Ad Widget .

ವಯನಾಡ್ ಭೂಕುಸಿತ| ಮೃತರ ಸಂಖ್ಯೆ 254ಕ್ಕೆ ಏರಿಕೆ| 1592 ಮಂದಿಯ ರಕ್ಷಣೆ

ಸಮಗ್ರ ನ್ಯೂಸ್: ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ಈವರೆಗೆ 192 ಮಂದಿ ನಾಪತ್ತೆಯಾಗಿದ್ದರೆ, 1,592 ಜನರನ್ನು ರಕ್ಷಣೆ ಮಾಡಲಾಗಿದೆ.

Ad Widget . Ad Widget .

8 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇದ್ರ ಸ್ಥಾಳಂತರಿಸಲಾಗಿದೆ. 3,332 ಪುರುಷರು ಹಾಗೂ 3398 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 82 ನಿರಾಶ್ರಿತರ ಶಿಬಿರವನ್ನು ತೆರೆಯಲಾಗಿದೆ. 8 ಕ್ಯಾಂಪ್ ಅನ್ನು ಚೋರ್ ಮಂಡಲಾದಲ್ಲಿ ಓಪನ್ ಮಾಡಲಾಗಿದೆ.

Ad Widget . Ad Widget .

ಈವರೆಗೆ 1884 ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗುಡ್ಡ ಕುಸಿತದಲ್ಲಿ ಸಂತ್ರಸ್ತರಾದಂತವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತ ವ್ಯವಸ್ಥೆಯನ್ನು ಕೇರಳ ಸರ್ಕಾರ, ಹೊರ ರಾಜ್ಯಗಳು ಮಾಡುತ್ತಿವೆ.

ಘಟನಾ ಸ್ಥಳದಲ್ಲಿ ಮುಂದುವರೆದಿರುವ ಮಳೆ, ಪ್ರತಿಕೂಲ ಪರಿಸ್ಥಿತಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕಕ್ಕೆ ಕಾರಣವಾಗಿದೆ. 4 ಗ್ರಾಮಗಳ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿರುವ ಕಾರಣ, ಸಾವಿನ ಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವ ದೊಡ್ಡ ಆತಂಕ ಕಾಡಿದೆ. ಈ ನಡುವೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಯನಾಡಿಗೆ ಭೇಟಿ ನೀಡಲಿದ್ದಾರೆ. ಗುರುವಾರ
ನಾಲ್ಕೂ ಗ್ರಾಮಗಳನ್ನೂ ತಲುಪಲು ರಕ್ಷಣಾ ತಂಡಗಳು ಬುಧವಾರದ ವೇಳೆಗೆ ಯಶಸ್ವಿಯಾಗಿದ್ದು, ಎಲ್ಲೆಂದರಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳು, ಮನೆ, ಕಟ್ಟಡ, ಅರಣ್ಯ, ಕೆಸರಿನಲ್ಲಿ ಶವಗಳು ಸಿಕ್ಕಿಬಿದ್ದಿರುವ ದೃಶ್ಯಗಳು ಕಾಣಸಿಕ್ಕಿವೆ. ಈವರೆಗೂ 250ಕ್ಕೂ ಹೆಚ್ಚು ಜನರು ದುರ್ಘಟನೆಗೆ ಬಲಿಯಾಗಿದ್ದು ಖಚಿತಪಟ್ಟಿದೆ.

ಈ ಪೈಕಿ 130 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 75 ಶವಗಳ ಗುರುತು ಪತ್ತೆಯಾಗಿದ್ದು, ಅವುಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್‌ನ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮುರಿದು ಬಿದ್ದ ಮನೆ, ಕಟ್ಟಡಗಳ ಅಡಿಯಲ್ಲಿ ಜನರ ಪತ್ತೆಗೆ ಹುಡುಕಾಟ ಮುಂದುವರೆಸಿವೆ. ಮನೆ, ಕೆಸರೊಳಗೆ ಸಿಕ್ಕಿಬಿದ್ದಿರಬಹುದಾದ ವ್ಯಕ್ತಿಗಳ ಪತ್ತೆಗೆ ‘ಇಂಟೆಲಿಜೆಂಟ್ ಬರೀಡ್ ಆಪ್ಟೆಕ್ಟ್ ಡಿಟೆಕ್ಷನ್ ಸಿಸ್ಟಮ್’ ಅನ್ನು ಬಳಸಲಾ ಗುತ್ತಿದೆ. ಅಲ್ಲದೆ ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ಅಗತ್ಯವಾದ ಬೃಹತ್ ಯಂತ್ರಗಳನ್ನು ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿದೆ.

ಸಂಪರ್ಕ ಕಡಿತಗೊಂಡ ಗ್ರಾಮಗಳ ನಡುವೆ ತುರ್ತು ಸಂಪರ್ಕ ಕಲ್ಪಿಸಲು ಅಗತ್ಯವಾದ ತಾತ್ಕಾಲಿಕ ಸೇತುವೆಯನ್ನು ಸೇನೆ ಬೆಂಗಳೂರಿನಿಂದ ವಯನಾಡಿಗೆ ರಸ್ತೆ ಮೂಲಕ ಸಾಗಿಸುತ್ತಿದೆ. ಮಂಗಳವಾರ ಭೂಕುಸಿದ ವೇಳೆ ಹರಿದುಬಂದ ಭಾರೀ ಕೆಸರಿನ ಪರಿಣಾಮ ಜನರು ತಾವು ಕುರ್ಚಿಯಲ್ಲಿ ಕುಳಿತ, ಮಂಚದಲ್ಲಿ ಮಲಗಿದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಕ್ಷಣಾ ಕಾರ್ಯಚರಣೆಗೆ ತೆರಳಿದ್ದ ಸ್ಥಳೀಯರು ಇಂಥ ದೃಶ್ಯಗಳನ್ನು ಕಂಡು ಕಣ್ಣೀರಿಟ್ಟಿದ್ದಾರೆ.

Leave a Comment

Your email address will not be published. Required fields are marked *