Ad Widget .

ಮಹಿಳಾ ಏಷ್ಯಾಕಪ್ ಫೈನಲ್ಸ್| ಶ್ರೀಲಂಕಾ ವಿರುದ್ಧ ಸೋಲು ಕಂಡ ಭಾರತ

ಸಮಗ್ರ ನ್ಯೂಸ್: ಮಹಿಳಾ ಎಷ್ಯಾ‌ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದೆ. ಫೈನಲ್ ಪಂದ್ಯದಲ್ಲಿ ಬಲಾಢ್ಯ ಭಾರತ ತಂಡವನ್ನು 8 ವಿಕೆಟ್’ಗಳಿಂದ ಭರ್ಜರಿಯಾಗಿ ಬಗ್ಗು ಬಡಿದ ಶ್ರೀಲಂಕಾ ವನಿತೆಯರು ಚೊಚ್ಚಲ ಏಷ್ಯಾ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.

Ad Widget . Ad Widget .

ಇದಕ್ಕೂ ಮೊದಲು ಏಷ್ಯಾ ಕಪ್ ಟೂರ್ನಿಗಳಲ್ಲಿ ಐದು ಬಾರಿ ಫೈನಲ್ ತಲುಪಿದ್ದ ಶ್ರೀಲಂಕಾ ಐದು ಬಾರಿಯೂ ಭಾರತ ವಿರುದ್ಧ ಸೋಲು ಕಂಡಿತ್ತು. ಆದರೆ 6ನೇ ಪ್ರಯತ್ನದಲ್ಲಿ ಭಾರತಕ್ಕೆ ಶಾಕ್ ಕೊಟ್ಟ ಶ್ರೀಲಂಕಾ ಇದೇ ಮೊದಲ ಬಾರಿ ಏಷ್ಯಾ ಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು.

Ad Widget . Ad Widget .

ದಾಂಬುಲದ ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ವೃತ್ತಿಜೀವನದ ಸರ್ವಶ್ರೇಷ್ಠ ಫಾರ್ಮ್’ನಲ್ಲಿರುವ ಭಾರತದ ರನ್ ಮಷಿನ್ ಸ್ಮೃತಿ ಮಂಧನ 47 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ಜೆಮಿಮಾ ರಾಡ್ರಿಗ್ಸ್ 16 ಎಸೆತಗಳಲ್ಲಿ 29 ರನ್ ಮತ್ತು ವಿಕೆಟ್ ಕಿಪರ್ ರಿಚಾ ಘೋಷ್ 14 ಎಸೆತಗಳಲ್ಲಿ ಸಿಡಿಲಬ್ಬರದ 30 ರನ್ ಸಿಡಿಸಿ ಭಾರತದ ಸ್ಮರ್ಧಾತ್ಮಕ ಮೊತ್ತಕ್ಕೆ ಕಾರಣವಾದರು.

ಚಾಂಪಿಯನ್ ಪಟ್ಟಕ್ಕೆ 166 ರನ್’ಗಳ ಸವಾಲಿನ ಮೊತ್ತ ಬೆನ್ನತ್ತಿದ ಶ್ರೀಲಂಕಾ 2ನೇ ಓವರ್’ನಲ್ಲಿ ಓಪನರ್ ವಿಶ್ಮಿ ಗುಣರತ್ನೆ ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್’ಗೆ ನಾಯಕಿ ಚಾಮರಿ ಅಟಪಟ್ಟು ಮತ್ತು ಹರ್ಷಿತಾ ಮಾಧವಿ 87 ರನ್ ಸೇರಿಸಿ ಭಾರತ ಗೆಲುವಿನ ಆಸೆಗೆ ತಣ್ಣಿರೆರಚಿದರು. ಭಾರತೀಯ ವನಿತೆಯರ ದಾಳಿಯನ್ನು ಪುಡಿಗಟ್ಟಿದ ಚಾಮರಿ ಅಟಪಟ್ಟು 43 ಎಸೆತಗಳಲ್ಲಿ 61 ರನ್ ಸಿಡಿಸಿದರೆ, 51 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿದ ಹರ್ಷಿತಾ ಮಾಧವಿ ಪ್ಲೇಯರ್ ಆಫ್ ದಿ ಫೈನಲ್ ಆಗಿ ಮೂಡಿ ಬಂದರು. ಯುವ ಬ್ಯಾಟರ್ ಕವೀಶ ದಿಲ್ಹರಿ 16 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ಶ್ರೀಲಂಕಾ 18.4 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾದರು.

Leave a Comment

Your email address will not be published. Required fields are marked *