July 2024

ಸುಳ್ಯ: ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ

ಸಮಗ್ರ ನ್ಯೂಸ್: ರಾಜಕೀಯ, ಸಾಮಾಜಿಕ ಕ್ಷೇತ್ರದ ಮುಖಂಡ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭವು ಜುಲೈ 6 ರಂದು ಕೇರ್ಪಳಧ ಬಂಟರ ಭವನದಲ್ಲಿ ನಡೆಯಿತು. ವಿಶೇಷವಾಗಿ ಕೆ.ಆ‌ರ್.ಗೋಪಾಲಕೃಷ್ಣ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟಿ.ಎಂ.ಶಹೀದ್ ತೆಕ್ಕಿಲ್ ಅವರು ಅಡಿಕೆ ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು. ಸುಳ್ಯ ಭಾಗದಲ್ಲಿ ವ್ಯಾಪಕವಾಗಿರುವ ಅಡಿಕೆ ಹಳದಿ ರೋಗದ ಕುರಿತು ಸಮಗ್ರ ಸಂಶೋಧನೆ ಅಗತ್ಯ ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು […]

ಸುಳ್ಯ: ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ Read More »

ವ್ಯಾಪಕ‌ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಎಲ್ಲಾ‌ ಮಾದರಿಯ ಟ್ರಕ್ಕಿಂಗ್ ನಿಷೇಧಿಸಿ ಡಿಸಿ‌ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಳೆರಾಯ ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ನಿಷೇಧಿಸಿ ಮತ್ತು ಜಿಲ್ಲೆಯ ಜಲ ಪ್ರದೇಶಗಳಲ್ಲೂ ಅನಧಿಕೃತ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಭಾರಿ ಮಳೆಯಿಂದ ಭೂಕುಸಿತ, ಗುಡ್ಡ ಕುಸಿತ, ಮರ ಬೀಳುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಶಿಖರಗಳ ಟ್ರೆಕ್ಕಿಂಗ್, ಸಾಹಸ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ಅದರಂತೆ

ವ್ಯಾಪಕ‌ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಎಲ್ಲಾ‌ ಮಾದರಿಯ ಟ್ರಕ್ಕಿಂಗ್ ನಿಷೇಧಿಸಿ ಡಿಸಿ‌ ಆದೇಶ Read More »

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಸರ್ಕಾರ ಅಸ್ತು – ಲಕ್ಷ್ಮಿ ಹೆಬ್ಬಾಳ್ಕರ್

ಸಮಗ್ರ ನ್ಯೂಸ್: ರಾಜ್ಯದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಲಾಗಿದ್ದು, ಮುಖ್ಯಮಂತ್ರಿಯವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳಕರ್ ಹೇಳಿದರು. ಯಶೋಧೆಯು ಶ್ರೀಕೃಷ್ಣನನ್ನು ಹೇಗೆ ಬೆಳೆಸುತ್ತಾಳೆಯೋ, ಅದರಂತೆ ಸಮಾಜದಲ್ಲಿನ ಮಕ್ಕಳನ್ನು ಅಂಗವಾಡಿ ಕಾರ್ಯಕರ್ತೆ, ಸಹಾಯಕಿಯರು ಬೆಳೆಸುತ್ತಿದ್ದು, ಸಮಾಜದ ಏಳಿಗೆಗೆ ಇವರ ಪಾತ್ರ ಮಹತ್ವದ್ದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮಿ ಆರ್.ಹೆಬ್ಬಾಳಕರ್

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಸರ್ಕಾರ ಅಸ್ತು – ಲಕ್ಷ್ಮಿ ಹೆಬ್ಬಾಳ್ಕರ್ Read More »

ತಮಿಳುನಾಡು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಬರ್ಬರ ಹತ್ಯೆ| ಎಂಟು ಮಂದಿ ಶಂಕಿತರು ಅರೆಸ್ಟ್

