July 2024

ಧರ್ಮಸ್ಥಳ: ಎರಡು ವರ್ಷದ ಹಸುಗೂಸನ್ನು ಬಿಟ್ಟು ಮಹಿಳೆ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಎರಡು‌ ವರ್ಷದ‌‌ ಮಗುವಿನ ತಾಯಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ತಂಗಡಿ‌ ತಾಲೂಕಿನ ಧರ್ಮಸ್ಥಳ‌ ಗ್ರಾಮದ ಜೋಡುಸ್ಥಾನ ಎಂಬಲ್ಲಿ ‌ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ರಕ್ಷಿತಾ ಜೈನ್ (26 ವ) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ನಿತ್ಯನೂತನ ಭಜನಾ ಮಂದಿರ ಬಳಿಯ ನಿವಾಸಿ ರಕ್ಷಿತಾ ಜೈನ್ರವರು ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜು.2ರಂದು ಘಟನೆ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.

ಧರ್ಮಸ್ಥಳ: ಎರಡು ವರ್ಷದ ಹಸುಗೂಸನ್ನು ಬಿಟ್ಟು ಮಹಿಳೆ ಆತ್ಮಹತ್ಯೆಗೆ ಶರಣು Read More »

ಭಾರತದ ವಿರುದ್ಧ ಟಿ-20 ಸರಣಿ/ ಜಿಂಬಾಬ್ವೆ ತಂಡ ಪ್ರಕಟ

ಸಮಗ್ರ ನ್ಯೂಸ್‌: ಭಾರತ ಮತ್ತು ಜಿಂಬಾಬೈ ನಡುವೆ ಜುಲೈ 6 ರಿಂದ ನಡೆಯಲಿರುವ ಟಿ 20 ಸರಣಿಗಾಗಿ ಜಿಂಬಾಬೈ ಕ್ರಿಕೆಟ್ ಸಂಸ್ಥೆ ತನ್ನ ತಂಡವನ್ನು ಪ್ರಕಟಿಸಿದೆ. ಅನುಭವಿ ಅಲ್‌ರೌಂಡರ್ ಸಿಕಂದರ್ ರಾಜಾ ಅವರನ್ನು ಜಿಂಬಾಬೈ ತಂಡದ ನಾಯಕರನ್ನಾಗಿ ಘೋಷಿಸಲಾಗಿದ್ದು, ತಂಡದಲ್ಲಿ ಬೆಲ್ಲಿಯಂ ಮೂಲದ ಆಟಗಾರ ಅಂಟಮ್ ನಖಿ ಕೂಡ ಸೇರಿಕೊಂಡಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ನಖಿಯ ಭಾಗವಹಿಸುವಿಕೆ ಅವರ ಪೌರತ್ವದ ಸ್ಥಾನಮಾನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಜಿಂಬಾಬೈ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಲ್ಲಿಯಂನ

ಭಾರತದ ವಿರುದ್ಧ ಟಿ-20 ಸರಣಿ/ ಜಿಂಬಾಬ್ವೆ ತಂಡ ಪ್ರಕಟ Read More »

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ/ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ

ಸಮಗ್ರ ನ್ಯೂಸ್‌: ಯಕ್ಷಗಾನ ಅಭಿಯಾನಕ್ಕಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ತಂಡ ಜು. 9ರಂದು ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಮೆರಿಕ ಇದರ ಆಯೋಜನೆಯಯಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದಲ್ಲಿ ಅಮೆರಿಕದ 20 ರಾಜ್ಯಗಳಲ್ಲಿ ಈ ತಂಡ ಯಕ್ಷಗಾನ ಪ್ರದರ್ಶನ ನೀಡಲಿದೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ ಟ್ರಸ್ಟ್‌ನ ಯುಎಸ್ಎ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ ,

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ/ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ Read More »

ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಮನವಿ

ಸಮಗ್ರ ನ್ಯೂಸ್: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ್ಯಂತ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರ 80 ರಿಂದ 65% ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ನೀಡಬೇಕು, ಡಾಕ್ಟರ್ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಬೇಕು, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಸತ್ಯಾಗ್ರಹ ಹಾಗೂ ಹೋರಾಟವನ್ನು ಹಮ್ಮಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೂಲಕ

ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಮನವಿ Read More »

ಉಪ್ಪಿನಂಗಡಿ: ದಾರಿ‌ ತಪ್ಪಿಸಿದ ಗೂಗಲ್ ಮ್ಯಾಪ್| ಆಸ್ಪತ್ರೆಗೆ ಹೋಗಬೇಕಿದ್ದ ಕಾರು ಹೊಳೆ ಪಾಲು

ಸಮಗ್ರ ನ್ಯೂಸ್: ಡಿಜಿಟಲ್‌ ಯುಗದಲ್ಲಿ ದಾರಿ ಗೊತ್ತಾಗದಿದ್ದರೆ ಗೂಗಲ್‌ ಮ್ಯಾಪ್‌ ಬಳುವುದು ಮಾಮೂಲು. ಈಗಂತೂ ಬಹುತೇಕ ಎಲ್ಲರೂ ಗೂಗಲ್‌ ಮ್ಯಾಪ್‌ ನೋಡಿಕೊಂಡೇ ಗೊತ್ತಿಲ್ಲದ ಸ್ಥಳಗಳಿಗೆ ಬೈಕ್‌, ಕಾರುಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ಮ್ಯಾಪ್‌ ನಮ್ಮನ್ನು ದಾರಿ ತಪ್ಪಿಸುವುದು ಉಂಟು. ಈ ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ ಕಾರು ನದಿಗೆ ಬಿದ್ದ, ಹೊಂಡಕ್ಕೆ ಬಿದ್ದ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಆಸ್ಪತ್ರೆಯ ಕಡೆಗೆ ಹೋಗಬೇಕಿದ್ದ ಯುವಕರು ಗೂಗಲ್‌ ಮ್ಯಾಪ್‌

ಉಪ್ಪಿನಂಗಡಿ: ದಾರಿ‌ ತಪ್ಪಿಸಿದ ಗೂಗಲ್ ಮ್ಯಾಪ್| ಆಸ್ಪತ್ರೆಗೆ ಹೋಗಬೇಕಿದ್ದ ಕಾರು ಹೊಳೆ ಪಾಲು Read More »

ಸುಳ್ಯ: ಎರಡು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ ‌ಭೇದಿಸಿದ ಬೆಳ್ಳಾರೆ ಪೊಲೀಸರು| ಬೆಳ್ತಂಗಡಿ ಮೂಲದ ಯುವಕ ಅರೆಸ್ಟ್

ಸಮಗ್ರ ನ್ಯೂಸ್: ಎರಡು ವರ್ಷಗಳ ಹಿಂದೆ ಬೆಳ್ಳಾರೆ ಠಾಣೆ ವ್ಯಾಪ್ತಿಯ ಎಡಮಂಗಲದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ, ಬೆಳ್ತಂಗಡಿ ಮೂಲದ ಶರತ್‌ (26) ಅವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. 2022ರ ಮಾರ್ಚ್‌ನಲ್ಲಿ ರಾತ್ರಿ ಸಮಯ ಕಡಬ ತಾಲೂಕಿನ ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿನ ಮನೆಯೊಂದರ ಬಾಗಿಲು ಮುರಿದು ನುಗ್ಗಿದ ಆರೋಪಿ ಮನೆಯೊಳಗಿದ್ದ ಕಬ್ಬಿಣದ ಕಪಾಟಿನ ಬೀಗದ ಕೀ ಬಳಸಿ ಕಪಾಟು ತೆರೆದು 30 ಸಾವಿರ ನಗದು ಹಾಗೂ 1.48 ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಅಂದಾಜು 1.78

ಸುಳ್ಯ: ಎರಡು ವರ್ಷಗಳ ಹಿಂದಿನ ಕಳ್ಳತನ ಪ್ರಕರಣ ‌ಭೇದಿಸಿದ ಬೆಳ್ಳಾರೆ ಪೊಲೀಸರು| ಬೆಳ್ತಂಗಡಿ ಮೂಲದ ಯುವಕ ಅರೆಸ್ಟ್ Read More »

