Ad Widget .

ಪ್ಯಾರಿಸ್‌ ಒಲಿಂಪಿಕ್ಸ್‌ ೨೦೨೪/ ಇಂದಿನಿಂದ ಭಾರತದ ಒಲಿಂಪಿಕ್ಸ್ ಅಭಿಯಾನ ಶುರು

ಸಮಗ್ರ ನ್ಯೂಸ್‌: ಭಾರತವು ಇಂದಿನಿಂದ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿದ್ದು, ಬಿಲ್ಲುಗಾರಿಕೆ (ಆರ್ಚರಿ) ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್, ಬಿ ಧೀರಜ್, ತರುಣ್‌ದೀಪ್ ರೈ ಮತ್ತು ಪ್ರವೀಣ್ ಜಾಧವ್ ಸ್ಪರ್ಧಿಸಲಿದ್ದಾರೆ.

Ad Widget . Ad Widget .

ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಸ್ಪರ್ಧೆ ನಡೆಯಲಿದೆ. ಇದಾದ ಬಳಿಕ ಪುರುಷರ ವೈಯುಕ್ತಿಕ ಶ್ರೇಯಾಂಕ ಸುತ್ತಿನ ಆರ್ಚರಿ ಸ್ಪರ್ಧೆಗಳು ನಡೆಯಲಿವೆ. ಭಾರತೀಯ ಬಿಲ್ಲುಗಾರರ ಪದಕದ ಮಹತ್ವಾಕಾಂಕ್ಷೆಗೆ ಇಂದಿನ ಶ್ರೇಯಾಂಕದ ಸುತ್ತು ನಿರ್ಣಾಯಕವಾಗಿರುತ್ತದೆ. ಶ್ರೇಯಾಂಕದ ಸುತ್ತಿನಿಂದ ಆಗ್ರ ನಾಲ್ಕು ಶ್ರೇಯಾಂಕದ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯುತ್ತವೆ. ಎಂಟರಿಂದ 12ನೇ ಶ್ರೇಯಾಂಕದ ತಂಡಗಳು ಉಳಿದ ನಾಲ್ಕು ಕ್ವಾರ್ಟರ್-ಫೈನಲ್ ಸ್ಥಾನಗಳಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ

Ad Widget . Ad Widget .

ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಒಲಿಂಪಿಕ್ಸ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್‌ನಲ್ಲಿ ಭಾರತದ ಸ್ಪರ್ಧೆಗಳ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.

Leave a Comment

Your email address will not be published. Required fields are marked *