July 2024

ಹಾಸನ ಪೆನ್ ಡ್ರೈವ್ ಪ್ರಕರಣ| ನಾಲ್ಕು ತಿಂಗಳಿಗೊಮ್ಮೆ HIV ಪರೀಕ್ಷೆ ಮಾಡ್ತಿದ್ರಂತೆ ಪ್ರಜ್ವಲ್

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣವು ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ, ಪ್ರತೀ 4 ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆಗೆ ಒಳಪಡುತ್ತಿದ್ದರು ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ ಎನ್ನಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರ ಹಿಂದಿನ ಚಟುವಟಿಕೆ ಬಗ್ಗೆ ಕೆದಕಿದಾಗ ಈ ವಿಚಾರ ಮುನ್ನೆಲೆಗೆ ಬಂದಿದೆ. ಪ್ರಜ್ವಲ್‌ ವಿರುದ್ಧ ಸಾಲು-ಸಾಲು ದೂರುಗಳು ದಾಖಲಾಗುತ್ತಿದ್ದಂತೆ ಅವರದ್ದು […]

ಹಾಸನ ಪೆನ್ ಡ್ರೈವ್ ಪ್ರಕರಣ| ನಾಲ್ಕು ತಿಂಗಳಿಗೊಮ್ಮೆ HIV ಪರೀಕ್ಷೆ ಮಾಡ್ತಿದ್ರಂತೆ ಪ್ರಜ್ವಲ್ Read More »

ಚಾಲಕ ರಹಿತ ಮೆಟ್ರೋ/ ಸಿಗ್ನಲಿಂಗ್ ಪರೀಕ್ಷೆ ಆರಂಭ

ಸಮಗ್ರ ನ್ಯೂಸ್‌: ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ‘ಹಳದಿ’ ಮಾರ್ಗದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಸಿಗ್ನಲಿಂಗ್ ಪರೀಕ್ಷೆ ಆರಂಭವಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಪ್ರಸ್ತುತ ಆರಂಭವಾದ ಸಿಗ್ನಲಿಂಗ್‌ ತಪಾಸಣೆ ಮುಗಿಯುತ್ತಿದ್ದಂತೆ ದೂರಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯಲಿದೆ. ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ಸ್ಟೇಷನ್‌ಗಳು ಇದ್ದು, ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸಲಿದೆ. 18.82 ಕಿ.ಮೀ. ಉದ್ದದ ಈ ಮೆಟ್ರೋ ಮಾರ್ಗದಲ್ಲಿ ಹೊಸ ಮಾದರಿಯ ಚಾಲಕ ರಹಿತ

ಚಾಲಕ ರಹಿತ ಮೆಟ್ರೋ/ ಸಿಗ್ನಲಿಂಗ್ ಪರೀಕ್ಷೆ ಆರಂಭ Read More »

ಅಯೋಧ್ಯೆಯ ಅರ್ಚಕರಿಗೆ ಡ್ರೆಸ್ ಕೋಡ್/ ಮೊಬೈಲ್ ಫೋನ್ ಬಳಕೆಗೂ ಸಂಪೂರ್ಣ ನಿಷೇಧ

ಸಮಗ್ರ ನ್ಯೂಸ್‌: ಅಯೋಧ್ಯೆಯ ರಾಮಮಂದಿರ ಟ್ರಸ್ಟ್, ರಾಮನ ಗರ್ಭಗುಡಿಯಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಈ ಡ್ರೆಸ್ ಕೋಡ್ ಅರ್ಚಕರಿಗೆ ಅನ್ವಯವಾಗಲಿದೆ, ದೇವಸ್ಥಾನದ ಅರ್ಚಕರು ಇನ್ನುಮುಂದೆ ಒಂದೇ ಬಗೆಯ ಉಡುಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಚಕರು ಚೌಬಂದಿ ಪೇಟ ಹಾಗೂ ಹಳದಿ ಬಣ್ಣದ ಧೋತಿ, ಕುರ್ತಾವನ್ನು ಧರಿಸಲಿದ್ದಾರೆ. ರಾಮಲಲ್ಲಾ ಆವರಣದಲ್ಲಿ ಕೆಲಸ ಮಾಡುವವರಿಗೆ ಶೀಘ್ರ ಡ್ರೆಸ್ ಕೋಡ್ ಶೀಘ್ರ ಜಾರಿಯಾಗಲಿದೆ. ಇದರ ಜೊತೆಗೆ ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅರ್ಚಕರು

ಅಯೋಧ್ಯೆಯ ಅರ್ಚಕರಿಗೆ ಡ್ರೆಸ್ ಕೋಡ್/ ಮೊಬೈಲ್ ಫೋನ್ ಬಳಕೆಗೂ ಸಂಪೂರ್ಣ ನಿಷೇಧ Read More »

