Ad Widget .

ವಯನಾಡ್ ‌ದುರಂತದ ಬಳಿಕ ಮತ್ತೆ ಮುನ್ನಲೆಗೆ ಬಂದ ಪರಿಸರ ಸೂಕ್ಷ್ಮ ಪ್ರದೇಶ| ಕೇಂದ್ರ ಸರ್ಕಾರದಿಂದ 5ನೇ ‌ಕರಡು ಅಧಿಸೂಚನೆ ಪ್ರಕಟ

ಸಮಗ್ರ ನ್ಯೂಸ್: ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಗೋವಾಗಳಲ್ಲಿ ವ್ಯಾಪಿಸಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶದ 56,800 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ ಪ್ರದೇಶ ಎಂದು ಕೇಂದ್ರ ಸರಕಾರ ಐದನೇ ಕರಡು ಅಧಿಸೂಚನೆ ಹೊರಡಿಸಿದೆ.

Ad Widget . Ad Widget .

300ಕ್ಕೂ ಅಧಿಕ ಜನರು ಸಾವನ್ನಪ್ಪಲು ಕಾರಣವಾದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ ಒಂದು ದಿನದ ಬಳಿಕ ಜುಲೈ 31ರಂದು ಈ ಅಧಿಸೂಚನೆ ಹೊರಡಿಸಲಾಗಿದೆ.

Ad Widget . Ad Widget .

ಭೂಕುಸಿತ ಸಂಭವಿಸಿದ ಜಿಲ್ಲೆಯಾದ ವಯನಾಡ್‌ನ 2 ತಾಲೂಕುಗಳ 13 ಗ್ರಾಮಗಳು ಸೇರಿದಂತೆ ಕೇರಳದ 9,993,7 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕರಡು ಅಧಿಸೂಚನೆ ಪ್ರಸ್ತಾವಿಸಿದೆ.

ಅಧಿಸೂಚನೆ ಪ್ರಸ್ತಾವಿಸಿದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗುಜರಾತ್‌ನ 449 ಚದರ ಕಿ.ಮೀ., ಮಹಾರಾಷ್ಟ್ರದ 17,340 ಚದರ ಕಿ.ಮೀ., ಗೋವಾದ 1,461 ಚದರ ಕಿ.ಮೀ., ಕರ್ನಾಟಕದ 20,668 ಚದರ ಕಿ.ಮೀ., ತಮಿಳುನಾಡಿನ 6,914 ಚದರ ಕಿ.ಮೀ., ಕೇರಳದ 9,993.7 ಚದರ ಕಿ.ಮೀ. ಪ್ರದೇಶ ಒಳಗೊಂಡಿದೆ.

Leave a Comment

Your email address will not be published. Required fields are marked *