ಸಮಗ್ರ ನ್ಯೂಸ್: ತಮಿಳುನಾಡು ಬಹುಜನ ಸಮಾಜ ವಾದಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಪೆರಂಬೂರ್‌ನಲ್ಲಿರುವ ಆರ್ಮ್‌ಸ್ಟ್ರಾಂಗ್‌ ಅವರ ನಿವಾಸದ ಬಳಿ ಆರು ಮಂದಿ ಅಪರಿಚಿತ ದಾಳಿಕೋರರು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಯ ಉದ್ದೇಶವನ್ನು ಕೂಲಂಕುಶವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಚೆನ್ನೈ ಹೆಚ್ಚುವರಿ ಆಯುಕ್ತ (ಉತ್ತರ) ಆಸ್ರಾ ಗರ್ಗ್‌ ಹೇಳಿದ್ದಾರೆ. ಆರ್ಮ್‌ಸ್ಟ್ರಾಂಗ್‌ ಅವರನ್ನು ಕೊಲೆಗೈದ ಬಳಿಕ ಆರೋಪಿಗಳು ಪರಾರಿಯಾಗುತ್ತಿರುವ

ತಮಿಳುನಾಡು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಬರ್ಬರ ಹತ್ಯೆ| ಎಂಟು ಮಂದಿ ಶಂಕಿತರು ಅರೆಸ್ಟ್ Read More »

ಭಾರೀ ಮಳೆ/ ಸ್ಥಗಿತಗೊಂಡ ಅಮರನಾಥ ಯಾತ್ರೆ

ಸಮಗ್ರ ನ್ಯೂಸ್‌: ಭಾರೀ ಮಳೆ ಹಿನ್ನಲೆಯಲ್ಲಿ ಇಂದು ಗುಹಾ ದೇಗುಲಕ್ಕೆ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಲ್ವಾಲ್ ಮತ್ತು ಪಹಲ್ಲಾಮ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದ ಕಾರಣ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು 3,800 ಮೀಟರ್ ಎತ್ತರದ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗದ ದರ್ಶನವನ್ನು ಪಡೆದಿದ್ದಾರೆ. ಸುಮಾರು 4.5 ಲಕ್ಷಕ್ಕೂ

ಭಾರೀ ಮಳೆ/ ಸ್ಥಗಿತಗೊಂಡ ಅಮರನಾಥ ಯಾತ್ರೆ Read More »

ಪುತ್ತೂರು: ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಪೋಷಕರ ಸಭೆ

ಸಮಗ್ರ ನ್ಯೂಸ್: ಪುತ್ತೂರು,ಜು 4; ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪೋಷಕರ ಸಭೆಯು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ವಹಿಸಿದ್ದರು. ಶಾಲೆಯ ಶೈಕ್ಷಣಿಕ ವಿಚಾರಗಳ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ಅವರು ಮಾತನಾಡಿ ಬೆಳೆಯುತ್ತಿರುವ ಎವಿಜಿ ಶಾಲೆಯಲ್ಲಿ ಈ ವರ್ಷ ಶಾಲಾ ಕೊಠಡಿ, ಆಟದ ಮೈದಾನ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಶೌಚಾಲಯ, ಕಂಪ್ಯೂಟರ್ ಹಾಗೂ ಲೈಬ್ರರಿ ಕೊಠಡಿಗಳು ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಎರಡು ವಾಹನಗಳ

ಪುತ್ತೂರು: ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಪೋಷಕರ ಸಭೆ Read More »

ಖ್ಯಾತ ಜ್ಯೋತಿಷಿ ಭೀಮರಾವ್ ವಾಷ್ಠರ್ ಅವರು ಕರ್ನಾಟಕ ರಾಜ್ಯ ಅಲೆಮಾರಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿ ನೇಮಕ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ ಬೆಂಗಳೂರು (ರಿ ) ಇದರ ರಾಜ್ಯ ಉಪಾಧ್ಯಕ್ಷರಾಗಿ ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ, ಚಿತ್ರ ನಿರ್ದೇಶಕ, ಗಾಯಕರಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ (ಗೊಂಧಳಿ) ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಪ್ರಕಾಶ್ ಎಂ ಮತ್ತು ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರುಗಳು ಬೆಂಗಳೂರಿನ ಗಾಂಧಿ

ಖ್ಯಾತ ಜ್ಯೋತಿಷಿ ಭೀಮರಾವ್ ವಾಷ್ಠರ್ ಅವರು ಕರ್ನಾಟಕ ರಾಜ್ಯ ಅಲೆಮಾರಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿ ನೇಮಕ Read More »

ಭಾರತ-ಜಿಂಬಾಬ್ವೆ ನಡುವೆ ಇಂದು ಮೊದಲ ಪಂದ್ಯ/ ಗಿಲ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ

