July 2024

ಪೊಲೀಸ್ ಸ್ಟೇಷನ್ ಒಳಗೆ ಪೊಲಿಸರೇ ಹೊಡೆದಾಡ್ಕೊಂಡ್ರಾ? ಎಎಸ್ಐ ಮೇಲೆ ಹೆಡ್ ಕಾನ್ಸ್ ಟೇಬಲ್ ಹಲ್ಲೆ!?

ಸಮಗ್ರ ನ್ಯೂಸ್: ಪೊಲೀಸ್ ಠಾಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಲಾಟೆ ಮಾಡಿಕೊಂಡು. ASI ಮೇಲೆ, HC ಹಲ್ಲೆಗೂ ಯತ್ನಿಸಿದ್ದಾರೆ ಎನ್ನಲಾದಂತ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಎಸ್‌ಐ ಮಂಜುನಾಥ್ ಹಾಗೂ ಹೆಚ್ ಕಾನ್ಸ್ ಸ್ಟೇಬಲ್ ಅಂಜನಾಮೂರ್ತಿ ನಡುವೆ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆ. ಜುಲೈ.16ರಂದು ಪ್ರಕರಣವೊಂದರ ಬಗ್ಗೆ ಎಎಸ್‌ಐ ಮಂಜುನಾಥ್ ಅವರು ಬೇರೆ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿದ್ದಂತ ಸಂದರ್ಭದಲ್ಲಿ ಹೆಚ್ ಸಿ ಅಂಜನಾಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಷ್ಟೇ ಅಲ್ಲದೇ ಎಎಸ್‌ಐ […]

ಪೊಲೀಸ್ ಸ್ಟೇಷನ್ ಒಳಗೆ ಪೊಲಿಸರೇ ಹೊಡೆದಾಡ್ಕೊಂಡ್ರಾ? ಎಎಸ್ಐ ಮೇಲೆ ಹೆಡ್ ಕಾನ್ಸ್ ಟೇಬಲ್ ಹಲ್ಲೆ!? Read More »

ದ.ಕ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ‌ ಮೈದಾನಗಳನ್ನು ‌ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸುತ್ತೋಲೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಕುರಿತಂತೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಲಾಗಿದ್ದು, ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳ ಮೈದಾನ ಮತ್ತು ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಗಳಿಗೆ ಬಳಸಬಾರದಾಗಿ ಸೂಚನೆ ನೀಡಲಾಗಿದೆ. ಅಲ್ಲದೇ ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸದಂತೆಯೂ ಸುತ್ತೋಲೆಯಲ್ಲಿ ಸೂಚಿಸಲಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಎಂದು ತಿಳಿಸಲಾಗಿದ್ದು, ಈ

ದ.ಕ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ‌ ಮೈದಾನಗಳನ್ನು ‌ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸುತ್ತೋಲೆ Read More »

ಗುಡ್ಡ ಕುಸಿಯುವ ಭೀತಿ ಹಿನ್ನೆಲೆ| ರಾ.ಹೆ.275 ಸಂಪಾಜೆ ಘಾಟ್ ರಸ್ತೆಯಲ್ಲಿ 4 ದಿನಗಳ ಕಾಲ ರಾತ್ರಿ ಸಂಚಾರ ಬಂದ್

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ – 275ರ ಸಂಪಾಜೆಯಿಂದ ಮಡಿಕೇರಿ ಮಧ್ಯೆ 4 ದಿನಗಳ ಕಾಲ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ವಾಹನ ಸಂಚಾರ ನಿಷೇಧ ಮಾಡಿ ಕೊಡಗು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕಿ.ಮೀ. 90.05 ರಿಂದ 90.10ರ ಕರ್ತೋಜಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ದಿನಾಂಕ 18.07.2024 ರಿಂದ 22.07.2024ರ

ಗುಡ್ಡ ಕುಸಿಯುವ ಭೀತಿ ಹಿನ್ನೆಲೆ| ರಾ.ಹೆ.275 ಸಂಪಾಜೆ ಘಾಟ್ ರಸ್ತೆಯಲ್ಲಿ 4 ದಿನಗಳ ಕಾಲ ರಾತ್ರಿ ಸಂಚಾರ ಬಂದ್ Read More »

ಸೈದಾಪುರದಲ್ಲಿ ತ್ರಿಬಲ್ ಮರ್ಡರ್.. ಪತ್ನಿ, ಅತ್ತೆ ಮತ್ತು ಮಾವನನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಸಮಗ್ರ ನ್ಯೂಸ್: ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಅತ್ತೆ-ಮಾವ ಹಾಗೂ ಪತ್ನಿಯನ್ನು ಪಾಪಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಅನ್ನಪೂರ್ಣ (25), ಕವಿತಾ (45), ಬಸವರಾಜಪ್ಪ (52) ಕೊಲೆಯಾದವರು. ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣಳನನ್ನು ನವೀನ್‌ ಮದುವೆಯಾಗಿದ್ದ. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇತ್ತು. ಆದರೆ ಪತಿ ನವೀನ್‌ ಕಿರುಕುಳ ತಾಳಲಾರದೆ

ಸೈದಾಪುರದಲ್ಲಿ ತ್ರಿಬಲ್ ಮರ್ಡರ್.. ಪತ್ನಿ, ಅತ್ತೆ ಮತ್ತು ಮಾವನನ್ನು ಬರ್ಬರವಾಗಿ ಹತ್ಯೆಗೈದ ಪಾಪಿ Read More »

ಕೇರಳದಲ್ಲಿ ಭಾರೀ ಮಳೆ ಹಿನ್ನೆಲೆ| ಕಾಸರಗೋಡು ಜಿಲ್ಲೆಯ ಶಾಲೆ, ಮದರಸಾಗಳಿಗೆ ಜು.19ರಂದು ರಜೆ ಘೋಷಣೆ

ಸಮಗ್ರ ನ್ಯೂಸ್: ಕಾಸರಗೋಡು ಜಿಲ್ಲೆಯಲ್ಲಿ ಜು.19ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಶಾಲೆ, ಮದ್ರಸಗಳಿಗೆ ಜು.19ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್ ಆದೇಶ ನೀಡಿದ್ದಾರೆ. ರಾಜ್ಯ, ಸಿ ಬಿ ಎಸ್ ಇ, ಐ ಸಿ ಎಸ್ ಇ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಅಂಗನವಾಡಿ, ಮದ್ರಸಗಳಿಗೂ ರಜೆ ಅನ್ವಯವಾಗಲಿದೆ. ಕಾಲೇಜುಗಳಿಗೆ ರಜೆ ಇಲ್ಲ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಗಾಳಿ, ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಕೇರಳದಲ್ಲಿ ಭಾರೀ ಮಳೆ ಹಿನ್ನೆಲೆ| ಕಾಸರಗೋಡು ಜಿಲ್ಲೆಯ ಶಾಲೆ, ಮದರಸಾಗಳಿಗೆ ಜು.19ರಂದು ರಜೆ ಘೋಷಣೆ Read More »

ಭಾರೀ ಮಳೆ ಹಿನ್ನೆಲೆ| ಹಾಸನ ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರುಮಳೆ ಭರ್ಜರಿಯಾಗಿ ಸುರಿಯುತ್ತಿದ್ದು ಹಲವೆಡೆ ಅನಾಹುತಗಳು ಸೃಷ್ಟಿಯಾಗುತ್ತಿವೆ. ಘಟ್ಟಪ್ರದೇಶ ಹಾಗೂ ಕರಾವಳಿಯಲ್ಲಿ ಭಾರೀ ಮಳೆ ಮುಂದುವರೆದಿದೆ. ಮಳೆಯ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಕೆ‌.ಪಾಂಡು ಆದೇಶಿಸಿದ್ದಾರೆ. ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕಿನ ಅಂಗನವಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಅವರು ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಹಾಸನ ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ರಜೆ Read More »

ದರ್ಶನ್ ಗ್ಯಾಂಗ್ ಗೆ ಮತ್ತೆ 14ದಿನ ಜೈಲೇ ಗತಿ| ನ್ಯಾಯಾಂಗ ಬಂಧನ‌ ವಿಸ್ತರಿಸಿದ ಕೋರ್ಟ್‌

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಗೆ ಜೈಲೇ ಗತಿ ಆಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಬಂಧನವಾಗಿದ್ದು, ಇಂದು ಅವರ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿತ್ತು. ಈ ಹಿನ್ನೆಲೆ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲದ ನಟ ದರ್ಶನ್ ರನ್ನು ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ

ದರ್ಶನ್ ಗ್ಯಾಂಗ್ ಗೆ ಮತ್ತೆ 14ದಿನ ಜೈಲೇ ಗತಿ| ನ್ಯಾಯಾಂಗ ಬಂಧನ‌ ವಿಸ್ತರಿಸಿದ ಕೋರ್ಟ್‌ Read More »

ಶಿರಾಡಿ‌ ಘಾಟ್ ನಲ್ಲಿ ಗುಡ್ಡ ಕುಸಿತ| ಪರ್ಯಾಯ ಮಾರ್ಗ ಬಳಕೆಗೆ ಸೂಚನೆ

ಸಮಗ್ರ ನ್ಯೂಸ್: ಭಾರೀ ಮಳೆ ಪ್ರಭಾವದಿಂದ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಈ ನಿಟ್ಟಿನಲ್ಲಿ ಸಕಲೇಶಪುರ, ಹಾಸನ, ಬೆಂಗಳೂರು ತೆರಳುವ ವಾಹನಗಳು ಬದಲಿ ರಸ್ತೆಯಲ್ಲಿ ಚಲಿಸುವಂತೆ ಮಾಣಿಯಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಬೆಂಗಳೂರು ಸೇರಿದಂತೆ ಸಕಲೇಶಪುರ, ಹಾಸನ ತೆರಳುವ ವಾಹನಗಳು ಬದಲಿ ರಸ್ತೆಗಳಾದ ಮಡಿಕೇರಿ, ಮೈಸೂರು ಮಾರ್ಗವಾಗಿ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಸನ ಭಾಗದಿಂದ ಬರುವ ಪ್ರಯಾಣಿಕರು ಚಾರ್ಮಾಡಿ ಘಾಟ್ ರಸ್ತೆ

ಶಿರಾಡಿ‌ ಘಾಟ್ ನಲ್ಲಿ ಗುಡ್ಡ ಕುಸಿತ| ಪರ್ಯಾಯ ಮಾರ್ಗ ಬಳಕೆಗೆ ಸೂಚನೆ Read More »

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ| AIMS ನ ನಾಲ್ಕು ಮಂದಿ‌ ವಿದ್ಯಾರ್ಥಿಗಳು ಸಿಬಿಐ ವಶಕ್ಕೆ

ಸಮಗ್ರ ನ್ಯೂಸ್: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮಹತ್ವದ ಬೆಳವಣಿಗೆಯಲ್ಲಿ, ಕೇಂದ್ರ ತನಿಖಾ ದಳ (ಸಿಬಿಐ) ಪಾಟ್ನಾ ಏಮ್ಸ್ ಒಟ್ಟು ನಾಲ್ಕು ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ. ಬಂಧಿತ ವಿದ್ಯಾರ್ಥಿಗಳು 2021ರ ಬ್ಯಾಚ್ಗೆ ಸೇರಿದವರಾಗಿದ್ದಾರೆ. ಅವರ ಬಂಧನದ ನಂತರ, ಸಿಬಿಐ ಅವರ ಕೊಠಡಿಗಳನ್ನು ಸೀಲ್ ಮಾಡಿತು ಮತ್ತು ಅವರ ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿತು. ಮೂಲಗಳ ಪ್ರಕಾರ, ಸೋರಿಕೆಯಾದ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಪರಿಹರಿಸಲು ಪರೀಕ್ಷಾ ಮಾಫಿಯಾ ಈ ವಿದ್ಯಾರ್ಥಿಗಳ ಸಹಾಯವನ್ನು ಪಡೆದುಕೊಂಡಿದೆ ಎಂದು ತನಿಖಾ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ| AIMS ನ ನಾಲ್ಕು ಮಂದಿ‌ ವಿದ್ಯಾರ್ಥಿಗಳು ಸಿಬಿಐ ವಶಕ್ಕೆ Read More »

ಅಂಕೋಲಾ: ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಶವ ಪತ್ತೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಕಾಣೆಯಾಗಿದ್ದ ಬಾಲಕಿ ಅವಂತಿಕಾಳ (6) ಮೃತದೇಹ ಪತ್ತೆಯಾಗಿದೆ. ಜುಲೈ 16 ರಂದು ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಮಣ್ಣಿನಡಿ ಬಿದ್ದು ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಮತ್ತೋರ್ವ ಬಾಲಕಿ ಅವಂತಿಕಾ ಮೃತದೇಹ ಪತ್ತೆಯಾಗಿದೆ. ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ

ಅಂಕೋಲಾ: ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಶವ ಪತ್ತೆ Read More »