Ad Widget .

ವಯನಾಡಿನಲ್ಲಿ ನಿಜವಾಯಿತೇ ಆ ಮಾನಸಿಕ ಅಸ್ವಸ್ಥನ‌ ಭವಿಷ್ಯ!?| ವರುಷಗಳ ಹಿಂದೆ ಹೇಳಿದ‌ ವಿಡಿಯೋ ವೈರಲ್|

ಸಮಗ್ರ ನ್ಯೂಸ್: ಕೇರಳದ ವಯನಾಡ್‌ನ ದೃಶ್ಯ ನೋಡಿದರೆ ಕಲ್ಲು ಮನಸ್ಸು ಕೂಡ ಕರಗುತ್ತದೆ. ಎಲ್ಲರಿಗೂ ಒಂದು ರೀತಿಯ ಜೀವ ಭಯ ಉಂಟಾಗಿದೆ. ನಾಳೆಯ ಬದುಕು ಊಹಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಕಠೋರ ಸತ್ಯವನ್ನು ಕೋಪಿಸಿಕೊಂಡ ಈ ಪ್ರಕೃತಿ ಮನುಷ್ಯನಿಗೆ ಸಾರಿ ಸಾರಿ ಹೇಳುತ್ತಿದೆ.

Ad Widget . Ad Widget .

ಈ ದುರ್ಘಟನೆಯಲ್ಲಿ ಸತ್ತವರನ್ನು ನೋಡಿದಾಗ ನೋವಾಗುತ್ತದೆ, ಅದಕ್ಕಿಂತ ಹೆಚ್ಚಿನ ದುಃಖ ಅಲ್ಲಿ ಬದುಕುಳಿದವರನ್ನು ನೋಡಿದಾಗ ಉಂಟಾಗುವುದು.

Ad Widget . Ad Widget .

ಹೊಟ್ಟೆ- ಬಟ್ಟೆ ಕಟ್ಟಿ ಕಷ್ಟಪಟ್ಟು ಮಾಡಿದ ಸೂರು, ನೆಲ ಇಂದಿಲ್ಲ, ಕೆಲವರು ತನ್ನವರನ್ನೆಲ್ಲಾ ಕಳೆದುಕೊಂಡಿದ್ದಾರೆ, ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಪೋಷಕರನ್ನು ಕಳೆದುಕೊಂಡ ಮಕ್ಕಳು, ಕುಟುಂದಲ್ಲಿದ್ದ ಎಲ್ಲರನ್ನು ಕಳೆದುಕೊಂಡು ವ್ಯಕ್ತಿ, ಕಣ್ಣೆದುರಿನಲ್ಲಿಯೇ ಕೊಚ್ಚಿ ಹೋದ ಕಂದಮ್ಮ ಹೀಗೆ ಅಲ್ಲಿ ಬಾಕಿಯುಳಿದಿರುವ ಪ್ರತಿಯೊಬ್ಬರ ಕತೆಯೂ ಹೃದಯ ವಿದ್ರಾವಕ, ಇಂದಿನ ದುಃಸ್ಥಿತಿ ಜೊತೆಗೆ ನಾಳೆಯ ಭವಿಷ್ಯವೂ ಅವರನ್ನು ಭೀಕರವಾಗಿ ಕಾಡುತ್ತಿದೆ.

ಆದರೆ ಇಂಥದ್ದೊಂದು ಭೀಕರ ಘಟನೆ ಕೇರಳದಲ್ಲಿ ನಡೆಯಲಿದೆ ಎಂಬುವುದನ್ನು ವರ್ಷಗಳ ಹಿಂದೆಯೇ ಮಾನಸಿಕ ಅಸ್ವಸ್ಥ ವ್ಯಕ್ತಿ ಹೇಳಿದ್ದರು. ಅವರು ಹೇಳಿದ ಮಾತುಗಳು ಇಂದು ಕಣ್ಣೆದುರಿಗೆ ಇದೆ, ಅವರು ಮನುಷ್ಯ ತನ್ನ ಸ್ವಾರ್ಥದಿಂದಾಗಿ ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ, ಗುಡ್ಡ ಕುಸಿಯಲಿದೆ, ಹೆಣಗಳು ನೀರಿನಲ್ಲಿ ತೇಲಿ ಬರಲಿದೆ ಎಂದೆಲ್ಲಾ ಹೇಳಿದ್ದರು ಅದು ಅಕ್ಷರಶಃ ನಿಜವಾಗಿದೆ.

