Ad Widget .

ಆಟವಾಡುತ್ತ ಮೆಟ್ರೋ ಟ್ರ್ಯಾಕ್ ಮೇಲೆ ಬಿದ್ದ ಮಗು.. ತಪ್ಪಿದ ಭಾರೀ ದುರಂತ..

ಸಮಗ್ರ ನ್ಯೂಸ್: ನಮ್ಮ ಮೆಟ್ರೋದಲ್ಲಿ ದಿನನಿತ್ಯ ಒಂದಲ್ಲ ಒಂದು ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಮತ್ತೊಂದು ಅವಘಡಕ್ಕೆ ನಮ್ಮ ಮೆಟ್ರೋ ಕಾರಣವಾಗಿದೆ. ಹೌದು ನಿನ್ನೆ ಗುರುವಾರ ನಾಲ್ಕು ವರ್ಷದ ಮಗುವೊಂದು ಆಟವಾಡುತ್ತಾ ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿದೆ.

Ad Widget . Ad Widget .

ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೆಟ್ರೋ ರೈಲು ಬರಲು ನಾಲ್ಕೈದ ನಿಮಿಷಗಳು ಬಾಕಿ ಇದ್ವು. ಈ ವೇಳೆ ಆಟವಾಡುತ್ತಾ ಮಗು ಟ್ರ್ಯಾಕ್‌ ಮುಂದೆ ಬಂದಿದೆ. ಬಗ್ಗಿ ನೋಡುವಾಗ ಆಕಸ್ಮಿಕವಾಗಿ ಆಯತಪ್ಪಿ ಟ್ರ್ಯಾಕ್‌ಗೆ ಬಂದಿದೆ. ಮಗು ಟ್ರ್ಯಾಕ್‌ಗೆ ಬಿದ್ದ ತಕ್ಷಣ ಅಲರ್ಟ್‌ ಆದ ಮೆಟ್ರೋ ಸಿಬ್ಬಂದಿ, ಮೆಟ್ರೋ ಟ್ರ್ಯಾಕ್‌ನ ಪವರ್ ಕಟ್ ಮಾಡಿಸಿದ್ದಾರೆ.

Ad Widget . Ad Widget .

ತಕ್ಷಣವೇ ಟ್ರ್ಯಾಕ್‌ಗೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್‌ ಮಗುವಿಗೆ ಯಾವುದೇ ಅಪಾಯವಾಗಿಲ್ಲ. ಇನ್ನೂ ಈ ಘಟನೆಯಿಂದ ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ನಿನ್ನೆ (ಆ.1) ರಾತ್ರಿ 9 ಗಂಟೆ 8 ನಿಮಿಷದಿಂದ 9 ಗಂಟೆ 16 ನಿಮಿಷದ ವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿ, 2 ರೈಲು ಸಂಚಾರವನ್ನು ಬಿಎಂಆರ್‌ಸಿಎಲ್‌ ಸ್ಥಗಿತಗೊಳಿಸಿತ್ತು. ಬಳಿಕ ಎಂದಿನಂತೆ ಮೆಟ್ರೋ ಸಂಚಾರಾರಂಭವಾಗಿತ್ತು.

ಇಬ್ಬರೂ ಮೆಟ್ರೋ ಸೆಕ್ಯುರಿಟಿ ಗಾರ್ಡ್‌ಗಳಿಂದ ಮಗುವಿನ ಪ್ರಾಣ ಉಳಿದಿದೆ. ಮಗುವಿಗೆ ಯಾವುದೇ ಗಾಯಗಳು ಆಗದ ರೀತಿಯಲ್ಲಿ ಮೆಟ್ರೋ ವಿದ್ಯುತ್ ಲೈನ್ ಆಫ್ ಮಾಡಿದ್ದಾರೆ. ಸದ್ಯ ಮಗುವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

Leave a Comment

Your email address will not be published. Required fields are marked *