Ad Widget .

ಎಡಕುಮೇರಿಯಲ್ಲಿ‌ ರೈಲ್ವೆ ಟ್ರ್ಯಾಕ್ ಮೇಲೆ ಮಣ್ಣುಕುಸಿತ| ಜು.29ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಎಲ್ಲಾ ನದಿಗಳು ಕಾಲುವೆಗಳು ಕೆರೆಕಟ್ಟೆಗಳು ತುಂಬಿ ತುಳುಕಿವೆ. ಅಲ್ಲಲ್ಲಿ ಗುಡ್ಡ ಬೆಟ್ಟಗಳು ಕುಸಿದ ಪರಿಣಾಮ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ನಡುವಿನ ಪ್ರಯಾಣ ಕಡಿತಗೊಳ್ಳುತ್ತಿದೆ.

Ad Widget . Ad Widget .

ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಮತ್ತೆ ಜೋರಾಗಿದೆ ನಿರಂತರ ಮಳೆಗೆ ಜಿಲ್ಲೆಯ ಜೀವನದಿ ಹೇಮಾವತಿ ಸೇರಿ ನದಿ ತೊರೆಗಳೆಲ್ಲಾ ಉಕ್ಕಿ ಹರಿಯುತ್ತಿವೆ. ಈ ನಡುವೆ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಹಾಸನ ಜಿಲ್ಲೆ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ಶುಕ್ರವಾರ ಸಂಜೆ ಭೂಕುಸಿತ ಉಂಟಾಗಿ ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಕೆಲ ರೈಲುಗಳ (Train) ಸಂಚಾರವನ್ನು ಜುಲೈ 29ರವರೆಗೆ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ಜುಲೈ 29ರವರೆಗೆ ರದ್ದಾದ ರೈಲುಗಳು:
ಕಣ್ಣೂರು-ಬೆಂಗಳೂರು (16512) ರೈಲು ರದ್ದಾಗಿದೆ.
ಕಾರವಾರ-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16596) ರೈಲು ಸಂಚಾರ ತಾತ್ಕಾಲಿಕ್​ ಬಂದ್​
ಬೆಂಗಳೂರು-ಮುರುಡೇಶ್ವರ (16585) ರೈಲು ತಾತ್ಕಾಲಿಕವಾಗಿ ಸಂಚರಿಸುವುದಿಲ್ಲ.
ಕೆಎಸ್‌ಆರ್ ಬೆಂಗಳೂರು-ಕಣ್ಣೂರು ರೈಲು ಸಂಖ್ಯೆ (16511) ರೈಲು ರದ್ದಾಗಿದೆ.
ಬೆಂಗಳೂರು-ಕಾರವಾರ ಕೆಎಸ್‌ಆರ್ ಎಕ್ಸ್‌ಪ್ರೆಸ್ (16595) ರೈಲು ಸಂಚಾರ ರದ್ದು ಮಾಡಲಾಗಿದೆ.
ಮುರ್ಡೇಶ್ವರ- ಬೆಂಗಳೂರು (16586) ರೈಲನ್ನು ರದ್ದುಗೊಳಿಸಲಾಗಿದೆ.
ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ (07377) ರೈಲು ರದ್ದು ಮಾಡಲಾಗಿದೆ.
ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07377) ರೈಲು ರದ್ದು ಮಾಡಲಾಗಿದೆ. ಮಂಗಳೂರು ಸೆಂಟ್ರಲ್ -ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07378) ರೈಲು ಸಂಚಾರ ಇರುವುದಿಲ್ಲ.

ಶಿರಾಡಿ ಫಾಟ್ ರಸ್ತೆ,ಹಾಗೂ ಎಡಕುಮೇರಿ ಯಲ್ಲಿ ಗುಡ್ಡ ಕುಸಿತದಿಂದಾಗಿ ದಿನನಿತ್ಯ ಮಂಗಳೂರು ಬೆಂಗಳೂರು ಸಂಚರಿಸುವ ಪ್ರಯಾಣಿಕರಿಗೆ ಬರೆ ಎಳೆದಂತಾಗಿದೆ .ರೈಲು ಬದಲು ವಿಮಾನದಲ್ಲಿ ಸಂಚರಿಸುವವರಿಗೆ ಶಾಕ್ ಆಗಿದೆ. ಯಾಕೆಂದರೆ 3 ಸಾವಿರ ರೂ. ಇದ್ದ ವಿಮಾನಯಾನದ ಟಿಕೆಟ್ ದರ 6,800 ರೂ.ಗೆ ಏರಿಕೆಯಾಗಿದೆ. ಇನ್ನು ಮುರ್ಡೇಶ್ವರ- ಬೆಂಗಳೂರು ಎಕ್ಸ್‌ಪ್ರೆಸ್ (16586) ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ (16512) ಮತ್ತು ಕಾರವಾರ- ಕೆಎಸ್​ಆರ್​ಬೆಂಗಳೂರು ಎಕ್ಸ್‌ಪ್ರೆಸ್ (16596) ಶೋರ್ನೂರ್, ಸೇಲಂ ಜೋಲಾರ್‌ಪೇಟೆ ಮೂಲಕ ಜು.27ರಂದು ಸಂಚರಿಸಿದ್ದು ಈ ಮಾರ್ಗದ ಪಯಣ 19 ತಾಸು ಹಿಡಿಯುತ್ತಿದ್ದು ಪ್ರಯಾಣಿಕರ ಪ್ರಯಾಣ ದುಬಾರಿಯಾದಂತಿದೆ.

Leave a Comment

Your email address will not be published. Required fields are marked *