July 2024

NEET PG ಪರೀಕ್ಷೆಯ ದಿನಾಂಕ ಪ್ರಕಟ

ಸಮಗ್ರ ನ್ಯೂಸ್‌: ನೀಟ್‌ ಪಿಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕಾರಣ ಮುಂದೂಡಲಾಗಿದ್ದ ದಿನಾಂಕವನ್ನು ಇದೀಗ ಘೋಷಿಸಲಾಗಿದ್ದು, ಪರೀಕ್ಷೆಯು ಆಗಸ್ಟ್ 11 ರಂದು ನಡೆಯಲಿದೆ. ಪರೀಕ್ಷೆಯು ಆಗಸ್ಟ್ 11 ರಂದು ಬೆಳಿಗ್ಗೆ ಮತ್ತು ಮಧ್ಯಾಹ್ನದ ಎರಡು ಪಾಳಿಗಳಲ್ಲಿ ನಡೆಯಲಿದೆ. ಈ ಹಿಂದೆ ಜೂನ್ 23ಕ್ಕೆ ನೀಟ್ ಪರೀಕ್ಷೆ ನಿಗದಿಯಾಗಿತ್ತು. ಅಕ್ರಮ ಚಟುವಟಿಕೆಗಳ ವರದಿಯಿಂದಾಗಿ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿತ್ತು.

NEET PG ಪರೀಕ್ಷೆಯ ದಿನಾಂಕ ಪ್ರಕಟ Read More »

ಇನ್ಮುಂದೆ ಚಿಲ್ಲರೆ ಕೊಡಿ ಎಂಬ ಮಾತಿಲ್ಲ/ KSRTC ಶೀಘ್ರದಲ್ಲೇ ಕ್ಯಾಶ್‌ಲೆಸ್‌

ಸಮಗ್ರ ನ್ಯೂಸ್‌: ಪ್ರಯಾಣದ ಸಮಯದಲ್ಲಿ ಟಿಕೆಟ್ ಗೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಸದಾ ವಾಗ್ವಾದ ನಡೆಯುತ್ತಲೇ ಇರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಕೆಎಸ್‌ಆರ್‌ಟಿಸಿ Google Pay, Phone Pay & Paytm ಮೂಲಕ ಪಾವತಿಸಲು ಪ್ರಯಾಣಿಕರಿಗೆ ಅನುವು ಮಾಡಿಕೊಡುವ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದು, ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ. ಕೆಎಸ್‌ಆರ್‌ಟಿಸಿ ವತಿಯಿಂದ 10245 ಸಾವಿರ ETM ಟಿಕೆಟ್ ಯಂತ್ರಗಳನ್ನು ತಿಂಗಳಿಗೆ 645 ರೂ ಬಾಡಿಗೆ ದರದಲ್ಲಿ ಖರೀದಿಸಲು ಮುಂದಾಗಿದೆ.

ಇನ್ಮುಂದೆ ಚಿಲ್ಲರೆ ಕೊಡಿ ಎಂಬ ಮಾತಿಲ್ಲ/ KSRTC ಶೀಘ್ರದಲ್ಲೇ ಕ್ಯಾಶ್‌ಲೆಸ್‌ Read More »

ಹೆರಿಗೆ ಸಂದರ್ಭದಲ್ಲಿ ಮರ್ಮಾಂಗ ಕೊಯ್ದ ಡಾಕ್ಟರ್| ಬೆಳಕು‌ ಕಾಣಬೇಕಿದ್ದ ಮಗುವಿಗೆ ಯಮನಾದ ವೈದ್ಯ

ಸಮಗ್ರ ನ್ಯೂಸ್: ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವ ವೇಳೆ ವೈದ್ಯನೊಬ್ಬ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗ ಕೊಯ್ದ ವಿಕೃತ ಘಟನೆ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಧಾರವಾಡದ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಎಂಬುವವರ ಪತ್ನಿ ಅಮೃತಾ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಜೂನ್ 27ರಂದು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅಮೃತಾಳಿಗೆ ಸಿಸರಿನ್ ಮೂಲಕ ಮಗುವನ್ನು ಹೊರ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಹೀಗೆ ಸಿಸರಿನ್ ಮಾಡಿ ಮಗು ತೆಗೆಯುವ ವೇಳೆ ನಿಜಾಮುದ್ದೀನ್ ಎಂಬುವವನು ಪುಟ್ಟ ಮಗುವಿನ ಮರ್ಮಾಂಗವನ್ನು ಕೊಯ್ಯುವ

