಗಬಹುದು. ಗೃಹನಿರ್ಮಾಣ ಕಾರ್ಯವು ಬಹಳ ವೇಗವಾಗಿ, ವ್ಯವಸ್ಥಿತವಾಗಿ ನಡೆಯುವುದು. ಒಂದಕ್ಕೆ ಎರಡು ಪಟ್ಟು ಖರ್ಚು ಮಾಡಬೇಕಾಗುವುದು‌. ಲಕ್ಷ್ಮೀನರಸಿಂಹನ ಆರಾಧನೆಯಿಂದ ಅಭೀಷ್ಟ ಸಿದ್ಧಿಸುವುದು.

ತುಲಾ ರಾಶಿ:
ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ತಿಂಗಳ ಮೊದಲ ವಾರ ಮಿಶ್ರಫಲ. ರಾಶಿಯ ಅಧಿಪತಿಯು ನೀಚಗಾಮಿಯಾಗಿರುವನು. ಅದರಲ್ಲಿಯೂ ಸೂರ್ಯನ ರಾಶಿಯಲ್ಲಿ ಇರುವ ಕಾರಣ ಸ್ವಲ್ಪ ಮಟ್ಟಿನ‌ ಹಿನ್ನಡೆ ಇರಲಿದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ಅಡೆತಡೆಗಳು ಕಾರಣವಾಗುವುದು. ಪೂರ್ಣ ಪ್ರಮಾಣದ ಮನಸ್ಸಿನಿಂದ ಹೊಸ ಕಾರ್ಯಗಳಲ್ಲಿ ಮುಂದಾಗಬೇಕು. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ದೈಹಿಕ ಕ್ಷಮತೆಯನ್ನು ಹೆಚ್ಚಾಗಿಸಲು ವ್ಯಾಯಾಮಾದಿಗಳು ಅಗತ್ಯ.‌ ಉದ್ಯಮಿಗಳಿಗೆ ಹೆಚ್ಚಿನ ಲಾಭ. ರುಕ್ಮಿಣಿ ಸಹಿತ ಕೃಷ್ಣನ ಉಪಾಸನೆ ಮಾಡಿ.

ವೃಶ್ಚಿಕ ರಾಶಿ:
ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ನಿಮಗೆ ಶುಭವಿದೆ. ರಾಶಿಯ ಅಧಿಪತಿಯು ವೃಷಭದಲ್ಲಿ ಇದ್ದಾನೆ. ನವಾಂಶದ ರೀತಿಯಲ್ಲಿ ಗುರುವಿನ ಮನೆಯಲ್ಲಿ ಇದ್ದಾನೆ. ಅಷ್ಟೇ ಅಲ್ಲದೇ ಗುರುವಿನ ಜೊತೆಗೂ ಇದ್ದಾನೆ. ದಾಂಪತ್ಯದಲ್ಲಿ ಸುಖವಿರಲಿದೆ. ಮಾನಸಿಕವಾಗಿ ಸಕಾರಾತ್ಮಕ ಯೋಚನೆ ಮಾಡುವಿರಿ. ಯಾವುದಕ್ಕೂ ಕುಗ್ಗುವರಲ್ಲ. ನಿಮ್ಮ ನಾಯಕತ್ವ ಗುಣಕ್ಕೆ ಸೂಕ್ತವಾದ ಸ್ಥಾನ ದೊರೆಯುವುದು. ಅಧಿಕಾರದಲ್ಲಿ ಇರುವವರು ಸಾಧ್ಯವಾದಷ್ಟು ಜನಕ್ಕೆ ಸಂತೋಷವಾಗುವ ಕಾರ್ಯವನ್ನು ಮಾಡಿ. ಸರ್ಕಾರದ ಕಾರ್ಯ ಅಥವಾ ಸರ್ಕಾರದ ಉದ್ಯೋಗದಲ್ಲಿ ಇರುವವರಿಗೆ ಅನುಕೂಲಗಳು ಹೆಚ್ಚಿರುವುದು. ಭದ್ರಕಾಳಿಯ ಆರಾಧನೆಯಿಂದ ಶುಭವಿರಲಿದೆ.

ಧನು ರಾಶಿ:
ಈ ವಾರ ಅಶುಭ ಫಲವಿರಲಿದೆ. ಶತ್ರುಗಳಿಂದ ತೊಂದರೆಗಳು ಇರದು. ಆದರೂ ಬಂಧುಗಳಿಂದ ಅಪಮಾನವಾಗಲಿದೆ. ಚಾಣಾಕ್ಷತನದಿಂದ ಮೋಸ ಹೋಗಲೂ ಅವಕಾಶವಿರಲಿದೆ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಾಣಿಸುವುದು. ಓದಿನಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಧಾರ್ಮಿಕ ಕ್ಷೇತ್ರಗಳನ್ನು ಭೇಟಿ ಮಾಡುವ ಅವಕಾಶ ಇರಲಿದೆ. ಹಣಕಾಸಿನ ವಿಚಾರದಲ್ಲಿ ಕೈ ಬಿಟ್ಟು ಕೊಡುವುದು ಆಗದು. ಹತ್ತಿರದ ಸ್ನೇಹಿತರಿಂದ ನೋವು ಬರುವುದು. ದಾಂಪತ್ಯದಲ್ಲಿ ಕಲಹವು ಕಡಿಮೆ ಆಗಲಿದೆ. ಲಕ್ಷ್ಮೀಸಹಿತನಾದ ನಾರಾಯಣನನ್ನು ಪೂಜಿಸಿ.

