Ad Widget .

ಬಂಟ್ವಾಳ: ತೀವ್ರ ಜ್ವರದ ಕಾರಣ ಉಸಿರು ಚೆಲ್ಲಿದ ಯುವಕ

ಸಮಗ್ರ ನ್ಯೂಸ್: ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

Ad Widget . Ad Widget .

ಮೃತ ಯುವಕನನ್ನು ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಎಂದು ಗುರುತಿಸಲಾಗಿದೆ.

Ad Widget . Ad Widget .

ಯುವಕ ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವಾರದ ಹಿಂದೆ ಜ್ವರ ಬಂದಿತ್ತು. ಈ ಹಿನ್ನಲೆ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

Leave a Comment

Your email address will not be published. Required fields are marked *