ಸಮಗ್ರ ನ್ಯೂಸ್: ಕೇರಳದ ವಯನಾಡಿನಲ್ಲಿ 36 ಗಂಟೆಗಳಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿ ಭಾರತೀಯ ಯೋಧರು ದಾಖಲೆ ಬರೆದಿದ್ದಾರೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಾರಿ ಭೂಕುಸಿತಕ್ಕೆ 300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭೂ ಕುಸಿತದಲ್ಲಿ ಮೃತಪಟ್ಟ ಜನರನ್ನು ಶವಗಳನ್ನು ಹೊರ ತೆಗೆಯಲು ಹಾಗೂ ಬದುಕುಳಿದವರನ್ನು ರಕ್ಷಿಸಲು ಅನುಕೂಲವಾಗಲು ಸ್ವತಹ ಯೋಧರೇ ನದಿಗೆ ಅಡ್ಡಲಾಗಿ ಕಬ್ಬಿಣದ ಸೇತುವೆ ನಿರ್ಮಿಸಿದ್ದಾರೆ.
ಈ ವಿಚಾರವನ್ನು ಮಾಜಿ ಶಾಸಕ ಸಿಟಿ ರವಿ ಟ್ವೀಟ್ ನಲ್ಲಿ ಹಂಚಿಕೊಂಡು ಭಾರತೀಯ ಯೋಧರಿಗೆ ಹ್ಯಾಟ್ಸಾಪ್ ಹೇಳಿದ್ದಾರೆ. “ಭಾರತದ ಸೈನಿಕರಿಗೆ ನಮೋ ನಮಃ” ಗುಡ್ಡ ಕುಸಿತದಿಂದ ಸಂಪೂರ್ಣ ನಾಶವಾಗಿದ್ದ ಕೇರಳದ ವಯನಾಡಿನ ಚೊರಲ್ ಮಾಲಾ ಹಾಗೂ ಮುಂಡಕೈ ನಡುವೆ ಕೇವಲ 36 ಗಂಟೆಗಳಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿ ದಾಖಲೆ ನಿರ್ಮಿಸಿದ್ದಾರೆ. ಇಂತಹ ಸೇವಾ ಮನೋಭಾವದ ಸೈನಿಕರನ್ನು ಪಡೆದ ನಾವೇ ನಿಜಕ್ಕೂ ಧನ್ಯರು ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.