July 2024

ಮಂಗಳೂರು-ಮಡಂಗಾವ್‌ ವಂದೇ ಭಾರತ್‌ ರೈಲು/ ಇನ್ಮುಂದೆ ಉಡುಪಿ ಮತ್ತು ಕಾರವಾರ ನಿಲ್ದಾಣದಲ್ಲಿ ನಿಲುಗಡೆ

ಸಮಗ್ರ ನ್ಯೂಸ್‌: ಅತ್ಯಂತ ವೇಗದ ರೈಲು ಎಂದು ಕರೆಯಲ್ಪಡುವ ವಂದೇ ಭಾರತ್ ರೈಲು ಪ್ರಸ್ತುತ ದೇಶದ ಹಲವು ಭಾಗಗಳಲ್ಲಿ ಸಂಚರಿಸುತ್ತಿದ್ದು, ವೇಗವನ್ನು ಹೆಚ್ಚಿಸಲು ಈ ರೈಲುಗಳು ಕಡಿಮೆ ನಿಲ್ದಾಣಗಳನ್ನು ಹೊಂದಿದ್ದವು.ಆದರೆ, ಪ್ರಯಾಣಿಕರ ಅನುಕೂಲವನ್ನು ಪರಿಗಣಿಸಿ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ವಂದೇ ಭಾರತ್ ರೈಲುಗಳನ್ನು ನಿಲುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಇದೀಗ ಕೊಂಕಣ ರೈಲ್ವೇ ನಿಗಮದ ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸಿದ್ದು, ಮಂಗಳೂರು ಸೆಂಟ್ರಲ್ ಸ್ಟೇಷನ್ ನಿಂದ ಮಡಂಗಾವ್ ವರೆಗೆ ವಾರದಲ್ಲಿ ಆರು ದಿನ ಸಂಚರಿಸುವ ವಂದೇ ಭಾರತ್ ರೈಲನ್ನು […]

ಮಂಗಳೂರು-ಮಡಂಗಾವ್‌ ವಂದೇ ಭಾರತ್‌ ರೈಲು/ ಇನ್ಮುಂದೆ ಉಡುಪಿ ಮತ್ತು ಕಾರವಾರ ನಿಲ್ದಾಣದಲ್ಲಿ ನಿಲುಗಡೆ Read More »

ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣ/ ಇಂದು ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ

ಸಮಗ್ರ ನ್ಯೂಸ್‌: ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಮೋದಿ ಅವರು ಅತ್ಯಂತ ಕಾರ್ಯತಂತ್ರದ ಮತ್ತು ಪ್ರಮುಖ ಶಿಂಕುಲ್ ಲಾ ಸುರಂಗವನ್ನು ಉದ್ಘಾಟಿಸಲಿದ್ದಾರೆ, ಇದು ಎಲ್ಲಾ ಋತುಗಳಲ್ಲಿ ಪರ್ಯಾಯ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಲಡಾಖ್ ಗೆ ಪಡೆಗಳ ಕ್ಷಿಪ್ರ ಚಲನೆಯನ್ನು ಸುಗಮಗೊಳಿಸುತ್ತದೆ. ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲಡಾಖ್ ಲೆಫ್ಟಿನೆಂಟ್ ಗವರ್ನರ್ ಬ್ರಿಗೇಡಿಯರ್ (ಡಾ) ಬಿ.ಡಿ. ಮಿಶ್ರಾ (ನಿವೃತ್ತ). ಸಿಡಿಎಸ್ ಮತ್ತು ಮೂರು ಸೇನಾ

ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣ/ ಇಂದು ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ Read More »

ಪ್ಯಾರಿಸ್ ಒಲಿಂಪಿಕ್ಸ್ ೨೦೨೪/ ಇಂದು ಉದ್ಘಾಟನಾ ಸಮಾರಂಭ

ಸಮಗ್ರ ನ್ಯೂಸ್‌: ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನ ಸಮಾರಂಭ ಇಂದು ಫ್ರಾನ್ಸ್‌ನ ಮಹಾನದಿ ಸೀನ್ ಮೇಲೆ ನಡೆಯಲಿದೆ. ಭಾರತದ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಅವರು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಜತೆ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಸಾಗಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡ 84ನೇ ರಾಷ್ಟ್ರವಾಗಿ ಈ ಬಾರಿ ಕಾಣಿಸಿಕೊಳ್ಳಲಿದೆ. ನದಿಯ ಮೇಲೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 3,000 ಮಂದಿ ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಫ್ರೆಂಚ್

ಪ್ಯಾರಿಸ್ ಒಲಿಂಪಿಕ್ಸ್ ೨೦೨೪/ ಇಂದು ಉದ್ಘಾಟನಾ ಸಮಾರಂಭ Read More »