ಮಂಗಳೂರು: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ| ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಕೈದಿಗಳಿಗೆ ಗಾಯಗಳಾಗಿರುವ ಘಟನೆ ಮಂಗಳೂರು ಜಿಲ್ಲೆಯ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಘರ್ಷಣೆಯಲ್ಲಿ ಇಬ್ಬರು ಕೈದಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಮಂಗಳೂರು ಕಾರಾಗೃಹದ ಎ ಬ್ಯಾರಕ್ನಲ್ಲಿ ನಡೆದ ಘಟನೆಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಲ್ಲೆ ಮಾಡಿದ ತಂಡದ ಸೆಲ್ ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಇದೀಗ ಪೊಲೀಸರು

ಮಂಗಳೂರು: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ| ಇಬ್ಬರು ಗಂಭೀರ Read More »

ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಜಾರಿ| ಏನೆಲ್ಲಾ ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದು ಮಾಡಿದೆ. ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೆ ಒಳಪಡಿಸಲಾಗಿದೆ. . ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು (New Laws) ಜುಲೈ 1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ.ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ

ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಜಾರಿ| ಏನೆಲ್ಲಾ ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಲೋಕಸಭೆಯಲ್ಲಿ ಮೋದಿ – ರಾಗಾ ಟಾಕ್ ಫೈಟ್| ಹಿಂದೂ ಎಂದು ಕರೆಸಿಕೊಳ್ಳುವವರು ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತಾಡ್ತಾರೆ ಎಂದ ರಾಹುಲ್!!

ಸಮಗ್ರ ನ್ಯೂಸ್: ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರ, ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಬಿಜೆಪಿಯನ್ನ ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಕೋಲಾಹಲಕ್ಕೆ ಕಾರಣರಾದರು. ರಾಹುಲ್ ಗಾಂಧಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಚಿತ್ರಿಸುವುದು ಗಂಭೀರ ವಿಷಯ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ತುಂಬಾ ಗಂಭೀರವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಲೋಕಸಭೆಯಲ್ಲಿ ಮೋದಿ – ರಾಗಾ ಟಾಕ್ ಫೈಟ್| ಹಿಂದೂ ಎಂದು ಕರೆಸಿಕೊಳ್ಳುವವರು ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತಾಡ್ತಾರೆ ಎಂದ ರಾಹುಲ್!! Read More »

ಮಹಾರಾಷ್ಟ್ರ: ಭಾನುವಾರದ ರಜಾ ತಂದ ಆಪತ್ತು| ಜಲಪಾತದಲ್ಲಿ ಕೊಚ್ಚಿ ಹೋದ 4 ಮಕ್ಕಳು ‌ಮತ್ತು ಮಹಿಳೆ

ಸಮಗ್ರ ನ್ಯೂಸ್: ಭಾನುವಾರದ ರಜಾ ದಿನವನ್ನು ಪ್ರವಾಸಿ ತಾಣದಲ್ಲಿ ಕಳೆಯಲು ಹೋದ ಕುಟುಂಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಲೋನವಾಲದಲ್ಲಿ ನಡೆದಿದೆ. ಭುಶಿ ಡ್ಯಾಮ್ ಪಕ್ಕದ ಪ್ರಸಿದ್ದ ಪ್ರವಾಸಿ ತಾಣದಲ್ಲಿ ಜಲಪಾತ ಸೇರಿದಂತೆ ಪ್ರಕೃತಿ ಸೌಂದರ್ಯದಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಇದೇ ಪ್ರದೇಶಕ್ಕೆ ತೆರಳಿದ್ದಾರೆ. ಆದರೆ ಏಕಾಏಕಿ ಡ್ಯಾಮ್ ನೀರು ತುಂಬಿ ಹರಿದಿದೆ. ಇದರ ಪರಿಣಾಮ ಮಹಿಳ ಸೇರಿದಂತೆ ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ

ಮಹಾರಾಷ್ಟ್ರ: ಭಾನುವಾರದ ರಜಾ ತಂದ ಆಪತ್ತು| ಜಲಪಾತದಲ್ಲಿ ಕೊಚ್ಚಿ ಹೋದ 4 ಮಕ್ಕಳು ‌ಮತ್ತು ಮಹಿಳೆ Read More »