Ad Widget .

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಇಬ್ಬರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ

ಸಮಗ್ರ ನ್ಯೂಸ್: ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಎನ್​​ಐಎ ಚಾರ್ಜ್​​ಶೀಟ್​​ ಸಲ್ಲಿಸಿದೆ.

Ad Widget . Ad Widget .

ಪ್ರಕರಣ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್​ಗೆ ಆಶ್ರಯ ನೀಡಿದ್ದ ಹಿನ್ನೆಲೆ ಮನ್ಸೂರ್ ಪಾಷಾ ಮತ್ತು ಹೆಚ್​ವೈ ರಿಯಾಜ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲಾಗಿದೆ.

Ad Widget . Ad Widget .

ಸಕಲೇಶಪುರದಲ್ಲಿ ಮುಸ್ತಫಾ ಪೈಚಾರ್​ಗೆ ಮನ್ಸೂರ್, ರಿಯಾಜ್​ ಆಶ್ರಯ ನೀಡಿದ್ದರು. ಮೇ 5ರಂದು ಸಕಲೇಶಪುರದಲ್ಲಿ ಮುಸ್ತಫಾ ನನ್ನು ಬಂಧಿಸಿದ್ದು, ಜೂ.3ರಂದು ಮುಂಬೈ ಏರ್​​ಪೋರ್ಟ್​ನಲ್ಲಿ ರಿಯಾಜ್​ ಬಂಧಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು ಆತನ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಗಾಯಗೊಂಡಿದ್ದ ಪ್ರವೀಣ್​ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

Leave a Comment

Your email address will not be published. Required fields are marked *