Ad Widget .

ಬೆಂಗಳೂರು: ತಾಯಿಯಿಂದಲೇ ಮಗು ಕಿಡ್ನ್ಯಾಪ್… ಸಿಸಿಟಿವಿಯಲ್ಲಿ ದೃಶ್ಯ ಬೆಳಕಿಗೆ

ಸಮಗ್ರ ನ್ಯೂಸ್: ಬೆಂಗಳೂರಿನ ಕೆ.ಆರ್.ಪುರಂನಲ್ಲಿ ತಾಯಿಯಿಂದಲೇ ಮಗುವಿನ ಅಪಹರಣವಾದ ಘಟನೆ ನಡೆದಿದೆ. ಮಗುವನ್ನು ಕಿಡ್ನ್ಯಾಪ್ ಮಾಡಿ ಎಸ್ಕೇಪ್‌ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆ.ಆರ್‌ ಪುರಂನ ಕ್ಯಾಸ ಗ್ರ್ಯಾಂಡ್ ರಾಯ್ಸಿ ಅಪಾರ್ಟ್ ಮೆಂಟ್ ಮುಂಭಾಗ ಬೆಳಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ.

Ad Widget . Ad Widget .

ಮಗುವಿನ ತಾಯಿ ಅನುಪಮ ಮತ್ತು ಆತನ ಸ್ನೇಹಿತನಿಂದ ಈ ಕೃತ್ಯ ನಡೆದಿದೆ. ಪತಿ ಸಿದ್ದಾರ್ಥ ಮತ್ತು ಪತ್ನಿ ಅನುಪಮ ನಡುವೆ ಕೌಟುಂಬಿಕ ಕಲಹವಿತ್ತು. ಹೀಗಾಗಿ ಈ ಇಬ್ಬರು ದೂರವಾಗಿದ್ದರು. ದೂರಾದ ಬಳಿಕ ಪತ್ನಿ ಅನುಪಮ ಬೇರೊಬ್ಬ ವ್ಯಕ್ತಿ ಜತೆಗೆ ಮದುವೆ ಆಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮಗುವನ್ನು ಪತಿ ಸಿದ್ದಾರ್ಥ್‌ ವಶಕ್ಕೆ ಒಪ್ಪಿಸಿತ್ತು. ಆದರೆ ಇಂದು ಅಪಾರ್ಟ್‌ಮೆಂಟ್ ಮುಂಭಾಗ ಸ್ಕೂಲ್‌ಗೆ ಹೋಗಲು ನಿಂತಿದ್ದಾಗ ಅನುಪಮ, ಸ್ನೇಹಿತ ಜತೆ ಸೇರಿ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಸದ್ಯ ಕೆ.ಆರ್ .ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *