July 2024

ಕೆಎಸ್ಆರ್ ಟಿಸಿಗೆ ಸೇರ್ಪಡೆಯಾಗಲಿವೆ 300 ಹೊಸ‌ ಎಲೆಕ್ಟ್ರಿಕ್ ಬಸ್| ಈಗ ಪ್ರಯಾಣ ಮತ್ತಷ್ಟು ಸುಲಭ!

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡಲಿದೆ. 225 ನಾನ್-ಎಸಿ ಹಾಗೂ 75 ಎಸಿ ಒಳಗೊಂಡಂತೆ ಒಟ್ಟು 300 ಎಲೆಕ್ಟ್ರಿಕ್ ಬಸ್‌ಗಳು ಗುತ್ತಿಗೆ ಮಾದರಿಯಲ್ಲಿ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಲಿವೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು, ‘ಈ ಬಸ್‌ಗಳನ್ನು 12 ವರ್ಷಗಳ ಅವಧಿಗೆ ಒಪ್ಪಂದದ ಮೇರೆಗೆ (Gross Cost Contract Model) ಪಡೆಯಲು ನಿರ್ಧರಿಸಲಾಗಿದ್ದು, ಟೆಂಡರ್ […]

ಕೆಎಸ್ಆರ್ ಟಿಸಿಗೆ ಸೇರ್ಪಡೆಯಾಗಲಿವೆ 300 ಹೊಸ‌ ಎಲೆಕ್ಟ್ರಿಕ್ ಬಸ್| ಈಗ ಪ್ರಯಾಣ ಮತ್ತಷ್ಟು ಸುಲಭ! Read More »

ರಾಜ್ಯದಲ್ಲಿ ಝೀಕಾ ವೈರಸ್ ಗೆ ಬಿತ್ತು ಮೊದಲ ಬಲಿ| ಶಿವಮೊಗ್ಗದಲ್ಲಿ ವೃದ್ಧ ಸಾವು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಈಗ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೆ, ಝೀಕಾ ವೈರಸ್ ಕೂಡ ರಾಜ್ಯಕ್ಕೆ ಒಕ್ಕರಿಸಿಕೊಂಡಿದ್ದು, ಇದೀಗ ಶಿವಮೊಗ್ಗದಲ್ಲಿ ಝೀಕಾ ವೈರಸ್ ಗೆ ವೃದ್ಧರೊಬ್ಬರೂ ಸಾವನ್ನಪ್ಪಿದ್ದಾರೆ. ಜ್ವರದಿಂದ ಬಳಲುತ್ತಿದ್ದ ವೃದ್ಧರನ್ನು ಶಿವಮೊಗ್ಗದ ಆಸ್ಪತ್ರೆಗೆ ಅವರ ಕುಟುಂಬ ದಾಖಲು‌ ಮಾಡಿತ್ತು. ಈ ವೇಳೆ ಅವರಿಗೆ ಝೀಕಾ ಸೋಂಕು ಇರುವುದು ಪತ್ತೆಯಾಗಿದೆ. ಹಾಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವೃದ್ಧರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಡಿಸ್ಚಾರ್ಜ್ ಆಗಿದ್ದರು. ಅದಾದ ಬಳಿಕ ಕುಟುಂಬದವರು ಗುರುವಾರ ಮನೆಗೆ

ರಾಜ್ಯದಲ್ಲಿ ಝೀಕಾ ವೈರಸ್ ಗೆ ಬಿತ್ತು ಮೊದಲ ಬಲಿ| ಶಿವಮೊಗ್ಗದಲ್ಲಿ ವೃದ್ಧ ಸಾವು Read More »

ಬರೋಬ್ಬರಿ 100 ಜನರಿಂದ ಸುಲಿಗೆ ನಡೆಸಿದ ದಿವ್ಯಾ ವಸಂತ & ಗ್ಯಾಂಗ್| ರಾಜ್ಯವೇ ಖುಷಿ ಪಡುವ ಸುದ್ದಿ‌ ಕೊಟ್ಟವಳು ಸದ್ದಿಲ್ಲದೆ ಪರಾರಿ| ಆರೋಪಿಗಳ ಬೆನ್ನುಬಿದ್ದ ಖಾಕಿ ಪಡೆ

ಸಮಗ್ರ ನ್ಯೂಸ್: ಬೆಂಗಳೂರಿನ ಇಂದಿರಾನಗರ ‘ಸ್ಪಾ’ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರೂ ಹಣ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ ‘ರಾಜ್ ನ್ಯೂಸ್ ಕನ್ನಡ’ ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೇರಿ ಇಬ್ಬರನ್ನು ಜಿ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಸುದ್ದಿವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್‌ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಜಪ್ತಿ ಮಾಡಲಾಗಿದೆ. ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ನಿರೂಪಕಿ ದಿವ್ಯಾ, ಸಚಿನ್ ಹಾಗೂ ಆಕಾಶ್ ಪತ್ತೆಗೆ ಪೊಲೀಸರು

ಬರೋಬ್ಬರಿ 100 ಜನರಿಂದ ಸುಲಿಗೆ ನಡೆಸಿದ ದಿವ್ಯಾ ವಸಂತ & ಗ್ಯಾಂಗ್| ರಾಜ್ಯವೇ ಖುಷಿ ಪಡುವ ಸುದ್ದಿ‌ ಕೊಟ್ಟವಳು ಸದ್ದಿಲ್ಲದೆ ಪರಾರಿ| ಆರೋಪಿಗಳ ಬೆನ್ನುಬಿದ್ದ ಖಾಕಿ ಪಡೆ Read More »

ಭಾರತದಲ್ಲಿ ರಸ್ತೆಗಿಳಿದ ವಿಶ್ವದ ಮೊದಲ ಸಿಎನ್ ಜಿ‌ ಬೈಕ್| ಏನಿದರ ವಿಶೇಷತೆ? ಇಲ್ಲಿದೆ ಡೀಟೈಲ್ಡ್ ಸ್ಟೋರಿ…

ಸಮಗ್ರ ನ್ಯೂಸ್: ಭಾರತದಲ್ಲಿ ವಿಶ್ವದ ಮೊದಲ CNG ಬೈಕ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಬಜಾಜ್ CNG ಬೈಕ್ ಅನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ದ್ವಿಚಕ್ರ ವಾಹನ ತಯಾರಕ ಕಂಪನಿ. ಇಡೀ ವಾಹನ ಲೋಕದ ಗಮನ ಈಗ ಈ ಕಂಪನಿಯತ್ತ ಹೊರಳುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬೈಕ್ ಅನ್ನು ಭಾರತಕ್ಕೆ ಪರಿಚಯಿಸಿದ್ದು, ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಇದರ ನಿರೀಕ್ಷೆಗಳು ಹಲವು ಪಟ್ಟು ಹೆಚ್ಚುತ್ತಿವೆ. ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಕ್ಕೂ ಹೆಚ್ಚು ಆದರೂ, ಸಿಎನ್‌ಜಿ-ಚಾಲಿತ

ಭಾರತದಲ್ಲಿ ರಸ್ತೆಗಿಳಿದ ವಿಶ್ವದ ಮೊದಲ ಸಿಎನ್ ಜಿ‌ ಬೈಕ್| ಏನಿದರ ವಿಶೇಷತೆ? ಇಲ್ಲಿದೆ ಡೀಟೈಲ್ಡ್ ಸ್ಟೋರಿ… Read More »

ಬಂಟ್ವಾಳ: ನಾಪತ್ತೆಯಾಗಿದ್ದ ದೈವಪಾತ್ರಿ‌ ನದಿಯಲ್ಲಿ ಶವವಾಗಿ‌ ಪತ್ತೆ

ಸಮಗ್ರ ನ್ಯೂಸ್: ಗುರುವಾರ(ಜು.5) ಬೆಳಗಿನ ಜಾವ ಮನೆಯಿಂದ ಬಾಡಿಗೆಯ ನೆಪದಲ್ಲಿ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ರಿಕ್ಷಾ ಚಾಲಕ, ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರು ನಿವಾಸಿ ಬಾಬು ಪೂಜಾರಿಯವರ ಪುತ್ರ, ಎಣ್ಮೂರು ಶ್ರೀ ನಾಗಬ್ರಹ್ಮ ದೈವಸ್ಥಾನ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನ ಪಾತ್ರಿಯಾಗಿರುವ ಗಿರೀಶ್‌ (37) ಅವರ ಮೃತದೇಹ ಫಲ್ಗುಣಿ ನದಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ. ಅಡ್ಡೂರು ಪರಿಸರದ ಕೆಳಗಿನಕೆರೆಯಲ್ಲಿ ಗಿರೀಶ್‌ ಅವರ ಮೃತದೇಹ ಪತ್ತೆಯಾಗಿದೆ. ನದಿಗೆ ಹಾರಿ ಆತ್ಮಹತ್ಯೆ ಗಿರೀಶ್‌ ಅಡ್ಡೂರು-ಪೊಳಲಿ ಸೇತುವೆಯ ಮೇಲೆ ಅಟೋರಿಕ್ಷಾ ನಿಲ್ಲಿಸಿ

ಬಂಟ್ವಾಳ: ನಾಪತ್ತೆಯಾಗಿದ್ದ ದೈವಪಾತ್ರಿ‌ ನದಿಯಲ್ಲಿ ಶವವಾಗಿ‌ ಪತ್ತೆ Read More »

ಅಕ್ರಮ ಕಲ್ಲುಕೋರೆ ಪ್ರಕರಣ| ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಎರಡು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಅಕ್ರಮ‌ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ. ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ.5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್

ಅಕ್ರಮ ಕಲ್ಲುಕೋರೆ ಪ್ರಕರಣ| ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಎರಡು ಅರ್ಜಿ ವಜಾಗೊಳಿಸಿದ ಹೈಕೋರ್ಟ್ Read More »

ಕರಾವಳಿಗೆ ರೆಡ್ ಅಲರ್ಟ್| ಇಂದು (ಜು.6) ದ.ಕ ಜಿಲ್ಲೆಯ ಶಾಲೆ, ಪ.ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಪ.ಪೂರ್ವ ಕಾಲೇಜುಗಳಿಗೆ ಜುಲೈ06ರ ಶನಿವಾರ ರಜೆ ಘೋಷಿಸಲಾಗಿದೆ. ದ.ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಖಾಸಗಿ ಪ್ರಾಥಮಿಕ ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ( 12 ನೇ ತರಗತಿ) ಭಾರೀ ಮಳೆ

ಕರಾವಳಿಗೆ ರೆಡ್ ಅಲರ್ಟ್| ಇಂದು (ಜು.6) ದ.ಕ ಜಿಲ್ಲೆಯ ಶಾಲೆ, ಪ.ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ Read More »

ಪುತ್ತೂರು: ಮನೆ ನಾಯಿಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ

ಸಮಗ್ರ ನ್ಯೂಸ್: ನಾಯಿಗಳ ಸಂಖ್ಯೆ ಹೆಚ್ಚಾಗಿ ರಸ್ತೆಗೆ ಬಂದು ವಾಹನಗಳಿಗೆ ಹಾಗೂ ಪಾದಾಚಾರಿ ಮಕ್ಕಳಿಗೆ ಸಮಸ್ಯೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಹಾಗೂ ಮಲ್ಪೆ ಅದ್ವರಾಜ್ ಅನುಮಲ್ ಕೇರ್ ಟ್ರಸ್ಟ್ ವತಿಯಿಂದ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ಸೌಲಭ್ಯವನ್ನು ಪೋಳ್ಯದಲ್ಲಿ ಜು.4ರಿಂದ ಜು.9ರವರೆಗೆ ನಡೆಸಲಾಗುವುದು. ಸಂತಾನ ಹರಣ ಮಾಡಿಸುವುದರಿಂದ ಮರಿಗಳನ್ನು ದಾರಿಯಲ್ಲಿ ತ್ಯಜಿಸುವುದು ಕಡಿಮೆಯಾಗುತ್ತದೆ. ರೇಬೀಸ್ ರೋಗ ಹರಡುವಿಕೆಯನ್ನು ಕುಂಠಿತಗೊಳಿಸಬಹುದಾಗಿದೆ. ದಾರಿ ನಾಯಿಗಳ ಸಂಖ್ಯೆ ಕಡಿಮೆಯಾಗಿ

ಪುತ್ತೂರು: ಮನೆ ನಾಯಿಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ Read More »

ಭಾರೀ ಮಳೆ ಹಿನ್ನೆಲೆ| ನಾಳೆ(ಜು.6) ಉಡುಪಿ ಜಿಲ್ಲೆಯ ಎಲ್ಲಾ ಶಾಲೆ, ಪ.ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳು ಅಲ್ಲದೇ ಪದವಿ ಪೂರ್ವ ಕಾಲೇಜುಗಳಿಗೆ ಜು.6ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಮೊದಲು ಅತಿ ಹೆಚ್ಚು ಮಳೆ ಸುರಿಯುತ್ತಿರುವ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಅವರು ಆದೇಶಿಸಿದ್ದರು.

ಭಾರೀ ಮಳೆ ಹಿನ್ನೆಲೆ| ನಾಳೆ(ಜು.6) ಉಡುಪಿ ಜಿಲ್ಲೆಯ ಎಲ್ಲಾ ಶಾಲೆ, ಪ.ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ Read More »

ಭಾರೀ ಮಳೆ ಹಿನ್ನಲೆ| ಜು.6ರಂದು ಉಡುಪಿ ಜಿಲ್ಲೆಯ ಈ‌ ತಾಲೂಕಿನ ಶಾಲೆ, ಪಿಯುಸಿ ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.06ರಂದು ರಜೆಯನ್ನು ಘೋಷಿಸಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಕುಂದಾಪುರ ‌ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನಲೆ| ಜು.6ರಂದು ಉಡುಪಿ ಜಿಲ್ಲೆಯ ಈ‌ ತಾಲೂಕಿನ ಶಾಲೆ, ಪಿಯುಸಿ ಕಾಲೇಜುಗಳಿಗೆ ರಜೆ Read More »