July 2024

ಶಿರಾಡಿ‌ ಘಾಟ್ ನಲ್ಲಿ ಮತ್ತೆ ಕುಸಿತ| ಮಣ್ಣಿನಡಿ ಸಿಲುಕಿದ ಹೈವೇ ಪಟ್ರೋಲ್ ವಾಹನ

ಸಮಗ್ರ ನ್ಯೂಸ್: ಬೆಂಗಳೂರು ಮಂಗಳೂರು ರಾ.ಹೆದ್ದಾರಿಯ ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಮಣ್ಣು ಕುಸಿತದಲ್ಲಿ ಪೊಲೀಸ್ ವಾಹನ ಸಿಲುಕಿಕೊಂಡ ಘಟನೆ ಇಂದು ನಡೆದಿದೆ. ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಲೆ ಬಳಿ ಘಟನೆ ನಡೆದಿದು ಪೊಲೀಸರು ನಿಲ್ಲಿಸಿದ್ದ ವಾಹನದ ಬಳಿಯೇ ಭೂಕುಸಿತ ಸಂಭವಿಸಿದೆ. KA-13 G-1713 ನಂಬರ್‌ನ ಹೈವೇ ಪಾಟ್ರೋಲ್ ವಾಹನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವು ನಡೆಸಲಾಗಿದೆ.

ಶಿರಾಡಿ‌ ಘಾಟ್ ನಲ್ಲಿ ಮತ್ತೆ ಕುಸಿತ| ಮಣ್ಣಿನಡಿ ಸಿಲುಕಿದ ಹೈವೇ ಪಟ್ರೋಲ್ ವಾಹನ Read More »

ಶಿರೂರು ಗುಡ್ಡ ಪ್ರಕರಣ| ‘ ನೀವ್ ಹೇಳ್ದಂಗೆ ಕೇಳೋಕೆ ಆಗಲ್ಲ’| ಐಆರ್ ಬಿ ಅಧಿಕಾರಿಗಳಿಗೆ ಸಿಎಂ ಕ್ಲಾಸ್

ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯ ಐಆರ್‌ಬಿಗೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಕಾರವಾರ ನಗರದ ಸಿಇಒ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಐಆರ್‌ಬಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸಖತ್‌ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಸಂಗ್ರಹ ಸರಿಯಿಲ್ಲ. 2016ಕ್ಕೆ ಮುಕ್ತಾಯವಾಗಬೇಕಿದ್ರೂ ಈವರೆಗೂ ಮುಕ್ತಾಯಗೊಳಿಸಿಲ್ಲ. ಈ ಕಾಮಗಾರಿ ಬಗ್ಗೆ ಕೇಂದ್ರ ಸಚಿವರಿಗೂ ಮಿಸ್ ಲೀಡಿಂಗ್ ಮಾಡುತ್ತಿದ್ದೀರಿ. ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡುತ್ತಿದ್ದೀರಿ. ನೀವು ಹೇಳಿದ ಹಾಗೆ ಕೇಳುವುದಕ್ಕೆ

ಶಿರೂರು ಗುಡ್ಡ ಪ್ರಕರಣ| ‘ ನೀವ್ ಹೇಳ್ದಂಗೆ ಕೇಳೋಕೆ ಆಗಲ್ಲ’| ಐಆರ್ ಬಿ ಅಧಿಕಾರಿಗಳಿಗೆ ಸಿಎಂ ಕ್ಲಾಸ್ Read More »

ಇಂದು ಪ್ರಜ್ವಲ್‌, ಸೂರಜ್‌ ರೇವಣ್ಣ ಜಾಮೀನು ಭವಿಷ್ಯ: ಸಹೋದರರಿಗೆ ಸಿಗುತ್ತಾ ಬಿಗ್ ರಿಲೀಫ್..!

ಸಮಗ್ರ ನ್ಯೂಸ್: ಅತ್ಯಾಚಾರ ಕೇಸ್ ನಲ್ಲಿ ಜೈಲಿನಲ್ಲಿ ಇರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರರಾದ ಪ್ರಜ್ವಲ್‌ ರೇವಣ್ಣ ಮತ್ತು ಸೂರಜ್‌ ರೇವಣ್ಣ ಪಾಲಿಗೆ ಇಂದು ಮಹತ್ವದ ದಿನ ಆಗಲಿದೆ. ಇಂದು ಸಹೋದರರ ಜಾಮೀನು ಕುರಿತಾದ ಆದೇಶ ಇಂದು ಪ್ರಕಟವಾಗಲಿದೆ. ಹೀಗಾಗಿ ಇಬ್ಬರಿಗೂ ರಿಲೀಫ್‌ ಸಿಗುತ್ತಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಜೈಲು ಕಂಬಿ ಎಣಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಸಿಐಡಿ

ಇಂದು ಪ್ರಜ್ವಲ್‌, ಸೂರಜ್‌ ರೇವಣ್ಣ ಜಾಮೀನು ಭವಿಷ್ಯ: ಸಹೋದರರಿಗೆ ಸಿಗುತ್ತಾ ಬಿಗ್ ರಿಲೀಫ್..! Read More »

ಉತ್ತರ ಕನ್ನಡ: ಗುಡ್ಡ ಕುಸಿತ ಸ್ಥಳ ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ಪರಿಶೀಲನೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಭಾನುವಾರ (ಜು.21) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಕಾರ್ಯಾಚರಣೆಯ ಪ್ರಗತಿ ಮತ್ತು SDRF ಹಾಗೂ NDRF ಸಿಬ್ಬಂದಿಗೆ ಎದುರಾಗುತ್ತಿರುವ ಸವಾಲುಗಳನ್ನು ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿ, ಉನ್ನತ ಮೆಟಲ್ ಡಿಟೆಕ್ಟರ್ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲು ಸಿಎಂ ಸೂಚನೆ ಮತ್ತು ಸೂಚನೆ. ಜೊತೆಗೆ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಯವರಿಗೆ ಸಿಎಂ ಶ್ಲಾಘನೆ

ಉತ್ತರ ಕನ್ನಡ: ಗುಡ್ಡ ಕುಸಿತ ಸ್ಥಳ ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ಪರಿಶೀಲನೆ Read More »

ಉಪ್ಪಿನಂಗಡಿ: ಯುವತಿ ಸ್ನಾನ ಮಾಡುತ್ತಿದ್ದಾಗ‌ ಇಣುಕಿದ ಎರಡು ಮಕ್ಕಳ ತಂದೆ| ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಸಮಗ್ರ ನ್ಯೂಸ್: ಯುವತಿ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ನೋಡಲೆತ್ನಿಸಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪೆರಿಯಡ್ಕ‌ ಎಂಬಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ. ಆರೋಪಿತ ವ್ಯಕ್ತಿ ವಿವಾಹಿತನಾಗಿದ್ದು, 16 ಹಾಗೂ 9 ವರ್ಷದ ಇಬ್ಬರು ಮಕ್ಕಳ ತಂದೆಯಾಗಿದ್ದಾನೆ. ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯ ಬಾಗಿಲನ್ನು ಸರಿಸಲು ಯತ್ನಿಸಿದ್ದ ವೇಳೆ ಉಂಟಾದ ಶಬ್ದದಿಂದ ಸಂಶಯಗೊಂಡ ಯುವತಿ ತನ್ನ ತಾಯಿಗೆ ಮಾಹಿತಿ ನೀಡಿದರು. ತಾಯಿ ಪರಿಶೀಲಿಸಿದಾಗ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ರಹಿಮಾನ್ ಎಂದು ಗುರುತಿಸಿದ್ದರು.

ಉಪ್ಪಿನಂಗಡಿ: ಯುವತಿ ಸ್ನಾನ ಮಾಡುತ್ತಿದ್ದಾಗ‌ ಇಣುಕಿದ ಎರಡು ಮಕ್ಕಳ ತಂದೆ| ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು Read More »

ಭರ್ತಿಯಾದ ಕೆಆರ್‌ಎಸ್‌/ ಜು.27ರಂದು ಮುಖ್ಯಮಂತ್ರಿಯಿಂದ ಬಾಗಿನ

ಸಮಗ್ರ ನ್ಯೂಸ್‌: ಉತ್ತಮ ಮಳೆಯಿಂದ ಜುಲೈ ತಿಂಗಳಲ್ಲೇ ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜು.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು. ನಮ್ಮ ರೈತ ಕುಲಕ್ಕೆ ಇದೊಂದು ರೀತಿಯ ಹಬ್ಬ. ಹೀಗಾಗಿ ತುಂಬಿರುವ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಾಗುವುದು ಎಂದು ಕೆಆರ್‌ಎಸ್‌ ವೀಕ್ಷಣೆ ಮಾಡಿದ ಬಳಿಕ ಹೇಳಿದರು. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿ ಸಚಿವರು ಹಾಗೂ ಮಂಡ್ಯ, ಮೈಸೂರು ಭಾಗದ

ಭರ್ತಿಯಾದ ಕೆಆರ್‌ಎಸ್‌/ ಜು.27ರಂದು ಮುಖ್ಯಮಂತ್ರಿಯಿಂದ ಬಾಗಿನ Read More »

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ನೂತನ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ ನಿರ್ಮಲಾ|

