July 2024

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿ/ ಶೀಘ್ರದಲ್ಲೇ ಹೆಚ್ಚಾಗುತ್ತೆ ಗೌರವಧನ

ಸಮಗ್ರ ನ್ಯೂಸ್‌: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸರ್ಕಾರದ ಮುಂದಾಗಿದ್ದು, ಶೀಘ್ರದಲ್ಲೇ ಹೆಚ್ಚಳ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಅನುದಾನ ಮಾತ್ರವಲ್ಲ, ಅಂಗನವಾಡಿ ಕೇಂದ್ರಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಕೂಡಲೇ ಭರ್ತಿ ಮಾಡಬೇಕೆಂದು ಪ್ರತಿಪಕ್ಷ ನಾಯಕರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೇಮಕಾತಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿ/ ಶೀಘ್ರದಲ್ಲೇ ಹೆಚ್ಚಾಗುತ್ತೆ ಗೌರವಧನ Read More »

ಪ್ಯಾರಿಸ್‌ ಒಲಿಂಪಿಕ್ಸ್‌ ೨೦೨೪/ ಇಂದಿನಿಂದ ಭಾರತದ ಒಲಿಂಪಿಕ್ಸ್ ಅಭಿಯಾನ ಶುರು

ಸಮಗ್ರ ನ್ಯೂಸ್‌: ಭಾರತವು ಇಂದಿನಿಂದ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿದ್ದು, ಬಿಲ್ಲುಗಾರಿಕೆ (ಆರ್ಚರಿ) ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್, ಬಿ ಧೀರಜ್, ತರುಣ್‌ದೀಪ್ ರೈ ಮತ್ತು ಪ್ರವೀಣ್ ಜಾಧವ್ ಸ್ಪರ್ಧಿಸಲಿದ್ದಾರೆ. ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಸ್ಪರ್ಧೆ ನಡೆಯಲಿದೆ. ಇದಾದ ಬಳಿಕ ಪುರುಷರ ವೈಯುಕ್ತಿಕ ಶ್ರೇಯಾಂಕ ಸುತ್ತಿನ ಆರ್ಚರಿ ಸ್ಪರ್ಧೆಗಳು ನಡೆಯಲಿವೆ. ಭಾರತೀಯ ಬಿಲ್ಲುಗಾರರ ಪದಕದ ಮಹತ್ವಾಕಾಂಕ್ಷೆಗೆ ಇಂದಿನ ಶ್ರೇಯಾಂಕದ ಸುತ್ತು ನಿರ್ಣಾಯಕವಾಗಿರುತ್ತದೆ. ಶ್ರೇಯಾಂಕದ ಸುತ್ತಿನಿಂದ ಆಗ್ರ ನಾಲ್ಕು ಶ್ರೇಯಾಂಕದ ತಂಡಗಳು ನೇರವಾಗಿ

ಪ್ಯಾರಿಸ್‌ ಒಲಿಂಪಿಕ್ಸ್‌ ೨೦೨೪/ ಇಂದಿನಿಂದ ಭಾರತದ ಒಲಿಂಪಿಕ್ಸ್ ಅಭಿಯಾನ ಶುರು Read More »

ಕಾಂಗ್ರೆಸ್‌ ಗ್ಯಾರೆಂಟಿಗೆ ಬ್ರೇಕ್‌ ಹಾಕಿದ ರಾಜಸ್ಥಾನ ಬಿಜೆಪಿ ಸರ್ಕಾರ

ಸಮಗ್ರ ನ್ಯೂಸ್‌: ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಪ್ರತಿ ಮನೆಗೆ ಮಾಸಿಕ 100 ಯುನಿಟ್‌ ಉಚಿತ ವಿದ್ಯುತ್‌ ಹಾಗೂ ಮಹಿಳೆಯರಿಗೆ ಉಚಿತ ಮೊಬೈಲ್‌ ಫೋನ್‌ ಸ್ಕೀಂಗಳಿಗೆ ಈಗಿನ ಬಿಜೆಪಿ ಸರ್ಕಾರ ಬ್ರೇಕ್‌ ಹಾಕಿದ್ದು, ಹಳೆಯ ಫಲಾನುಭವಿಗಳಿಗೆ ಯೋಜನೆ ಮುಂದುವರಿಸಿ ಹೊಸಬರಿಗೆ ಯೋಜನೆ ಅನ್ವಯ ಆಗದಂತೆ ನಿಯಮ ಮಾರ್ಪಡಿಸಿದೆ. ಈ ವರ್ಷದ ಕೊನೆಯಲ್ಲಿ ನಡೆದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್‌ನ ಅಶೋಕ್‌ ಗೆಹ್ಲೋಟ್ ಸರ್ಕಾರ ಪ್ರತಿ ಮನೆಗೆ ಮಾಸಿಕ 100

ಕಾಂಗ್ರೆಸ್‌ ಗ್ಯಾರೆಂಟಿಗೆ ಬ್ರೇಕ್‌ ಹಾಕಿದ ರಾಜಸ್ಥಾನ ಬಿಜೆಪಿ ಸರ್ಕಾರ Read More »