ನೂತನ ಫೀಚರ್‌ ಪರಿಚಯಿಸಿದ ಗೂಗಲ್‌ ಮ್ಯಾಪ್‌

ಸಮಗ್ರ ನ್ಯೂಸ್‌: ಅಮೆರಿಕದ ಮೂಲದ ಗೂಗಲ್‌ ಭಾರತೀಯರಿಗೆ ತನ್ನ ಗೂಗಲ್‌ ಮ್ಯಾಪ್‌ನಲ್ಲಿ ಒಂದಿಷ್ಟು ಹೊಸ ಆಯ್ಕೆಗಳನ್ನು ಪರಿಚಯಿಸಿದ್ದು, ಎಲೆಕ್ಟ್ರಿಕ್‌ ಚಾರ್ಜಿಂಗ್‌ ಪಾಯಿಂಟ್‌ ಎಲ್ಲಿದೆ, ಫ್ಲೈಓವರ್‌ ಯಾವುದೋ ಕಾರಣಕ್ಕೆ ಮುಚ್ಚಿದ್ದರೆ ಅದರ ಮಾಹಿತಿ, ಮೆಟ್ರೋ ಟಿಕೆಟ್‌ ಖರೀದಿ, ನಾಲ್ಕು ಚಕ್ರಗಳ ವಾಹನಗಳಿಗೆ ಕಿರಿದಾದ ದಾರಿ ತಪ್ಪಿಸಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧರಿತ ಆಯ್ಕೆಗಳನ್ನು ಪರಿಚಯಿಸಿದೆ. ಅಲ್ಲದೆ ಡೆವಲಪರ್‌ಗಳಿಗೆ ಗೂಗಲ್‌ ಮ್ಯಾಪ್‌ ಫ್ಲ್ಯಾಟ್‌ಫಾರಂ ಬಳಕೆ ಶುಲ್ಕವನ್ನು ಶೇ.70ರಷ್ಟು ಕಡಿತ ಕೂಡಾ ಮಾಡಿದೆ. ಮೊದಲ ಹಂತದಲ್ಲಿ ಈ ಸೇವೆಗಳು ಬೆಂಗಳೂರು ಸೇರಿದಂತೆ

ನೂತನ ಫೀಚರ್‌ ಪರಿಚಯಿಸಿದ ಗೂಗಲ್‌ ಮ್ಯಾಪ್‌ Read More »

ರಾಜ್ಯಾದ್ಯಂತ ಅಬ್ಬರಿಸುತ್ತಿರುವ ಮಳೆ| ಈ ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಕೊಡಗು, ಚಿಕ್ಕಮಗಳೂರು, ಹಾವೇರಿ, ಧಾರವಾಡ ಮುಂತಾದ ಜಿಲೆಗಳಲ್ಲಿ ಭಾರೀ ಮಳೆಯ ಹಿನ್ನೆಲೆ ಶಾಲಾ ಪಿಯು ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜೆಲ್ಲೆಯ ಎಲ್ಲಾ ಅಂಗನವಾಡಿ, ಶಾಶೆ, ಪಿಯು ಕಾಲೇಜುಗಳಿಗೆ ದಿನಾಂಕ 26-7-2024 ರಂದು ರಜೆ ಘೋಷಿಸಲಾಗಿದೆ. ಕೊಡಗಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಅಧಿಕಗೊಂಡಿದೆ. ಇದರಿಂದ ಸಂಚಾರಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದ್ದು ಅಲ್ಲಲ್ಲಿ ಮರ

ರಾಜ್ಯಾದ್ಯಂತ ಅಬ್ಬರಿಸುತ್ತಿರುವ ಮಳೆ| ಈ ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ Read More »

ಕೊಡಗಿನಲ್ಲಿ ಮುಂದುವರಿದ ವರ್ಷಧಾರೆ| ಜು.26ರಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್ : ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ಅಂಗನವಾಡಿ ಮತ್ತು ಶಾಲಾ, ಕಾಲೇಜುಗಳಿಗೆ(ಪಿಯುಸಿ) ಜು.26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ. ಅಲ್ಲಲ್ಲಿ ಮಳೆ ಕಾರಣದಿಂದ ಅವಘಡಗಳು, ಹಾನಿ ಸಂಭವಿಸಿದೆ.

ಕೊಡಗಿನಲ್ಲಿ ಮುಂದುವರಿದ ವರ್ಷಧಾರೆ| ಜು.26ರಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Read More »

ಶಿರೂರು ಗುಡ್ಡ ದುರಂತ ಪ್ರಕರಣ| ಕಾಣೆಯಾಗಿದ್ದ ತಮಿಳುನಾಡಿನ ಚಾಲಕನ ಅರ್ಧ ಶವ ಪತ್ತೆ

ಸಮಗ್ರ ನ್ಯೂಸ್: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತದೇಹ ಪತ್ತೆಯಾಗಿದ್ದು, ಡಿಎನ್​ಎ ವರದಿಯಲ್ಲಿ ಶರವಣನ್ ಮೃತದೇಹ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ವೇಳೆ ಕಳೆದ ನಾಲ್ಕು ದಿನಗಳ ಹಿಂದೆ ಗಂಗೆಕೊಳದಲ್ಲಿ ಹೊಟ್ಟೆಯ ಕೆಳಭಾಗದ ದೇಹ ಮಾತ್ರ ಪತ್ತೆಯಾಗಿತ್ತು. ಇದೀಗ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತ ದೇಹ ಎಂದು ಉತ್ತರ ಕನ್ನಡ ಎಸ್​ಪಿ ನಾರಾಯಣ್ ದೃಢ ಪಡಿಸಿದ್ದಾರೆ. ಗುಡ್ಡ ಕುಸಿತವಾದ ಪಕ್ಕದಲ್ಲೆ