ಮಕರ ರಾಶಿ:
ಈ ವಾರ ನಿಮಗೆ ಶುಭ. ರಾಶಿಯ ಅಧಿಪತಿಯು ಒಂದಲ್ಲ ಒಂದು ರೀತಿಯಲ್ಲಿ ಒಳ್ಳೆಯದನ್ನು ಮಾಡುವನು. ಸ್ವಂತ ವಾಹನವನ್ನು ಕೊಳ್ಳುವ ಅವಕಾಶವಿದೆ. ಸ್ತ್ರೀಯರ ಜೊತೆ ವೈರ ಸಾಧಿಸುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯವು ಹದತಪ್ಪಬಹುದು. ಶತ್ರುಗಳ ಬಾಧೆಯಿಂದ ಮುಕ್ತಿ ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗುವುದು. ಆದರೆ ಅದನ್ನು ಸದುಪಯೋಗವಾಗಿಸಿಕೊಳ್ಳುವುದೂ ಮುಖ್ಯವಾಗಲಿದೆ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧನವಿರುವುದು. ತಿಲವನ್ನು ದೋಷ ನಿವಾರಣೆ ದಾನ ಮಾಡಿ.

ಕುಂಭ ರಾಶಿ:
ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಮಿಶ್ರ ಫಲಗಳು ನಿಮ್ಮದಾಗಲಿದೆ. ಆತ್ಮಸ್ಥೈರ್ಯವು ಹೆಚ್ಚಿರಲಿದೆ. ಆದರೆ ಯಾವುದೇ ಅನಾಹುತವನ್ನು ಮಾಡಿಕೊಳ್ಳದೇ ಜಾಗರೂಕತೆಯಿಂದ‌ ಕಾರ್ಯವನ್ನು ಮಾಡಬೇಕು. ಕುಟುಂಬದಿಂದ ನಿಮ್ಮ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರಗಳು ಸಿಗುವುದು. ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡಲು ಯೋಜನೆ ಮಾಡುವಿರಿ. ಆದರೆ‌ ಕಾರಣಾಂತರದಿಂದ ಅದು ಬದಲಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಹತ್ತಿರದ ಗೆಳೆಯರ ಜೊತೆ ಆತ್ಮೀಯತೆ ಹೆಚ್ಚಾಗುವುದು. ಹೂಡಕೆಯಿಂದ ಹಣವು ಉಳಿತಾಯವಾಗಲಿದೆ. ರುದ್ರಾಭಿಷೇಕದಿಂದ ಶನಿಯ ಅನುಗ್ರಹ ಪಡೆಯಬಹುದು.

ಮೀನ ರಾಶಿ:
ಈ ವಾರದಲ್ಲಿ ನಿಮಗೆ ಮಿಶ್ರ ಫಲ. ನಿಮಗೆ ಬರುವ ಒತ್ತಡಗಳನ್ನು ಸಮಾಧಾನ ಚಿತ್ತದಿಂದ ನಿಯಂತ್ರಣ ಅವಶ್ಯಕ.‌ ಅದರಲ್ಲಿಯೂ ಅದಕ್ಕೆ ಬೇಕಾದ ಧ್ಯಾನ, ಪ್ರಾಣಾಯಾಮ ಇವುಗಳನ್ನೂ ನೀವು ಅಭ್ಯಾಸ ಮಾಡಿಕೊಳ್ಳಬೇಕಾಗುವುದು. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಶುಕ್ರನು ಷಷ್ಠ ಸ್ಥಾನದಲ್ಲಿ ಇರುವನು. ಶತ್ರುಗಳಿಂದ ಧನವು ಅಪಹೃತವಾಗಬಹುದು. ಸಾಲ ಮಾಡುವಾಗಲೂ ಮಿತಿ ಇರಲಿ. ರೈತರು ತಮ್ಮ ಆದಾಯವನ್ನು ಬಹಳ ಜಾಗರೂಕತೆಯಿಂದ ರಕ್ಷಿಸಿಕೊಳ್ಳುವರು. ಆತುರದಲ್ಲಿ ನಿರ್ಧಾರ ಕೈಗೊಳ್ಳುವುದು ಬೇಡ. ಸ್ವಂತ ಮನೆಯ ನಿರ್ಮಾಣದ ವಿಚಾರಕ್ಕೆ ಸದ್ಯ ಹೋಗುವುದು ಬೇಡ. ಸಮಯ ತೆಗೆದುಕೊಂಡರೂ ಅದನ್ನು ಚೆನ್ನಾಗಿ ಮಾಡಲು ಸಾಧ್ಯವಿದೆ. ಶನೈಶ್ಚರನಿಗೆ ಎಳ್ಳಿನ ದೀಪದ ನಂದಾದೀಪದ ಸೇವೆಯನ್ನು ಮಾಡಿಸಿ.

Leave a Comment

Your email address will not be published. Required fields are marked *