July 2024

ಚಿಕ್ಕಮಗಳೂರು ಜಿಲ್ಲೆಯಲ್ಲಿ ‌ರೆಡ್ ಅಲರ್ಟ್ ‌ಹಿನ್ನಲೆ| ಜು.31ರಂದು ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಮಲೆನಾಡು ಭಾಗದಲ್ಲಿ ಧಾರಾಕಾರ ಮ‌ಳೆ‌ ಹಿನ್ನೆಲೆಯಲ್ಲಿ ನಾಳೆ ಮಲೆನಾಡಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಲೆನಾಡು ಭಾಗದ ಆರು ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜು, ಪದವಿ ಕಾಲೇಜಿಗಳಿಗೆ ಜು.31ರಂದು ರಜೆ ಘೋಷಣೆ ಮಾಡಲಾಗಿದೆ. ಧಾರಾಕಾರ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಜೆ‌‌ ಘೋಷಣೆ ಮಾಡಲಾಗಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಿಕ್ಕಮಗಳೂರು, ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ‌ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ನೀಡಿ ಆದೇಶಿಸಿದ್ದಾರೆ. […]

ಚಿಕ್ಕಮಗಳೂರು ಜಿಲ್ಲೆಯಲ್ಲಿ ‌ರೆಡ್ ಅಲರ್ಟ್ ‌ಹಿನ್ನಲೆ| ಜು.31ರಂದು ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಉಜಿರೆ: ಎಸ್.ಡಿ‌.ಎಂ ಆಸ್ಪತ್ರೆಯ ಪಾರ್ಕಿಂಗ್ ಏರಿಯಾ ಕುಸಿತ| ಹಲವು ವಾಹನಗಳು ಜಖಂ

ಸಮಗ್ರ ನ್ಯೂಸ್: ಮಹಾಮಳೆಗೆ ಕ್ಷಣಕ್ಕೊಂದು ದುರಂತ ನಡೆಯುತ್ತಿದ್ದು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ತಡೆಗೋಡೆ ಕುಸಿತವಾಗಿ ಹಲವು ವಾಹನಗಳು ಜಖಂ ಆಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ತಡೆಗೋಡೆ ಕುಸಿತವಾಗಿದೆ. ಅಂದಾಜು 25ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಆಸ್ಪತ್ರೆ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿತ್ತು.ತಡೆಗೋಡೆ ದ್ವಿಚಕ್ರ ವಾಹನಗಳ ಮೇಲೆ ಕುಸಿದು ಬಿದ್ದಿದ್ದು, ತಡೆಗೋಡೆ ಅಡಿ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳು ಜಖಂ ಆಗಿದೆ.

ಉಜಿರೆ: ಎಸ್.ಡಿ‌.ಎಂ ಆಸ್ಪತ್ರೆಯ ಪಾರ್ಕಿಂಗ್ ಏರಿಯಾ ಕುಸಿತ| ಹಲವು ವಾಹನಗಳು ಜಖಂ Read More »

ಪ್ಯಾರಿಸ್‌ ಒಲಿಂಪಿಕ್ಸ್‌ ೨೦೨೪/ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

ಸಮಗ್ರ ನ್ಯೂಸ್‌: ಭಾರತೀಯ ಶೂಟರ್‌ ಮನು ಭಾಕರ್ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಶೂಟರ್ ಮನು ಭಾಕರ್ ಇದೀಗ ಮತ್ತೊಂದು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬೋತ್ ಸಿಂಗ್ ಜತೆಗೂಡಿ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ

ಪ್ಯಾರಿಸ್‌ ಒಲಿಂಪಿಕ್ಸ್‌ ೨೦೨೪/ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್ Read More »