ಸಮಗ್ರ ನ್ಯೂಸ್‌: ಭಾರತ ಮತ್ತು ಜಿಂಬಾಬ್ವೆ ನಡುವಣ ಟಿ20 ಸರಣಿಯು ಇಂದಿನಿಂದ ಶುರುವಾಗಲಿದ್ದು, ಶುಭಮನ್ ಗಿಲ್ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ ಸಮಯವಾಗಿದೆ. ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30 ರಿಂದ ಶುರುವಾಗಲಿದೆ. ಟಿ20 ವಿಶ್ವಕಪ್ ತಂಡದಲ್ಲಿದ್ದ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಹೀಗಾಗಿ ಈ ಸರಣಿಗೆ ಯಂಗ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವನ್ನು ಯುವ ಆಟಗಾರ ಶುಭ್‌ಮನ್ ಗಿಲ್ ಮುನ್ನಡೆಸಲಿದ್ದಾರೆ. ಅದರಂತೆ

ಭಾರತ-ಜಿಂಬಾಬ್ವೆ ನಡುವೆ ಇಂದು ಮೊದಲ ಪಂದ್ಯ/ ಗಿಲ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ Read More »

ಸುಳ್ಯ: ಗಣಿಗಾರಿಕೆಯಿಂದ ಸ್ಥಳೀಯರಿಗಿಲ್ಲ ನೆಮ್ಮದಿ| ಮರ್ಕಂಜ‌ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜದ ಅಳವುಪಾರೆ ಎಂಬಲ್ಲಿ ನಡೆಸಲಾಗುತ್ತಿರುವ ಗಣಿಗಾರಿಕೆಯಿಂದ ಸ್ಥಳೀಯರಿಗೆ ನೆಮ್ಮದಿ ಇಲ್ಲವಾಗಿದೆ.‌ ಕೆರೆ, ಬೋರ್ ವೆಲ್ ಗಳು ಬತ್ತಿ‌ ಹೋಗಿದ್ದು, ಶಾಲೆ, ದೇವಸ್ಥಾನಗಳು ಬಿರುಕು ಬಿಟ್ಟಿವೆ.‌ ದೂರು‌ ನೀಡಲು ಹೋದರೆ ಗ್ರಾಮಸ್ಥರ ಮೇಲೆಯೇ ಕೇಸು‌ ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮರ್ಕಂಜ ಗ್ರಾ.ಪಂ ನ ಗ್ರಾಮಸಭೆಯಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆದವು. ಗ್ರಾಮದ ಅಳವುಪಾರೆ ಎಂಬಲ್ಲಿ ಗಣಿಗಾರಿಕೆ

ಸುಳ್ಯ: ಗಣಿಗಾರಿಕೆಯಿಂದ ಸ್ಥಳೀಯರಿಗಿಲ್ಲ ನೆಮ್ಮದಿ| ಮರ್ಕಂಜ‌ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ Read More »

‘ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ‌ಒಬ್ಬ ಹುಚ್ಚ. ಆಸ್ಪತ್ರೆಗೆ ಸೇರಿ‌ ಚಿಕಿತ್ಸೆ ಪಡೆಯಲಿ’| ಡಿಸಿಎಂ ಡಿ.ಕೆ ಶಿವಕುಮಾರ್ ‌ವಾಗ್ದಾಳಿ

ಸಮಗ್ರ ನ್ಯೂಸ್: ‘ಕೇಂದ್ರ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮುಡಾ ಹಗರಣ ಹೊರಬರುವಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂಬ ಕುಮಾರಸ್ವಾಮಿ ಪರೋಕ್ಷ ಆರೋಪಕ್ಕೆ ಶುಕ್ರವಾರ ವಿಧಾನಸೌಧದಲ್ಲಿ ಕಿಡಿಕಾರಿದ ಅವರು, ಮುಡಾ ಹಗರಣ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ. ಹುಚ್ಚು ಹಿಡಿದಿರುವ ಕಾರಣ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು. ಕೆಲವೊಬ್ಬರಿಗೆ ಪ್ರತಿದಿನ ನನ್ನನ್ನು ನೆನಪಿಸಿಕೊಳ್ಳದಿದ್ದರೆ

‘ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ‌ಒಬ್ಬ ಹುಚ್ಚ. ಆಸ್ಪತ್ರೆಗೆ ಸೇರಿ‌ ಚಿಕಿತ್ಸೆ ಪಡೆಯಲಿ’| ಡಿಸಿಎಂ ಡಿ.ಕೆ ಶಿವಕುಮಾರ್ ‌ವಾಗ್ದಾಳಿ Read More »