ಆ ವಿಡಿಯೋ ಮಲಯಾಳಂ ಭಾಷೆಯಲ್ಲಿದೆ, ಅವರು ಈ ರೀತಿ ಹೇಳುತ್ತಾರೆ ನೋಡಿ:
“ಸಮಯವಿಲ್ಲ, ಯಾರಿಗೂ ಸಮಯವಿಲ್ಲ, ಏನಕ್ಕೂ ಸಮಯವಿಲ್ಲ… ಎಲ್ಲರ ತುಂಬಾನೆ ಬ್ಯುಸಿ, ಹಣ ಮಾಡುವ ಬ್ಯುಸಿ, ಕಂತೆ-ಕಂತೆ ಹಣ ಮಾಡಿ ದೊಡ್ಡ ಬಿಲ್ಡಿಂಗ್ ಮಾಡಿ ಅದರೊಳಗೆ ಇಟ್ಟುಕೊಳ್ಳಿ ಆಯ್ತಾ, ಆ ಗುಡ್ಡ ಒಡೆದರೆ ನೀರು ಬರುತ್ತದೆ, ಸಾವು ನೀರಿನ ಜೊತೆಗೆ ಬರುತ್ತದೆ, ಅದರಲ್ಲಿ ಎಲ್ಲಾ ನಾಶವಾಗುತ್ತದೆ, ನೀನು ನಾಶವಾಗುತ್ತೀಯ, ನಿನ್ನ ಕುಟುಂಬದವರು ನಾಶವಾಗುತ್ತಾರೆ, ಊರಿನವರು ನಾಶವಾಗುತ್ತಾರೆ, ಹೀಗೆ ಎಲ್ಲರೂ ನಾಶವಾಗುತ್ತಾರೆ, ನೀನು ಇದುವರೆಗೆ ಮಾಡಿಟ್ಟ ಸಕಲ ಸಂಪತ್ತು ಆ ನೀರಿನಡಿಯಲ್ಲಿ, ಆ ಕೆಸರಿನಲ್ಲಿ ಹೂತು ಹೋಗುತ್ತದೆ, ಅದರ ಮೊದಲು ತಡೆಯಲು ನೋಡು, ಏನಾದರೂ ಮಾಡಿ ಈ ಅನಾಹುತ ತಡೆಯಲು ನೋಡು… ಮುಸ್ಲಿಂ ಸಾಯುತ್ತಾನೆ, ಹಿಂದೂ ಸಾಯುತ್ತಾನೆ, ಕ್ರಿಶ್ಚಿಯನ್‌ ಸಾಯುತ್ತಾನೆ, ಬಡವನೂ ಸಾಯುತ್ತಾನೆ, ಶ್ರೀಮಂತನು ಸಾಯುತ್ತಾನೆ, ಹೋಗಿ ತಡೆಯಿರಿ, ಇಲ್ಲದಿದ್ದರೆ ಒಂದು ದಿವಸ ನೀರಿನಲ್ಲಿ ಲಕ್ಷಗಟ್ಟಲೆ ಹೆಣಗಳು ತೇಲುವುದನ್ನು ಕಾಣಬಹುದು, ಅದಕ್ಕೂ ಮುನ್ನ ತಡೆಯಿರಿ, ಯಾರಿಗೆ ಯಾವುದಕ್ಕೂ ಸಮಯವಲ್ಲ…” ಹೀಗೆ ಹೇಳಿ ಆ ವ್ಯಕ್ತಿ ವ್ಯಂಗ್ಯ ಅಣಕಿಸಿ ನಗುವ ಈ ವೀಡಿಯೋ ವೈರಲ್ ಆಗಿದೆ. ಆ ಮನುಷ್ಯ ಹೇಳಿದ್ದು ನಿಜವಾಗಿದೆ