ಶಿರೂರು ಗುಡ್ಡ ದುರಂತ ಪ್ರಕರಣ| ಕಾಣೆಯಾಗಿದ್ದ ತಮಿಳುನಾಡಿನ ಚಾಲಕನ ಅರ್ಧ ಶವ ಪತ್ತೆ Read More »

ಭಾರೀ ಮಳೆ ಹಿನ್ನೆಲೆ| ಹಾಸನ ಜಿಲ್ಲೆಯ 6 ತಾಲೂಕಿನ ‌ಶಾಲೆಗಳಿಗೆ ರಜೆ ಘೋಷಣೆ

ಹಾಸನ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಆರು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ನಾಳೆ (ಜು. ೨೬) ರಜೆ ಘೋಷಣೆ ಮಾಡಲಾಗಿದೆ. ಜು.26ರಂದು ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಹಾಗೂ ಅರಕಲಗೂಡು ತಾಲೂಕುಗಳಿಗೆ ರಜೆ ಘೋಷಿಸಿ ಡಿಡಿಪಿಐ ಹೆಚ್.ಕೆ.ಪಾಂಡು ಆದೇಶ ಹೊರಡಿಸಿದ್ದಾರೆ. ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗುತ್ತಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ‌ಯಲ್ಲಿ ಆರು ಕ್ರಸ್ಟ್ ಗೇಟ್‌ಗಳ ಮೂಲಕ 65 ಕ್ಯೂಸೆಕ್ ನೀರು

ಭಾರೀ ಮಳೆ ಹಿನ್ನೆಲೆ| ಹಾಸನ ಜಿಲ್ಲೆಯ 6 ತಾಲೂಕಿನ ‌ಶಾಲೆಗಳಿಗೆ ರಜೆ ಘೋಷಣೆ Read More »

ಮಂಗಳೂರು: ತಡೆಗೋಡೆಗಳು ಬಿದ್ದು ಜೀವಹಾನಿಯಾಗುತ್ತಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲ: ಎಸ್‌ಡಿಪಿಐ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ತಡೆಗೋಡೆಗಳು ಕುಸಿದು ಬಿದ್ದು ಜೀವಹಾನಿಗಳು ಸಂಭವಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ‌‌ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಉಳ್ಳಾಲ ತಾಲೂಕಿನ ಕುತ್ತಾರು ಸಮೀಪ ತಡೆಗೋಡೆ ಬಿದ್ದು ಒಂದೇ ಕುಟುಂಬದ ನಾಲ್ಕು ಸದಸ್ಯರು ಮೃತಪಟ್ಟ ಬಳಿಕವೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ. ಅದರ ನಂತರ

ಮಂಗಳೂರು: ತಡೆಗೋಡೆಗಳು ಬಿದ್ದು ಜೀವಹಾನಿಯಾಗುತ್ತಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲ: ಎಸ್‌ಡಿಪಿಐ Read More »

BMTC ಬಸ್ ನಲ್ಲಿ ಹಿಂದಿ ಬೋರ್ಡ್ ಅಳವಡಿಕೆ: ಸಾರ್ವಜನಿಕರಿಂದ ಆಕ್ರೋಶ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಎಂ‌ಟಿಸಿ ಬಸ್‌ನಲ್ಲಿ ಹಿಂದಿ ಬೋರ್ಡ್ ಹಾಕಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಎಂಟಿಸಿಗೆ (BMTC Bus) ಹಿಂದಿ ಮೇಲಿನ ಪ್ರೇಮ ಹೆಚ್ಚಾಗಿದ್ಯಾ? ಈ ಹಿಂದಿ ಭಾಷೆ ಬೋರ್ಡ್‌ ಹಿಂದಿರುವ ವಿಜ್ಞಾನಿ‌ ಯಾರು ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಎಂಟಿಸಿಯನ್ನು ಟ್ಯಾಗ್ ಮಾಡಿ ಪೋಸ್ಟ್‌ ಮಾಡಿರುವ ನೆಟ್ಟಿಗರು, ಹಿಂದಿ ಹೇರಿಕೆ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಎಕ್ಸ್ ಖಾತೆಯಲ್ಲಿ ವೈರಲ್ ಆಗಿರುವ ವಿಡಿಯೊ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ವಿಡಿಯೊ

BMTC ಬಸ್ ನಲ್ಲಿ ಹಿಂದಿ ಬೋರ್ಡ್ ಅಳವಡಿಕೆ: ಸಾರ್ವಜನಿಕರಿಂದ ಆಕ್ರೋಶ Read More »