Ad Widget .

ಸೋಮವಾರಪೇಟೆ: ಮಳೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡಿದ ಕ.ರಾ.ವೇ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಗ್ರಾಮದಲ್ಲಿ ಹಾಗೂ ಶುಂಠಿ ಮಂಗಳೂರು ಗ್ರಾಮದಲ್ಲಿ ಮಳೆಗಾಳಿಗೆ ಮನೆಗಳು ಸಂಪೂರ್ಣ ಬಿದ್ದು ಹೋಗಿದ್ದವು.

Ad Widget . Ad Widget .

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರು ಮನೆಗಳ ವಿವರ ತೆಗೆದುಕೊಂಡು ಕೊಪರ್ ಎಸ್ಟೇಟ್ ಮಾಲೀಕರಾದ ನಿಶಾಂತ್ ಕೆ. ವಿ ಅವರಿಗೆ ತಿಳಿಸಿ ಸಂತ್ರಸ್ತರಿಗೆ ಸಹಾಯವನ್ನು ಮಾಡಲಾಯಿತು.

Ad Widget . Ad Widget .

ತೊಂದರೆಗೆ ಒಳಗಾದ ಎಂಟು ಕುಟುಂಬದವರಿಗೆ ಅಹಾರ ಸಾಮಗ್ರಿಗಳು ಹಾಗೂ ತರಕಾರಿ ಹಾಗೂ ಹಾಲನ್ನು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಅಧ್ಯಕ್ಷರ ಕೈಯಲ್ಲಿ ಕೊಟ್ಟು ಕಳುಹಿಸಿದರು. ಇವರಿಗೆ ಶಿವರಾಮಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಬಿಟಿಕಟ್ಟೆ ಗ್ರಾಮದ ಅಧ್ಯಕ್ಷರಾದ ಶಿವಪ್ರಸಾದ್ ಹಾಗೂ ಗ್ರಾಮದ ಸಲಹೆಗಾರ ಟಿ ಆರ್ ರಾಮಚಂದ್ರ ಹಾಗೂ ವಿಶ್ವನಾಥ್ ಖಜಾಂಜಿ ಹಾಗೂ ಓಂ ಶ್ರೀ ನವದುರ್ಗಪರಮೇಶ್ವರಿ ದೇವಾಲಯದ ಅರ್ಚಕರಾದ ವಿಶ್ವರೂಪ ಆಚಾರ್ಯರವರು ಹಾಗೂ ಡೀವನ್ ಡಿಸೋಜ ಉಪಸ್ಥರಿದ್ದರಿದ್ದರು.

Leave a Comment

Your email address will not be published. Required fields are marked *