ಸಮಗ್ರ ನ್ಯೂಸ್: ಕೊಡಿಯಾಲ ಕಾರ್ಯಕ್ಷೇತ್ರದಲ್ಲಿ 650494 ಧರ್ಮಶ್ರೀ ಸಂಘದ ಸದಸ್ಯರ ಕುಸುಮ ರೈ ಅವರ ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದು ಆಗ ಮರಣ ಹೊಂದಿದ್ದು ಅವರ ಪತಿ ವಿಶ್ವನಾಥ ರೈ ರವರಿಗೆ ಸಂಪೂರ್ಣ ಸುರಕ್ಷಾ 40000/ ಚೆಕ್, ಮತ್ತು ಬೆಳ್ಳಾರೆ ವಲಯದ ಅಮರಪಡ್ನೂರು ಒಕ್ಕೂಟದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ Bc ಟ್ರಸ್ಟ್ ಸರೋಜಿನಿ ಅವರ ಪತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಚಿಕಿತ್ಸೆಗೆ ಕ್ಷೇತ್ರದ ಸಂಪೂರ್ಣ ಸುರಕ್ಷದ 30000/ ಚೆಕ್ಕನ್ನು ವಿತರಣೆ ಮಾಡಲಾಯಿತು.

ಕೊಡಿಯಾಲ ಬಿ ಒಕ್ಕೂಟ ಅಧ್ಯಕ್ಷ ಪ್ರಸಾದ್ ಕೆ.ಕೆ. ಮತ್ತು ಮೇಲ್ವಿಚಾರಕಿ ವಿಶಾಲ ಕೆ., ಸೇವಾಪ್ರತಿನಿಧಿ ಹರಿಣಿ, ಬೆಳ್ಳಾರೆ ವಲಯದ ಮೇಲ್ವಿಚಾರಕಿ ವಿಶಾಲ ಕೆ., ಮಾಡವಕೀಲು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ರಸಾದ್, ಒಕ್ಕೂಟದ ಅಧ್ಯಕ್ಷೆ ವೀಣಾ ಪಡ್ಪು, ಸೇವಾ ಪ್ರತಿನಿಧಿ ದಿವ್ಯ, ವಸಂತಿ ನೆನಾರ ಉಪಸ್ಥಿತರಿದ್ದರು.