July 2024

ಮಂಗಳೂರು: ಸಮವಸ್ತ್ರದಲ್ಲೇ ಹಾರೆ ಹಿಡಿದು ರಸ್ತೆ ಗುಂಡಿ ಮುಚ್ಚಿದ ಪೊಲೀಸರು| ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ

ಸಮಗ್ರ ನ್ಯೂಸ್: ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿರುವುದನ್ನು ಮನಗಂಡು ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಹಾರೆ ಹಿಡಿದು ರಸ್ತೆಗಿಳಿದು ರಸ್ತೆ ಗುಂಡಿಗಳನ್ನು ಮುಚ್ಚಿದ ಘಟನೆ ಮಂಗಳೂರು ನಗರದ ಕೆಪಿಟಿಯಲ್ಲಿ ನಡೆದಿದೆ. ಕೆಪಿಟಿಯಲ್ಲಿನ ಹೆದ್ದಾರಿ ಸಂಪೂರ್ಣವಾಗಿ ರಸ್ತೆ ಗುಂಡಿಗಳಿಂದ ಕೂಡಿತ್ತು. ಇದರ ಪರಿಣಾಮವಾಗಿ ವಾಹನ ಸವಾರರು ಈ ಹೆದ್ದಾರಿಯಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು. ಅನೇಕ ಸಲ ಅಪಘಾತಗಳ ನಡೆಯುವುದು ಸ್ವಲ್ಪದರಲ್ಲಿಯೇ ತಪ್ಪಿದ್ದು ಇದನ್ನು ಮನಗಂಡ ಕದ್ರಿ ಸಂಚಾರಿ ಠಾಣಾ ಸಬ್ ಇನ್‌ಸ್ಪೆಕ್ಟರ್ […]

ಮಂಗಳೂರು: ಸಮವಸ್ತ್ರದಲ್ಲೇ ಹಾರೆ ಹಿಡಿದು ರಸ್ತೆ ಗುಂಡಿ ಮುಚ್ಚಿದ ಪೊಲೀಸರು| ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ Read More »

ಹತ್ರಾಸ್ ಕಾಲ್ತುಳಿತ ಪ್ರಕರಣ| ನೂರರ ಗಡಿ ದಾಟಿದ ಸಾವಿನ ಸಂಖ್ಯೆ| ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಅಲ್ಲದೇ, ಹಲವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹತ್ರಾಸ್ ಜಿಲ್ಲೆಯ ಸಿಕಂದರಾ ರಾವು ತಹಸಿಲ್‌ನ ರತಿಭಾನ್‌ಪುರ ಗ್ರಾಮದಲ್ಲಿ ಧಾರ್ಮಿಕ ಬೋಧಕ ಹಾಗೂ ಅವರ ಪತ್ನಿ ಉದ್ದೇಶಿಸಿ ಮಾತನಾಡುತ್ತಿದ್ದ ಸತ್ಸಂಗದ ಕಾರ್ಯಕ್ರಮದಲ್ಲಿ ಈ ಕಾಲ್ತುಳಿತ ಸಂಭವಿಸಿದೆ. ಈ ನಡುವೆ ಆಸ್ಪತ್ರೆಯಲ್ಲಿ ಹೆಣಗಳ ರಾಶಿ ಕಂಡು ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಟಾಹ್ ಜಿಲ್ಲೆಯ ಅವಘರ್

ಹತ್ರಾಸ್ ಕಾಲ್ತುಳಿತ ಪ್ರಕರಣ| ನೂರರ ಗಡಿ ದಾಟಿದ ಸಾವಿನ ಸಂಖ್ಯೆ| ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು Read More »

ಹೂಡಿಕೆದಾರರನ್ನೇ ಬೆಚ್ಚಿಬೀಳಿಸಿದ 8300 ಕೋಟಿ ವಂಚನೆ| ಭಾರತೀಯ ಮೂಲದ ಉದ್ಯಮಿಗೆ 7.6 ವರ್ಷ ಜೈಲು| ಏನಿದು ಪ್ರಕರಣ?

