ಸಮಗ್ರ ನ್ಯೂಸ್: ಭಾರತವು 2025 ರ ಪುರುಷರ ಏಷ್ಯಾಕಪ್ ಅನ್ನು ಆಯೋಜಿಸುವ ಹಕ್ಕು ಪಡೆದಿದೆ. ಈ ಟೂರ್ನಿ 20 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ. ಇದರಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಆರನೇ ತಂಡವನ್ನು ಅರ್ಹತಾ ಸುತ್ತಿನ ಮೂಲಕ ನಿರ್ಧರಿಸಲಾಗುತ್ತದೆ.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ IEOI ದಾಖಲೆಯ ಪ್ರಕಾರ, ಭಾರತವು 2025 ರಲ್ಲಿ ನಡೆಯಲ್ಲಿರುವ ಪುರುಷರ ಏಷ್ಯಾಕಪ್‌ಗೆ ಆತಿಥ್ಯ ವಹಿಸಲಿದೆ. ಈ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲ್ಲಿದೆ. ಅದೇ ಸಮಯದಲ್ಲಿ, 2027 ರ ಏಷ್ಯಾಕಪ್ ಆಯೋಜಿಸುವ ಹಕ್ಕನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದೆ. ಆದರೆ 2027ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಈ ಎರಡೂ ಆವೃತ್ತಿಗಳಲ್ಲೂ ತಲಾ 13 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ, ದಿನಾಂಕ, ಸ್ವರೂಪ ಮತ್ತು ಸ್ಥಳ ಸೇರಿದಂತೆ ಈ ಎಲ್ಲಾ ಮಾಹಿತಿಯನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕೂಡ ಬದಲಾಯಿಸಬಹುದು ಎಂದು ದಾಖಲೆಯಲ್ಲಿ ಹೇಳಲಾಗಿದೆ.