ಹೆರಿಗೆ ಸಂದರ್ಭದಲ್ಲಿ ಮರ್ಮಾಂಗ ಕೊಯ್ದ ಡಾಕ್ಟರ್| ಬೆಳಕು‌ ಕಾಣಬೇಕಿದ್ದ ಮಗುವಿಗೆ ಯಮನಾದ ವೈದ್ಯ Read More »

ಸುಳ್ಯ: ನಡುರಸ್ತೆಯಲ್ಲೇ ಪಲ್ಟಿ ಹೊಡೆದ ಲಾರಿ| ಚಾಲಕ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು (ಜು.5) ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ‌ಸಮೀಪದ ಓಡಾಬೈ ಬಳಿ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಸುಳ್ಯ: ನಡುರಸ್ತೆಯಲ್ಲೇ ಪಲ್ಟಿ ಹೊಡೆದ ಲಾರಿ| ಚಾಲಕ ಆಸ್ಪತ್ರೆಗೆ ದಾಖಲು Read More »

ಉಡುಪಿ: ವಿದ್ಯಾರ್ಥಿ ಬಳಿ‌‌ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ

ಕಳೆದ ವರ್ಷ ವಿದ್ಯಾರ್ಥಿಗಳ ಕೈಯಲ್ಲಿ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ವಿಚಾರ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಅಂತದ್ದೆ ಘಟನೆ ಉಡುಪಿಯಲ್ಲಿ ನಡೆದಿದ್ದು ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಯಿಂದ ದೈಹಿಕ ಶಿಕ್ಷಕರೊಬ್ಬರು ಶೌಚಾಲಯ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಉಡುಪಿಯ ನಿಟ್ಟೂರು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಬಾಲಕನಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಅಲ್ಲದೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ

ಉಡುಪಿ: ವಿದ್ಯಾರ್ಥಿ ಬಳಿ‌‌ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ Read More »

ಬ್ರಿಟನ್ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ರಿಷಿ‌ ಸುನಕ್| ಅಧಿಕಾರ ಹಸ್ತಾಂತರ ಮಾಡಲು ನಿರ್ಧಾರ

ಸಮಗ್ರ ನ್ಯೂಸ್: ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಾಕ್‌ ಅವರು ಸೋಲೊಪ್ಪಿಕೊಂಡಿದ್ದಾರೆ. ವಿಪಕ್ಷ ಲೇಬರ್‌ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ್ದರೆ ರಿಷಿ ಸುನಾಕ್‌ ಅವರ ಕನ್ಸರ್ವೇಟಿವ್‌ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. “ಲೇಬರ್‌ ಪಾರ್ಟಿ ಚುನಾವಣೆ ಗೆದ್ದಿದೆ. ನಾನು ಸರ್‌ ಕೀರ್‌ ಸ್ಟಾರ್ಮರ್‌ ಅವರಿಗೆ ಕರೆ ಮಾಡಿ ವಿಜಯಕ್ಕೆ ಶುಭಾಶಯ ಸಲ್ಲಿಸಿದ್ದೇನೆ. ಇಂದು ಅಧಿಕಾರವನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ಹಸ್ತಾಂತರಿಸಲಾಗುವುದು. ಇದು ನಮ್ಮ ದೇಶದ ಸುಭದ್ರತೆ ಮತ್ತು ಭವಿಷ್ಯದ ಬಗ್ಗೆ ನಮ್ಮೆಲ್ಲರಲ್ಲೂ

ಬ್ರಿಟನ್ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ರಿಷಿ‌ ಸುನಕ್| ಅಧಿಕಾರ ಹಸ್ತಾಂತರ ಮಾಡಲು ನಿರ್ಧಾರ Read More »

ಅಂಗನವಾಡಿ ಪುಟಾಣಿಗಳಿಗೆ ಗುಡ್ ನ್ಯೂಸ್| ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಬ್ಯಾಗ್, ಯೂನಿಫಾರ್ಮ್ ವಿತರಣೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಎನ್ನುವಂತೆ ಅಂಗನವಾಡಿ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಬ್ಯಾಗ್, ಯೂನಿಫಾರ್ಮ್ ವಿತರಣೆಗೆ ಚಿಂತನೆ ನಡೆಸಿದೆ. ಬೆಂಗಳೂರಿನ ಗೃಹಕಚೇರಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಕಾರ್ಯಕರ್ತರು ಭೇಟಿ ಮಾಡಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ

ಅಂಗನವಾಡಿ ಪುಟಾಣಿಗಳಿಗೆ ಗುಡ್ ನ್ಯೂಸ್| ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಬ್ಯಾಗ್, ಯೂನಿಫಾರ್ಮ್ ವಿತರಣೆ Read More »

₹29 ಗಳಿಗೆ ದೊರೆಯುತ್ತಿದ್ದ ಭಾರತ್ ಅಕ್ಕಿ ಮಾರಾಟ ಸ್ಥಗಿತ

ಸಮಗ್ರ ನ್ಯೂಸ್: ಜುಲೈನಿಂದ ಭಾರತ್ ಅಕ್ಕಿ ಯೋಜನೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ದೊರೆಯುತ್ತಿದ್ದ ಸಬ್ಸಿಡಿ ಅಕ್ಕಿ ಈಗ ಆನ್‌ಲೈನ್‌ನಲ್ಲಿಯೂ ಲಭ್ಯವಿಲ್ಲ. ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ಆರ್ಥಿಕವಾಗಿ ಅಸ್ಥಿರ ಮತ್ತು ಆರ್ಥಿಕವಾಗಿ ದುರ್ಬಲ ಸಮಾಜದ ವರ್ಗಗಳನ್ನು ಬೆಂಬಲಿಸಲು ಪ್ರತಿ ಕಿಲೋಗ್ರಾಂಗೆ 29 ಬೆಲೆ ರೂ.ಗೆ ಭಾರತ್ ರೈಸ್ ಅನ್ನು ಪರಿಚಯಿಸಿತ್ತು. ಸಬ್ಸಿಡಿ ಭಾರತ್ ರೈಸ್ ಅನ್ನು NAFED, NCCF ಮತ್ತು ಕೇಂದ್ರೀಯ ಭಂಡಾರ್‌ನಿಂದ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ

₹29 ಗಳಿಗೆ ದೊರೆಯುತ್ತಿದ್ದ ಭಾರತ್ ಅಕ್ಕಿ ಮಾರಾಟ ಸ್ಥಗಿತ Read More »

ಬೆಳಗಾವಿ:ಬೈಕ್ ಅಪಘಾತ; ಓರ್ವ ಸ್ಥಳದಲ್ಲೇ ಸಾವು| ಮೂವರು ಗಂಭಿರ ಗಾಯ

ಸಮಗ್ರ ನ್ಯೂಸ್: ಬೈಕ್ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನೊಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಳಿ ನಡೆದಿದೆ. ಜಮಖಂಡಿದಿಂದ ಸ್ವ ಗ್ರಾಮ ಚಮಕೇರಿಗೆ ಬರುವ ಸಂದರ್ಭದಲ್ಲಿ ಮಾರ್ಗದ ಮಧ್ಯೆ ಸವದಿ ಗ್ರಾಮದ ಬಳಿ ಬೈಕ್ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಚಮಕೇರಿ ಗ್ರಾಮದ ನಿಂಗಪ್ಪ ದುಂಡಪ್ಪ ಮಂಗಳೂರು (65) ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರನ್ನು ಅಂಬ್ಯುಲೆನ್ಸ್ ಮುಖಾಂತರ ಅಥಣಿ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು

ಬೆಳಗಾವಿ:ಬೈಕ್ ಅಪಘಾತ; ಓರ್ವ ಸ್ಥಳದಲ್ಲೇ ಸಾವು| ಮೂವರು ಗಂಭಿರ ಗಾಯ Read More »

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ| ಮರುತನಿಖೆ ಆದೇಶ ಕಾಯ್ದಿರಿಸಿದ ‌ಹೈಕೋರ್ಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಾಂಗಳದ ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಕೋರಿದ ಹಾಗೂ ಸಿಬಿಐ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ. ಸೌಜನ್ಯಾಳ ತಂದೆ ಚಂದಪ್ಪ ಗೌಡ, ಖುಲಾಸೆಗೊಂಡಿರುವ ಆರೋಪಿ ಕಾರ್ಕಳ ತಾಲ್ಲೂಕಿನ ಕುಕುಂದೂರಿನ ಸಂತೋಷ್‌ ರಾವ್‌ ಹಾಗೂ ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಮತ್ತು ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ| ಮರುತನಿಖೆ ಆದೇಶ ಕಾಯ್ದಿರಿಸಿದ ‌ಹೈಕೋರ್ಟ್ Read More »