‘ಅಮಿತ್ ಜೊತೆಗೆ ಹೋಗುತ್ತಿದ್ದೇನೆ’| ಪತಿಗೆ ಮೆಸೇಜ್ ಕಳುಹಿಸಿ ಪಿಸಿಯೋಥೆರಪಿ ವಿದ್ಯಾರ್ಥಿನಿ ನಾಪತ್ತೆ

ಸಮಗ್ರ ನ್ಯೂಸ್: ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಗಳಾದೇವಿ ನಿವಾಸಿ ಮಹಿಳೆಯೋರ್ವಳು ತನ್ನ ಪತಿಗೆ ವಾಟ್ಸ್‌ಆಯಪ್‌ ಮೂಲಕ ಸಂದೇಶ ಕಳುಹಿಸಿ ಬಳಿಕ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಿಯಾ ರಂಜಿತ್‌ (25) ನಾಪತ್ತೆಯಾದವರು. ಅವರು ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಫಿಸಿಯೋಥೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಜು. 17ರಂದು ಬೆಳಗ್ಗೆ 7.45ಕ್ಕೆ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ಸಂಜೆ 5ಕ್ಕೆ ಪತಿಗೆ ವಾಟ್ಸ್‌ಆಯಪ್‌ ಮೂಲಕ ಮೆಸೇಜ್‌ ಮಾಡಿ “ತಾನು ಅಮಿತ್‌ ಎಂಬವನೊಂದಿಗೆ ಹೋಗುತ್ತಿದ್ದು,

‘ಅಮಿತ್ ಜೊತೆಗೆ ಹೋಗುತ್ತಿದ್ದೇನೆ’| ಪತಿಗೆ ಮೆಸೇಜ್ ಕಳುಹಿಸಿ ಪಿಸಿಯೋಥೆರಪಿ ವಿದ್ಯಾರ್ಥಿನಿ ನಾಪತ್ತೆ Read More »

ಉಡುಪಿ ಮಳೆ ಹಿನ್ನೆಲೆ ಕಾರ್ಕಳ, ಹೆಬ್ರಿ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜು.25) ರಜೆ

ಸಮಗ್ರ ನ್ಯೂಸ್: ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.25ರಂದು ರಜೆ ಸಾರಲಾಗಿದೆ. ಕಾರ್ಕಳ ತಹಶೀಲ್ದಾರ್ ನರಸಪ್ಪ ಅವರು ನಿನ್ನೆ ರಾತ್ರಿ ರಜೆ ಘೋಷಣೆ ಮಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಈಗಾಗಲೇ ಇದನ್ನು ಎಲ್ಲ ಮುಖ್ಯಶಿಕ್ಷಕರಿಗೆ ತಿಳಿಸಿದ್ದಾರೆ.ಕೆಲದಿನ ತುಸು ಬಿಡುವು ನೀಡಿದ್ದ ಮಳೆ ನಿನ್ನೆಯಿಂದ ಮತ್ತೆ ಅಬ್ಬರಿಸಲು ತೊಡಗಿದೆ. ಮಳೆಯ ಜೊತೆಗೆ ಭಾರಿ ವೇಗದಲ್ಲಿ ಗಾಳಿಯೂ ಬೀಸುತ್ತಿರುವುದರಿಂದ ಮಕ್ಕಳ ಸುರಕ್ಷೆಯ ದೃಷ್ಟಿಯಿಂದ

ಉಡುಪಿ ಮಳೆ ಹಿನ್ನೆಲೆ ಕಾರ್ಕಳ, ಹೆಬ್ರಿ ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜು.25) ರಜೆ Read More »

ಚಿಕ್ಕಮಗಳೂರು: ಭಾರೀ ಗಾಳಿ-ಮಳೆ ಹಿನ್ನಲೆ |6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಕಡಿಮೆ ಇದ್ದರೂ, ಭಾರೀ ಗಾಳಿ ಬೀಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಇಂದು (ಜು. 25) ಮಾತ್ರ ಅಂಗನವಾಡಿ, ಪ್ರಾಥಮಿಕ-ಪ್ರೌಢ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್‌.ಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು: ಭಾರೀ ಗಾಳಿ-ಮಳೆ ಹಿನ್ನಲೆ |6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ Read More »

ಸದನದಲ್ಲಿ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ|ಅಲ್ಲೇ ಊಟ ಅಲ್ಲೇ ನಿದ್ದೆ..!

