Ad Widget .

ಸುಳ್ಯ: ಅರ್ಹತಾ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಅಕಾಡೆಮಿಯ ಪಾರಮ್ಯ| ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(CTET)ಹಾಗೂ ವಿಶ್ವವಿದ್ಯಾನಿಲಯದ ಸಾಮಾನ್ಯ ಪ್ರವೇಶ ಪರೀಕ್ಷೆ(CUET)ಯಲ್ಲಿ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

ಸಮಗ್ರ ನ್ಯೂಸ್: ಗ್ರಾಮೀಣ ಪ್ರದೇಶದ ಯುವ ಜನತೆಗೆ ಆಶಾಕಿರಣವಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಖ್ಯಾತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ವಿವಿಧ ಅರ್ಹತಾ ಪರೀಕ್ಷೆಗಳಿಗೆ ತರಬೇತಿ ಪಡೆದ 2 ವಿದ್ಯಾರ್ಥಿಗಳಲ್ಲಿ ಇಬ್ಬರೂ ಕೂಡ ಉತ್ತೀರ್ಣರಾಗುವ ಮೂಲಕ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.

Ad Widget . Ad Widget .

ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ-CTET2024 ವರ್ಷ ಮೊಳೆಯರ್ ಸಾಧನೆ:
ವಿವಿಧ ಅರ್ಹತಾ ಪರೀಕ್ಷೆಗಳಿಗೆ ಸಂಬಂದಿಸಿದಂತೆ ವಿದ್ಯಾಮಾತಾ ಅಕಾಡೆಮಿಯು ನೀಡಿದ್ದ ತರಗತಿಗಳಿಗೆ ಹಾಜರಾಗಿದ್ದ ವರ್ಷ ಮೊಳೆಯರ್ ರವರು ಉತ್ತಮ ಶ್ರೇಣಿಯಲ್ಲಿ 2024ನೇ ಸಾಲಿನ CTET ನಲ್ಲಿ ಉತ್ತೀರ್ಣರಾಗುವ ಮೂಲಕ ಕೇಂದ್ರೀಯ ವಿದ್ಯಾಲಯಗಳ ನೇಮಕಾತಿಯ ಲಿಖಿತ ಪರೀಕ್ಷೆಗಳನ್ನು ಎದುರಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಇವರು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದು ಈಗಾಗಲೇ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ(KARTET)ಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವರ್ಷ ಮೊಳೆಯರ್ ರವರು ಪ್ರಸ್ತುತ ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಇವರು ಪುತ್ತೂರಿನ ನಿವಾಸಿಯಾದ ಪ್ರಸ್ತುತ ಸಂತ ಫಿಲೋಮೀನಾ ಪದವಿ ಕಾಲೇಜ್ ಪುತ್ತೂರಿನ ಕನ್ನಡ ಉಪನ್ಯಾಸಕರಾದ ಡಾ. ವಿಜಯಕುಮಾರ್ ಮೊಳೆಯರ್ ಹಾಗೂ ಉಷಾ ಎಂ ರವರ ಪುತ್ರಿಯಾಗಿರುತ್ತಾರೆ.

Ad Widget . Ad Widget .

ವಿಶ್ವವಿದ್ಯಾನಿಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸೃಷ್ಟಿ ಪಿ ಎಸ್ ಸಾಧನೆ:
ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ನಡೆಸಲಾಗುವ ಸಾಮಾನ್ಯ ಅರ್ಹತಾ ಪರೀಕ್ಷೆಗಳಿಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ಕುಕ್ಕೇ ಸುಬ್ರಹ್ಮಣ್ಯದ ನೂಚಿಲ ನಿವಾಸಿಯಾದ ಪ್ರಮೋದ್ ಮತ್ತು ಶೋಭಾ ದಂಪತಿಗಳ ಪುತ್ರಿಯಾದ ಕುಮಾರಿ ಸೃಷ್ಟಿ ಪಿ ಎಸ್ ರವರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಅವಳಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ವಿದ್ಯಾಮಾತಾ ಅಕಾಡೆಮಿ:
ಇಬ್ಬರು ವಿದ್ಯಾರ್ಥಿನಿಯರ ಸಾಧನೆಯಿಂದ ಅವರ ಪೋಷಕರು ಹಾಗೂ ಸಂಸ್ಥೆಯ ಹಿರಿಮೆಯನ್ನು ಉನ್ನತ ಸ್ಥಾನಕ್ಕೆರಿಸಿದ ಸಾಧನೆಗೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ಮಂಡಳಿ, ಸಂಸ್ಥೆ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Leave a Comment

Your email address will not be published. Required fields are marked *