ಸಮಗ್ರ ನ್ಯೂಸ್: ಅಮೆರಿಕದ ಹೂಡಿಕೆದಾರರನ್ನೇ ಬೆಚ್ಚಿಬೀಳಿಸಿದ್ದ 8300 ಕೋಟಿ ರೂ. ಮೌಲ್ಯದ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಗೆ ಅಮೆರಿಕ ನ್ಯಾಯಾಲಯ 7.6 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಔಟ್ ಕಮ್ ಹೆಲ್ತ್ ಕಂಪನಿ ಮಾಲೀಕ, ಮಾಜಿ ಶತಕೋಟ್ಯಾಧಿಪತಿ ಭಾರತೀಯ ಮೂಲದ ಉದ್ಯಮಿ ರಿಷಿ ಶಾಹ್ ಗೆ ಅಮೆರಿಕದ ನ್ಯಾಯಾಲಯ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಗೋಲ್ಡ್ ಮನ್ ಸ್ಯಾಚಸ್, ಗೂಗಲ್ ಮಾತೃ ಸಂಸ್ಥೆಯಾದ ಆಲ್ಫಾಬೆಟ್ ಇಂಕ್, ಇಲಿಯನ್ಸ್ ಗವರ್ನರ್ ಸೇರಿದಂತೆ ಬೃಹತ್ ಕಂಪನಿಗಳ ಹೂಡಿಕೆದಾರರೇ

ಹೂಡಿಕೆದಾರರನ್ನೇ ಬೆಚ್ಚಿಬೀಳಿಸಿದ 8300 ಕೋಟಿ ವಂಚನೆ| ಭಾರತೀಯ ಮೂಲದ ಉದ್ಯಮಿಗೆ 7.6 ವರ್ಷ ಜೈಲು| ಏನಿದು ಪ್ರಕರಣ? Read More »

ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧ| ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಶಾಲಾ ಕಾಲೇಜುಗಳಲ್ಲಿ ಶಾಲಾವಧಿಯಲ್ಲಿ ಮೊಬೈಲ್‌ ಬಳಕೆ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೊಬೈಲ್ ಉಪಯೋಗ ಶಾಲಾ ಕಾಲೇಜುಗಳಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಇದು ಶಾಲಾ ಕಾಲೇಜುಗಳಲ್ಲಿಯ ಶೈಕ್ಷಣಿಕ ವಾತಾವರಣವನ್ನು ಹದಗೆಡಿಸುತ್ತಿದ್ದು, ಇದರ ದುಷ್ಪರಿಣಾಮ ಮಕ್ಕಳ ಮೇಲೆ ಬೀರುತ್ತಿದೆಯಲ್ಲದೇ, ಇದರಿಂದ ಕಲಿಕೆಯ ಅಮೂಲ್ಯ ಸಮಯವನ್ನು ಮೊಬೈಲ್ ಮಾತುಗಾರಿಕೆಯಲ್ಲಿ ವ್ಯಯವಾಗುತ್ತಿದೆಯೆಂಬ ಅಂಶ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೇ ವಿದ್ಯಾರ್ಥಿಗಳು ತರಗತಿಗಳಲ್ಲಿ ಮೊಬೈಲ್ ಬಳಸಿ ಸಂಗೀತ ಕೇಳುವುದು ಆಟವಾಡುವು ಹಾಗೂ ಎಸ್‌ಎಂಎಸ್ ಕಳುಹಿಸುವುದು

ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧ| ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ Read More »

ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ವರ್ಗಾವಣೆ| ನೂತನ ಎಸ್ಪಿಯಾಗಿ ಯತೀಶ್ ಎನ್. ನೇಮಕ

ಸಮಗ್ರ ನ್ಯೂಸ್ : ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ವರ್ಗಾವಣೆಯಾಗಿ ನೂತನ ಎಸ್ಪಿಯಾಗಿ ಯತೀಶ್.ಎನ್ ನೇಮಕವಾಗಿದ್ದಾರೆ. ಮಂಡ್ಯ ಎಸ್ಪಿಯಾಗಿದ್ದ ಯತೀಶ್ ದಕ್ಷಿಣ ಕನ್ನಡಕ್ಕೆ ನೂತನ ಎಸ್ಪಿಯಾಗಿ ನೇಮಕವಾಗಿದ್ದು, ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ರಿಷ್ಯಂತ್‌ ವರ್ಗಾವಣೆಯಾಗಿದ್ದಾರೆ. ಒಂದೇ ವರ್ಷದಲ್ಲಿ ರಿಷ್ಯಂತ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ರಿಷ್ಯಂತ್ 2023ರ ಜೂನ್ ನಲ್ಲಿ ದ.ಕ ಎಸ್ಪಿಯಾಗಿ ನೇಮಕಗೊಂಡಿದ್ದರು.

ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ವರ್ಗಾವಣೆ| ನೂತನ ಎಸ್ಪಿಯಾಗಿ ಯತೀಶ್ ಎನ್. ನೇಮಕ Read More »

ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಚಾಲಕನಿಗೆ ಕೇಸ್, ಚಾಲಕನಿಂದಲೇ ಕಸ ತೆರವು

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದು ಹೋಗಿದ್ದ ವಾಹನವನ್ನು ಪತ್ತೆ ಹಚ್ಚಿ ಕೆಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿದ ಪ್ರಕರಣ ಜು.2 ರಂದು ನಡೆದಿದೆ. ಚಾರ್ಮಾಡಿ ಘಾಟಿಯಲ್ಲಿ ಹಾಸನ ಮೂಲದ ಎಳೆನೀರು ವಾಹನದ ಚಾಲಕ ವಾಹನದಲ್ಲಿದ್ದ ಕಸವನ್ನು ಘಾಟಿಯಲ್ಲಿ ಬಿಸಾಕಿ ಮಂಗಳೂರು ಭಾಗದಿಂದ ಕೊಟ್ಟಿಗೆಹಾರ ಕಡೆಗೆ ತೆರಳುತಿದ್ದ ವೇಳೆ ಚಾರ್ಮಾಡಿ ಘಾಟಿಯಲ್ಲಿ ಗಸ್ತು ತಿರುಗುತ್ತಿದ್ದ ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಚರ್ ಡಿ.ವಿ ರೇಣುಕಾಅದರ ಜಾಡು ಹಿಡಿದು ಚಾರ್ಮಾಡಿ ಘಾಟಿಗೆ ಗಸ್ತಿನಲ್ಲಿದ್ದ ಪಿಎಸ್ ಐ ವಾಹನವನ್ನು ಗೇಟ್

ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಚಾಲಕನಿಗೆ ಕೇಸ್, ಚಾಲಕನಿಂದಲೇ ಕಸ ತೆರವು Read More »

ದರ್ಶನ್ ಮೇಲಿನ ಅಭಿಮಾನಕ್ಕೆ ಮಗನನ್ನೇ ಕೈದಿ ಮಾಡಿದ ಅಪ್ಪ

ಸಮಗ್ರ ನ್ಯೂಸ್: ನಟ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ಇದ್ದು, ದರ್ಶನ್ ಮೇಲಿನ ಮಿತಿಮೀರಿದ ಅಭಿಮಾನಕ್ಕೆ ಜನ ಏನು ಮಾಡಲು ರೆಡಿ ಇದ್ದಾರೆ. ಹೌದು ಇಲ್ಲೋಬ್ಬ ಹುಚ್ಚು ಅಭಿಮಾನಿ ತಾನು ಹೆತ್ತ ಮಗುವನ್ನೇ ಕೈದಿ ಮಾಡಿ ಹಾಕಿದ್ದಾನೆ. ಇದು ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್. ಮಗುವಿಗೆ ಪರಪ್ಪನ ಅಗ್ರಹಾರದ ಕೈದಿಯಂತೆ ಫೋಟೋ ಶೂಟ್ ಮಾಡಿಸಿದ್ದಾನೆ. ಒಂದು ವರ್ಷದ ಮಗುವಿಗೆ ಜೈಲು ಕೈದಿಯ ರೀತಿ ಬಿಳಿ ಬಟ್ಟೆ ಹಾಕಿಸಿ ಈತ ಫೋಟೋ ‌ಶೂಟ್ ಮಾಡಿಸಿದ್ದು, ಅದನ್ನು ಸೋಶಿಯಲ್‌

ದರ್ಶನ್ ಮೇಲಿನ ಅಭಿಮಾನಕ್ಕೆ ಮಗನನ್ನೇ ಕೈದಿ ಮಾಡಿದ ಅಪ್ಪ Read More »