ಸಮಗ್ರ ನ್ಯೂಸ್: ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಹಿನ್ನಲೆ ವಿಧಾನಸಭೆ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಿದೆ. ಸದನದ ಬಾವಿಯೊಳಗೇ ಹಾಡು, ಭಜನೆಯ ಮಾಡಿದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು, ಸ್ವಂತ ಖರ್ಚಿನಲ್ಲಿಯೇ ಊಟ ತರಿಸಿಕೊಂಡು ಊಟ ಮಾಡಿದರು. ಬಳಿಕ ಸೋಫಾ, ನೆಲದ ಮೇಲೆ ಮಲಗಿದರು. ವಿಧಾನಸೌಧದಲ್ಲಿ ಸ್ಪೀಕರ್‌ ಊಟೋಪಚಾರವನ್ನು ತಿರಸ್ಕರಿಸಿದ ಪ್ರತಿಪಕ್ಷ ನಾಯಕರು, ಸ್ವಂತ ಖರ್ಚಿನಲ್ಲೇ ವಿಧಾನಸೌಧಕ್ಕೆ ಊಟ ತರಿಸಿಕೊಂಡು ಊಟ ಮಾಡಿದರು. ಭ್ರಷ್ಟಾಚಾರದ ಹಣದಲ್ಲಿ ನಾವು ಊಟ ಮಾಡುವುದಿಲ್ಲ

ಸದನದಲ್ಲಿ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ|ಅಲ್ಲೇ ಊಟ ಅಲ್ಲೇ ನಿದ್ದೆ..! Read More »

ಭಾರೀ ಮಳೆ ಹಿನ್ನಲೆ| ಇಂದು(ಜು.25) ಸಕಲೇಶಪುರ ತಾಲೂಕಿನ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ಉಪ ವಿಭಾಗಾಧಿಕಾರಿಗಳ ನಿರ್ದೇಶನದಂತೆ ಹಾಗೂ ಉಪ ನಿರ್ದೇಶಕರು ಆಡಳಿತ ಹಾಸನ ಇವರ ಸೂಚನೆಯ ಮೇರೆಗೆ ಸಕಲೇಶಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣದಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇಂದು ದಿನಾಂಕ 25 /7/2024 ರಂದು ಸಕಲೇಶಪುರ ತಾಲೂಕಿನ ಎಲ್ಲಾ ಸರ್ಕಾರಿ ,ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನಲೆ| ಇಂದು(ಜು.25) ಸಕಲೇಶಪುರ ತಾಲೂಕಿನ ಶಾಲೆಗಳಿಗೆ ರಜೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಚೆಕ್ ವಿತರಣೆ

ಸಮಗ್ರ ನ್ಯೂಸ್: ಕೊಡಿಯಾಲ ಕಾರ್ಯಕ್ಷೇತ್ರದಲ್ಲಿ 650494 ಧರ್ಮಶ್ರೀ ಸಂಘದ ಸದಸ್ಯರ ಕುಸುಮ ರೈ ಅವರ ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದು ಆಗ ಮರಣ ಹೊಂದಿದ್ದು ಅವರ ಪತಿ ವಿಶ್ವನಾಥ ರೈ ರವರಿಗೆ ಸಂಪೂರ್ಣ ಸುರಕ್ಷಾ 40000/ ಚೆಕ್, ಮತ್ತು ಬೆಳ್ಳಾರೆ ವಲಯದ ಅಮರಪಡ್ನೂರು ಒಕ್ಕೂಟದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ Bc ಟ್ರಸ್ಟ್ ಸರೋಜಿನಿ ಅವರ ಪತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಚಿಕಿತ್ಸೆಗೆ ಕ್ಷೇತ್ರದ ಸಂಪೂರ್ಣ ಸುರಕ್ಷದ 30000/ ಚೆಕ್ಕನ್ನು ವಿತರಣೆ ಮಾಡಲಾಯಿತು. ಕೊಡಿಯಾಲ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಚೆಕ್ ವಿತರಣೆ Read More »

ಶಿರೂರು ಗುಡ್ಡ ಕುಸಿತ ಪ್ರಕರಣ| ನಾಪತ್ತೆಯಾಗಿರುವ ಟ್ರಕ್‌ ಗಂಗಾವಳಿ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಭಾರೀ ಮಳೆಯಿಂದಾಗಿ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಈಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿಯಲ್ಲಿರುವುದು ಪತ್ತೆಯಾಗಿದೆ. ದುರಂತದಲ್ಲಿ ಒಟ್ಟು ಹತ್ತು ಜನರು ಮೃತಪಟ್ಟಿದ್ದು, ಈ ಪೈಕಿ ಕಾರ್ಯಾಚರಣೆ ಮೂಲಕ ಈವರೆಗೆ ಎಂಟು ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿಯಲ್ಲಿ ಪತ್ತೆಯಾಗಿರುವ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ದುರಂತ ಸಂಭವಿಸಿದ ಎಂಟು ದಿನಗಳು ಕಳೆದ ಬಳಿಕ ಟ್ರಕ್ ಪತ್ತೆಯಾಗಿದ್ದು, ಕಾರ್ಯಚರಣೆ ತೀವ್ರಗೊಂಡಿದೆ.

ಶಿರೂರು ಗುಡ್ಡ ಕುಸಿತ ಪ್ರಕರಣ| ನಾಪತ್ತೆಯಾಗಿರುವ ಟ್ರಕ್‌ ಗಂಗಾವಳಿ ನದಿಯಲ್ಲಿ ಪತ್ತೆ Read More »