Ad Widget .

ವಯನಾಡು ದುರಂತ| 150ರ ಗಡಿ ದಾಟಿದ ಸಾವಿನ‌ ಸಂಖ್ಯೆ

ಸಮಗ್ರ ನ್ಯೂಸ್: ಕೇರಳ‌ ರಾಜ್ಯ ಕಂಡು ಕೇಳರಿಯದ ದುರಂತ ವಯನಾಡಿನಲ್ಲಿ ಸಂಭವಿಸಿದ್ದು, ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Ad Widget . Ad Widget .

ಈ ನಡುವೆ ಭಾರತ ಹವಾಮಾನ ಇಲಾಖೆ ಬುಧವಾರವೂ ವಯನಾಡು ಸೇರಿದಂತೆ ಉತ್ತರ ಕೇರಳದ ವಿವಿಧೆಡೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ʼʼಜುಲೈ 31 ಮತ್ತು ಆಗಸ್ಟ್ 1ರಂದು ವಯನಾಡು ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಆಗಸ್ಟ್ 2ರಂದುಈ ಭಾಗಗಳಲ್ಲಿ ಮಳೆಯ ಪ್ರಮಾನ ಇನ್ನೂ ಹೆಚ್ಚಾಗಲಿದೆ. ಇಂದು ಕೇರಳದಲ್ಲಿ ಗಂಟೆಗೆ 30-40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆʼʼ ಎಂದು ಐಎಂಡಿ ತಿಳಿಸಿದೆ.

Ad Widget . Ad Widget .

ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕಾಸರಗೋಡು, ಕಣ್ಣೂರು, ಕೋಝಿಕೋಡ್, ವಯನಾಡು, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಇಡುಕ್ಕಿ, ಎರ್ನಾಕುಲಂ, ಅಲಪ್ಪುಳ ಮತ್ತು ಪತ್ತನಂತೊಟ್ಟ ಜಿಲ್ಲೆಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ನಡೆಯಲಿರುವ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA), ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ, ಎನ್‌ಡಿಆರ್‌ಎಫ್‌ ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ತಂಡಗಳ ಸದಸ್ಯರುರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜತೆಗೆ ಕಣ್ಣೂರಿನ ಡಿಎಸ್‌ಸಿ ಕೇಂದ್ರದ ಸುಮಾರು 200 ಭಾರತೀಯ ಸೇನಾ ಸಿಬ್ಬಂದಿ ಮತ್ತು ಕೋಝಿಕೋಡ್‌ನ 122 ಟಿಎ ಬೆಟಾಲಿಯನ್ ಸದಸ್ಯರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರೊಂದಿಗೆ ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು, ಒಂದು ಎಂಐ -17 ಮತ್ತು ಎಎಲ್‌ಎಚ್ ಕೂಡ ಕೈಜೋಡಿಸಿದೆ.

Leave a Comment

Your email address will not be published. Required fields are marked *