ಸಮಗ್ರ ನ್ಯೂಸ್: ಸಂಸತ್ತಿನ ಬಜೆಟ್‌ ಅಧಿವೇಶನವು ಇಂದಿನಿಂದ (ಜುಲೈ 22) ಆರಂಭವಾಗಲಿದ್ದು, ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಜ್ಜಾಗಿದ್ದಾರೆ. ಇಂದಿನಿಂದ ಆರಂಭವಾಗುವ ಬಜೆಟ್‌ ಅಧಿವೇಶನವು ಆಗಸ್ಟ್‌ 12ರವರೆಗೆ ನಡೆಯಲಿದೆ. ಜುಲೈ 23ರಂದು ಬಜೆಟ್‌ ಮಂಡಿಸಲಾಗುತ್ತದೆ. ಅಧಿವೇಶನದಲ್ಲಿ 16 ಕಲಾಪಗಳು ನಡೆಯಲಿವೆ. ಸೋಮವಾರವೇ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಅಧಿವೇಶನದ ವೇಳೆ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ (ತಿದ್ದುಪಡಿ) ವಿಧೇಯಕ, ಭಾರತೀಯ ವಾಯುಯಾನ ವಿಧೇಯಕ ಸೇರಿ ಒಟ್ಟು

ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ| ನೂತನ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿರುವ ನಿರ್ಮಲಾ| Read More »

ಸುಳ್ಯ: ಬಸ್ – ಸ್ಕೂಟಿ ನಡುವೆ ಅಪಘಾತ| ಗ್ರಾ.ಪಂ ಸದಸ್ಯ ದುರ್ಮರಣ

ಸಮಗ್ರ ನ್ಯೂಸ್: ಸ್ಕೂಟಿ ಹಾಗೂ ಬಸ್ ಪರಸ್ಪರ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಸುಳ್ಯ ತಾಲೂಕಿನ ನೆ.ಕೆಮ್ರಾಜೆ ಗ್ರಾ.ಪಂ. ಸದಸ್ಯ ಹಾಗೂ ಪಿಗ್ಮಿ ಸಂಗ್ರಾಹಕರಾಗಿರುವ ರಾಮಚಂದ್ರ ಪ್ರಭು ಅವರು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಜಾಲ್ಸೂರು – ಸುಬ್ರಹ್ಮಣ್ಯ ರಾ.ಹೆದ್ದಾರಿಯ ಸೋಣಂಗೇರಿಯ ಸುತ್ತುಕೋಟೆ ಬಳಿ ಸಂಭವಿಸಿದೆ. ರಾಮಚಂದ್ರ ಪ್ರಭು ಅವರು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸುತ್ತುಕೋಟೆ ಬಳಿ ಡಿಕ್ಕಿ ಹೊಡೆದಿದ್ದು, ರಾಮಚಂದ್ರ ಪ್ರಭುರವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆಂದು

ಸುಳ್ಯ: ಬಸ್ – ಸ್ಕೂಟಿ ನಡುವೆ ಅಪಘಾತ| ಗ್ರಾ.ಪಂ ಸದಸ್ಯ ದುರ್ಮರಣ Read More »

ಹವಾಮಾನ ವರದಿ| ಜು.25ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ‌ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯಾದ್ಯಂತ ಮುಂದಿನ 5 ದಿನಗಳವರೆಗೆ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಗಳಿದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಜು. 25ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಜುಲೈ 23ರ ವರೆಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಈ ಮೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ 30-40 ಕಿಮೀ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಬೆಳಗಾವಿ, ಬೀದರ್‌, ಕಲಬುರಗಿ

ಹವಾಮಾನ ವರದಿ| ಜು.25ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ‌ಮಳೆ ಸಾಧ್ಯತೆ Read More »

ಕನ್ನಡಿಗರಿಗೆ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌

ಸಮಗ್ರ ನ್ಯೂಸ್: ಇತ್ತೀಚೆಗೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ ಇದೀಗ ಕ್ಷಮೆಯಾಚಿಸಿದ್ದಾರೆ. ಈ ಕಾರಣಕ್ಕೆ ಕರ್ನಾಟಕದಾದ್ಯಂತ ಬಾಯ್ಕಾಟ್‌ ಫೋನ್‌ ಪೇ (Boycott PhonePe) ಎಂಬ ಅಭಿಯಾನ ಆರಂಭವಾದ ಬೆನ್ನಲ್ಲೇ, ಸಮೀರ್‌ ನಿಗಮ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ ಮೂಲಕ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ನಿಗಮ್‌ ಅವರು ಪೋಸ್ಟ್‌ ಮಾಡಿದ್ದಾರೆ. “ಕಳೆದ ವಾರ

ಕನ್ನಡಿಗರಿಗೆ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌ Read More »