ಇಂದು ವಯನಾಡ್‌ನ ಆ ಭಾಗದ ಜನರ ಪರಿಸ್ಥಿತಿ ನೋಡುವಾಗ ನಮ್ಮೆಲ್ಲರ ಹೃದಯ ಚುರ್‌ ಅನಿಸುತ್ತೆ. ನಮ್ಮೆಲ್ಲರ ಭವಿಷ್ಯ ಕೂಡ ಕಣ್ಮುಂದೆ ಬರುವುದು. ಹೌದು ನಾವೆಲ್ಲಾ ತುಂಬಾನೇ ಬ್ಯುಸಿ ಅಲ್ವಾ? ನಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಕೂಡ ಸಮಯವಿಲ್ಲ. ಆದರೆ ನಾವು ಕೂಡ ಬದಲಾಗದ ಸಮಯವಿದು. ನಾಳೆ ಬದುಕು ಗೊತ್ತಿಲ್ಲ, ನಾಳೆಯ ಬದುಕಿಗೆ ಇಂದಿನ ಖುಷಿ ಹಾಳು ಮಾಡದೆ ಇರೋಣ, ಪ್ರಕೃತಿ ರಕ್ಷಣೆ ಮಾಡೋಣ…

ಮನುಷ್ಯ ಮಾಡಿದ ತಪ್ಪುಗಳಿಂದಲೇ ಇಂದು ಪ್ರಕೃತಿ ಮನುಷ್ಯನನ್ನು ಕಾಡುತ್ತಿದೆ. ಇಲ್ಲಿ ವಯನಾಡ್‌ನ ಬಗ್ಗೆ ಮಾತ್ರ ಹೇಳುತ್ತಿಲ್ಲ, ದೇಶದ ಹಲವು ಕಡೆ ಪ್ರಕೃತಿ ವಿಕೋಪಗಳು ಉಂಟಾಗುತ್ತಿದೆ, ಮನುಷ್ಯ ಅಬಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಪ್ರಕೃತಿಗೆ ಹಾನಿ ಮಾಡುತ್ತಲೇ ಇದ್ದಾನೆ, ಇದರ ಪರಿಣಾಮ ಕಾಡುಗಳು ನಾಶವಾಗುತ್ತಿದೆ, ಬೆಟ್ಟ-ಗುಡ್ಡದ ಮೇಲೆ ದೊಡ್ಡ-ದೊಡ್ಡ ಬಿಲ್ಡಿಂಗ್‌ಗಳು, ರೆಸಾರ್ಟ್‌, ಹೋಂ ಸ್ಟೇ ಅಂತ ತಲೆ ಎತ್ತಿವೆ, ಇದರಿಂದ ಆ ಭಾಗದಲ್ಲಿ ಮಣ್ಣುಗಳು ಸಡಿಲವಾಗಿದೆ, ರಸ್ತೆ ಅಗಲೀಕರಣಕ್ಕೆ ಬೆಟ್ಟ- ಗುಡ್ಡಗಳನ್ನು ಕತ್ತರಿಸಲಾಗುತ್ತಿದೆ, ಇದರಿಂದ ಕೂಡ ಮಣ್ಣು ಸಡಿಲವಾಗುತ್ತಿದೆ.

ಭಾರೀ ಮಳೆ ಬಂದಾಗ ನೀರಿನ ಒತ್ತಡ ತಡೆಯಲು ಬೆಟ್ಟ-ಗುಡ್ಡಗಳಿಗೆ ಸಾಧ್ಯವಾಗದೆ ಈ ರೀತಿಯ ಅಪಾಯಗಳು ಸಂಭವಿಸುತ್ತಿದೆ.

Leave a Comment

Your email address will not be published. Required fields are marked *