ಶಿರಾಡಿ‌ ಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ| ಹಲವು ವಾಹನಗಳು ಜಖಂ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸುರಿಯುವ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡಗಾಡುಗಳು ಕುಸಿಯುತ್ತಿವೆ. ಶಿರಾಡಿ ಘಾಟ್​ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತವಾಗಿದೆ. ಇದೀಗ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಗಂಟೆಗಟ್ಟಲೆ ಕಿಲೋಮೀಟರ್​ ತನಕ ವಾಹನಗಳು ಸಾಲುಗಟ್ಟಿ ನಿಂತಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಚಲಿಸುತ್ತಿದ್ದ ಕಾರು ,ಲಾರಿ,ಗ್ಯಾಸ್ ಟ್ಯಾಂಕರ್ ಮೇಲೆ ಗುಡ್ಡ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದಿದೆ .ಇಂದು ಮತ್ತೊಮ್ಮೆ

ಶಿರಾಡಿ‌ ಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ| ಹಲವು ವಾಹನಗಳು ಜಖಂ Read More »

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ‌ ಹರಿಯುತ್ತಿರುವ ನೇತ್ರಾವತಿ| ಕುಮಾರಧಾರ – ನೇತ್ರಾವತಿ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ| ಇತ್ತ‌ ರಾ.ಹೆದ್ದಾರಿಯತ್ತ ಆವರಿಸಿದ ನೆರೆನೀರು

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ, ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ನೇತ್ರಾವತಿ ಮತ್ತು ಕುಮಾರದಾರ ನದಿಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ 29.09 ಮೀಟರ್ ನಷ್ಟು ನದಿ ನೀರಿನ ಹರಿವು ಇದ್ದು ಅಪಾಯದ ಮಟ್ಟ 31.05 ಆಗಿದೆ. ಪಂಜಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿದೆ. ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ‌ ಹರಿಯುತ್ತಿರುವ ನೇತ್ರಾವತಿ| ಕುಮಾರಧಾರ – ನೇತ್ರಾವತಿ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ| ಇತ್ತ‌ ರಾ.ಹೆದ್ದಾರಿಯತ್ತ ಆವರಿಸಿದ ನೆರೆನೀರು Read More »

ಪ್ಯಾರಿಸ್ ಒಲಿಂಪಿಕ್ -2024| ಭಾರತಕ್ಕೆ ಎರಡನೇ ಕಂಚು ತಂದ ಮನು ಭಾಕರ್

ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು ಭಾಕರ್‌, ಶೂಟಿಂಗ್‌ನಲ್ಲಿ ಮತ್ತೊಂದು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಕಣಕ್ಕಿಳಿದಿದ್ದ ಭಾಕರ್‌, ಕಂಚಿನ ಪದಕದ ಪಂದ್ಯದಲ್ಲಿ ದ.ಕೊರಿಯಾ ಜೋಡಿ ವಿರುದ್ಧ ಗೆದ್ದು ಪದಕ ಮುಡಿಗೇರಿಸಿಕೊಂಡರು.

ಪ್ಯಾರಿಸ್ ಒಲಿಂಪಿಕ್ -2024| ಭಾರತಕ್ಕೆ ಎರಡನೇ ಕಂಚು ತಂದ ಮನು ಭಾಕರ್ Read More »

ಹವಾಮಾನ ವರದಿ| 7 ಜಿಲ್ಲೆಗಳಿಗೆ ವರುಣಾಘಾತದ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ 7ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಹೆಚ್ಚಿನ ಮಳೆಯಾಗಲಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಹವಾಮಾನ ವರದಿ| 7 ಜಿಲ್ಲೆಗಳಿಗೆ ವರುಣಾಘಾತದ ಮುನ್ಸೂಚನೆ Read More »

ಬೆಳ್ಳಾರೆ:ಭಾರೀ ಮಳೆಗೆ ಉಕ್ಕಿ ಹರಿದ ಗೌರಿ ಹೊಳೆ| ಪೆರುವಾಜೆ ಜಲದುರ್ಗಾ ದೇವಸ್ಥಾನ ಜಲಾವೃತ

ಸಮಗ್ರ ನ್ಯೂಸ್: ಮಲೆನಾಡು‌ ಹಾಗೂ ಕರಾವಳಿಯಲ್ಲಿ ಭಾರಿ ಮಳೆ‌ ಸುರಿಯುತ್ತಿದ್ದು ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ಗೌರಿಹೊಳೆ‌ ಉಕ್ಕಿ ಹರಿದಿದೆ. ಪರಿಣಾಮವಾಗಿ ಪೆರುವಾಜೆಯ ಜಲದುರ್ಗಾ ದೇವಿ ಸನ್ನಿದಾನ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳು ನೆರೆ ನೀರಿನಿಂದ ಆವೃತವಾಗಿವೆ.