ಉತ್ತರಪ್ರದೇಶ: ಸತ್ಸಂಗದಲ್ಲಿ‌ ಕಾಲ್ತುಳಿತ| 23 ಮಂದಿ ಸಾವು,15 ಜನ ಗಂಭೀರ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಹತ್ರಾಸ್ನ ರತಿಭಾನ್ಪುರದಲ್ಲಿ ಸತ್ಸಂಗದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ 23 ಜನರು ಸಾವನ್ನಪ್ಪಿದ್ದಾರೆ ಮತ್ತು ಅಪಘಾತದಲ್ಲಿ 15 ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಹಿಳೆ ಮತ್ತು ಮಕ್ಕಳನ್ನು ಇಟಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಭೋಲೆ ಬಾಬಾ ಅವರ ಸತ್ಸಂಗ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ನಂತರ ಮುಕ್ತಾಯದ ಸಮಯದಲ್ಲಿ ಕಾಲ್ತುಳಿತ ಉಂಟಾಯಿತು. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ 15 ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ.

ಉತ್ತರಪ್ರದೇಶ: ಸತ್ಸಂಗದಲ್ಲಿ‌ ಕಾಲ್ತುಳಿತ| 23 ಮಂದಿ ಸಾವು,15 ಜನ ಗಂಭೀರ Read More »

ಗುಡ್‌ನ್ಯೂಸ್‌ ಕೊಟ್ಟ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ

ಸಮಗ್ರ ನ್ಯೂಸ್: ಕಳೆದ ವರ್ಷ ವಿವಾಹವಾಗಿದ್ದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಈಗ ಗುಡ್ ನ್ಯೂಸ್ ನೀಡಿದ್ದಾರೆ. ಹೌದು ಈ ಜೋಡಿ ಇದೀಗ ಪೋಷಕರಾಗುತ್ತಿದ್ದಾರೆ. ತಾಯಿಯಾಗುತ್ತಿರುವ ಸಂಭ್ರಮವನ್ನು ಹರ್ಷಿಕಾ ಪೂಣಚ್ಚ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್​ನಲ್ಲಿ ಭುವನ್ ಹಾಗೂ ಹರ್ಷಿಕಾ ಮನೆಗೆ ಹೊಸ ಅಥಿತಿ ಆಗಮನವಾಗಲಿದೆ. ಸದ್ಯ ಹರ್ಷಿಕಾ ಐದು ತಿಂಗಳ ಗರ್ಭಿಣಿ ಆಗಿದ್ದು ತಾಯಿಯಾಗುತ್ತಿರುವ ಸಂಭ್ರಮವನ್ನು ನಟಿ ಹರ್ಷಿಕಾ ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ. ಹರ್ಷಿಕಾ, ಭುವನ್ ಹಾಗೂ ಅವರ ಕುಟುಂಬದವರು ಕೊಡವ ಶೈಲಿಯ

ಗುಡ್‌ನ್ಯೂಸ್‌ ಕೊಟ್ಟ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ Read More »

ಮದುವೆ ಮನೆಯಲ್ಲಿ ಕೋತಿ ಕಾಟ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ!

ಸಮಗ್ರ ನ್ಯೂಸ್: ಮದುವೆ ಮನೆಗೆ ಕೋತಿಯೊಂದು ನುಗ್ಗಿ ರಂಪಾಟ ನಡೆಸಿದೆ. ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ್ದಲ್ಲದೇ, ಊಟ ಮಾಡಲು ಹೋದವರಿಗೂ ತೊಂದರೆ ಕೊಟ್ಟಿದೆ. ಅಷ್ಟೇ ಅಲ್ಲದೆ ಮದುವೆಗೆ ಬಂದವರಿಗೆ ಮಂಗ ಕಚ್ಚಿದೆ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ. ಮದುವೆ ಮನೆಯಲ್ಲಿ ಕೋತಿ ಕಾಟಕ್ಕೆ ಜನರು ಹೈರಾಣಾಗಿ ಹೋಗಿದ್ದಾರೆ. ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುತ್ತಿದ್ದವರಿಗೂ ಕಿರಿಕಿರಿ ಮಾಡಿ, ಊಟ ಕಸಿದುಕೊಂಡಿದೆ. 8-10 ಮಂದಿ ಮೇಲೆ ದಾಳಿ ಮಾಡಿ ಕಚ್ಚಿದೆ. ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ,

ಮದುವೆ ಮನೆಯಲ್ಲಿ ಕೋತಿ ಕಾಟ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ! Read More »