ಕಾರ್ಯಾಚರಣೆ ನಿಲ್ಲಿಸಿದ ʼಕೂʼ/ ಶಾಶ್ವತವಾಗಿ ಬಾಗಿಲು ಮುಚ್ಚಿದ ಹಳದಿ ಹಕ್ಕಿಯ ಗೂಡು

ಸಮಗ್ರ ನ್ಯೂಸ್‌: ಟ್ವಿಟರ್‌ಗೆ ಠಕ್ಕರ್ ಕೊಡೋದಕ್ಕೆ ಆರಂಭವಾಗಿದ್ದ ದೇಶೀಯ ಸಾಮಾಜಿಕ ಜಾಲತಾಣ ಕೂ ಇದೀಗ ಶಾಶ್ವತವಾಗಿ ಬಾಗಿಲು ಮುಚ್ಚಿದ್ದು, ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಸ್ವಾಧೀನ ಮಾತುಕತೆ ವಿಫಲ ಮತ್ತು ಹೆಚ್ಚಿನ ತಂತ್ರಜ್ಞಾನದ ವೆಚ್ಚಗಳಿಂದ ಕೂ ವೇದಿಕೆಯನ್ನು ಮುಚ್ಚುವುದಾಗಿ ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಅವರು ತಿಳಿಸಿದ್ದಾರೆ. ಕೂ ಉತ್ತುಂಗದಲ್ಲಿದ್ದಾಗ ಸುಮಾರು 20 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಮತ್ತು 9,000 ವಿಐಪಿಗಳನ್ನು ಒಳಗೊಂಡಂತೆ 1 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿತ್ತು. ಕನ್ನಡ ಸೇರಿದಂತೆ

ಕಾರ್ಯಾಚರಣೆ ನಿಲ್ಲಿಸಿದ ʼಕೂʼ/ ಶಾಶ್ವತವಾಗಿ ಬಾಗಿಲು ಮುಚ್ಚಿದ ಹಳದಿ ಹಕ್ಕಿಯ ಗೂಡು Read More »

ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ. ಶೌರ್ಯ ಎಸ್.ವಿ. ಗೆ ಪ್ರಥಮ ಸ್ಥಾನ

ಸಮಗ್ರ ನ್ಯೂಸ್: ಅತೀ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಊರಿನ, ಸರಕಾರಿ ಶಾಲೆಯ ಕೀರ್ತಿ ಹೆಚ್ಚಿಸಿರುವ ಈಕೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ 262ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ಹಾಗೂ 172ಕ್ಕಿಂತಲೂ ಹೆಚ್ಚು ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿರುವ ಶೌರ್ಯ ಎಸ್.ವಿ. ಇಡೀ ಜಗತ್ತಿಗೆ ಪ್ರತಿಭೆ ಪ್ರದರ್ಶನ ಪರಿಚಯಿಸುವ ಕಾತರದಲ್ಲಿ ಇದ್ದಾಳೆ. ಅಂತರಾಷ್ಟ್ರೀಯ ಬಾಲಪ್ರತಿಭೆ ಡಾ.ಶೌರ್ಯ.ಎಸ್.ವಿ. ಸಮಾಜದಲ್ಲಿ ಇಂದು ಅನೇಕ ಬಾಲ ಪ್ರತಿಭೆಗಳು ತಮ್ಮಲ್ಲಿನ ವಿವಿಧ ಕಲೆಯನ್ನು ಅನಾವರಣೆಗೊಳಿಸಿ

ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ. ಶೌರ್ಯ ಎಸ್.ವಿ. ಗೆ ಪ್ರಥಮ ಸ್ಥಾನ Read More »

ಲೈಸನ್ಸ್ ನವೀಕರಿಸದ ಪವರ್ ಟಿವಿಗೆ ಮುಗಿಯದ ಸಂಕಷ್ಟ| ಆರು ವಾರಗಳ ಕಾಲ ನಿರ್ಬಂಧ ಮುಂದುವರಿಸಿ ಹೈಕೋರ್ಟ್ ಆದೇಶ

ಸಮಗ್ರ ನ್ಯೂಸ್: ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಪವರ್‌ ಟಿ.ವಿ. ಕನ್ನಡ ಟಿ.ವಿ ಚಾನಲ್‌ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ನಿರ್ದೇಶನ ತೆರವಿಗೆ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ. ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ, ‘ಮೆಸರ್ಸ್‌ ಪವರ್‌ ಸ್ಮಾರ್ಟ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ ನಿರ್ದೇಶಕ ಬೆಂಗಳೂರಿನ ದಬ್ಬೇಗಟ್ಟ ಮಧು ಲಕ್ಷ್ಮಣ, ‘ಮೆಸರ್ಸ್‌ ಮಿಟ್‌ಕಾನ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ ನಿರ್ದೇಶಕ ಮುಂಬೈನ ಶ್ರೀಕಾಂತ್‌ ಮಿಥೇಶ್‌ ಬಾಂಗ್ಡಿಯಾ ಮತ್ತು ‘ಪವರ್‌ ಸ್ಮಾರ್ಟ್‌