ಬೆಳ್ಳಾರೆ:ಭಾರೀ ಮಳೆಗೆ ಉಕ್ಕಿ ಹರಿದ ಗೌರಿ ಹೊಳೆ| ಪೆರುವಾಜೆ ಜಲದುರ್ಗಾ ದೇವಸ್ಥಾನ ಜಲಾವೃತ Read More »

ಪುತ್ತೂರು ಸಮೀಪದ ಶೇಖಮಲೆ ಬಳಿ ಗುಡ್ಡ ಕುಸಿತ| ಮಾಣಿ -ಮೈಸೂರು ರಾ.ಹೆದ್ದಾರಿ ಸಂಚಾರ ಬಂದ್

ಸಮಗ್ರ ನ್ಯೂಸ್: ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು – ಸುಳ್ಯ ರಸ್ತೆಯ ಶೇಖಮಲೆ ಎಂಬಲ್ಲಿ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮವಾಗಿಬಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಗುಡ್ಡ ಕುಸಿತದಿಂದಾಗಿ ಈಗಾಗಲೇ 4 ವಿದ್ಯುತ್‌ ಕಂಬಗಳು ನೆಲಕ್ಕುರುಳಿದೆ. ಗುಡ್ಡ ಕುಸಿತ ಮುಂದುವರಿದಿದ್ದು 2 ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಬಂಧಪಟ್ಟವರ ಕಾರ್ಯಾಚರಣೆಗೆ ಪ್ರಯಾಣಿಕರು ಕಾಯುತ್ತಿದ್ದಾರೆ. ಸದ್ಯ ಪುತ್ತೂರು ಸುಳ್ಯ ರಸ್ತೆ ಸಂಚಾರ ಬಂದ್‌ ಆಗಿದೆ ಎಂದು ತಿಳಿದುಬಂದಿದೆ.

ಪುತ್ತೂರು ಸಮೀಪದ ಶೇಖಮಲೆ ಬಳಿ ಗುಡ್ಡ ಕುಸಿತ| ಮಾಣಿ -ಮೈಸೂರು ರಾ.ಹೆದ್ದಾರಿ ಸಂಚಾರ ಬಂದ್ Read More »

ಮಂಗಳೂರು: ಟ್ಯಾಂಕರ್ ಹರಿದು ಸ್ಕೂಟಿ ಸವಾರ ದುರ್ಮರಣ

ಸಮಗ್ರ ನ್ಯೂಸ್: ಟ್ಯಾಂಕರ್ ಹರಿದು ದ್ವಿಚಕ್ರ ವಾಹನ ಸವಾರ ಸಾವಿಗೀಡಾದ ಘಟನೆ ಇಂದು ಬೆಳಿಗ್ಗೆ ನಗರದ ನಂತೂರು ಪದವು ಎಂಬಲ್ಲಿ ನಡೆದಿದೆ. ಮೃತಪಟ್ಟ ಸವಾರ ಅಡ್ಯಾರ್ ಕಣ್ಣೂರು ನಿವಾಸಿ ಎಂದು ಹೇಳಲಾಗುತ್ತಿದೆ. ನಂತೂರು ಪದವು ರಸ್ತೆಯಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನವು ಸವಾರನ ನಿಯಂತ್ರಣ ತಪ್ಪಿ ಉರುಳಿದ್ದು, ಹಿಂದಿನಿಂದ ಚಲಿಸುತ್ತಿದ್ದ ಟ್ಯಾಂಕರ್ ಸವಾರನ ಮೇಲೆ ಹರಿಯಿತು ಎನ್ನಲಾಗಿದೆ. ಇದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಟ್ಯಾಂಕರ್ ಹರಿದು ಸ್ಕೂಟಿ ಸವಾರ ದುರ್ಮರಣ Read More »