ಲೈಸನ್ಸ್ ನವೀಕರಿಸದ ಪವರ್ ಟಿವಿಗೆ ಮುಗಿಯದ ಸಂಕಷ್ಟ| ಆರು ವಾರಗಳ ಕಾಲ ನಿರ್ಬಂಧ ಮುಂದುವರಿಸಿ ಹೈಕೋರ್ಟ್ ಆದೇಶ Read More »

ಕೊಡಗು:ಕಾಡಾನೆ ಹಾವಳಿ ಹಾಗೂ ವಿದ್ಯುತ್ ಸಮಸ್ಯೆ ಜು.10ರಂದು ಪ್ರತಿಭಟನೆ….!

ಸಮಗ್ರ ನ್ಯೂಸ್: ಕೊಡಗಿನ ನರಿಯಂದಡ ಹಾಗೂ ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿ ಹಾಗೂ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಈ ಭಾಗದ ಎಲ್ಲಾ ಗ್ರಾಮಸ್ಥರು ಒಟ್ಟು ಸೇರಿ ಜು.10 ಬುಧವಾರ ಉಗ್ರಹೋರಾಟ, ಪ್ರತಿಭಟನೆ, ಹಾಗೂ ರಸ್ತೆ ತಡೆ ನಡೆಸುವುದಾಗಿ ನರಿಯಂದಡ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನರಿಯಂದಡ, ಕೋಕೇರಿ, ಚೇಲಾವರ, ಕರಡ, ಅರಪಟ್ಟು, ಎಡಪಾಲ, ಮರಂದೋಡ, ಕುಂಜಿಲ,

ಕೊಡಗು:ಕಾಡಾನೆ ಹಾವಳಿ ಹಾಗೂ ವಿದ್ಯುತ್ ಸಮಸ್ಯೆ ಜು.10ರಂದು ಪ್ರತಿಭಟನೆ….! Read More »

ದೇವರಕೊಲ್ಲಿ ಬಳಿ ರಸ್ತೆಗೆ ಉರುಳಿದ ಮರ| ಮಾಣಿ – ಮೈಸೂರು ರಸ್ತೆ ಸಂಚಾರ ಬಂದ್

ಸಮಗ್ರ ನ್ಯೂಸ್: ಮಾಣಿ‌ – ಮೈಸೂರು ರಾ.ಹೆದ್ದಾರಿಯ ದೇವರಕೊಲ್ಲಿ ಬಳಿ ರಸ್ತೆಗೆ ಮರ ಉರುಳಿದೆ. ಪರಿಣಾಮವಾಗಿ ರಸ್ತೆ ‌ಸಂಚಾರ ಸಂಪೂರ್ಣ ಬಂದ್ ಆಗಿದೆ ಎಂದು ತಿಳಿದುಬಂದಿದೆ.

ದೇವರಕೊಲ್ಲಿ ಬಳಿ ರಸ್ತೆಗೆ ಉರುಳಿದ ಮರ| ಮಾಣಿ – ಮೈಸೂರು ರಸ್ತೆ ಸಂಚಾರ ಬಂದ್ Read More »

ಕೋಲಾರ: ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯೊಬ್ಬಳು ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಹೊರ ವಲಯದ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಕಾಲೇಜು ಉಪನ್ಯಾಸಕರು, ಸಹಪಾಠಿಗಳು ಆತಂಕಕ್ಕೀಡಾಗಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಸಹ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಕೋಲಾರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಮಗು ಕರುಣಿಸಿದ ಯುವಕನಿಗಾಗಿ ಹುಡುಕಾಟ

ಕೋಲಾರ: ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ Read More »

ಮಂಗಳೂರು: ಕಾಮಗಾರಿ ವೇಳೆ ಗುಡ್ಡ ಕುಸಿತ| ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ಸಮಗ್ರ ನ್ಯೂಸ್: ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ಮಂಗಳೂರು ನಗರದ ಬಲ್ಮಠ ರೋಡ್ ಸಮೀಪ ನಡೆದಿದೆ. ಕಟ್ಟಡ ನಿರ್ಮಾಣದ ವೇಳೆ ಘಟನೆ ನಡೆದಿದ್ದು, ಮಣ್ಣಿನಡಿ ಸಿಲುಕಿರುವ ಕಾರ್ಮಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು: ಕಾಮಗಾರಿ ವೇಳೆ ಗುಡ್ಡ ಕುಸಿತ| ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು Read More »