ಶಿರೂರು ಗುಡ್ಡ ಮತ್ತಷ್ಟು ಕುಸಿಯುವ ಭೀತಿ: ಜಿಎಸ್ಐ ವರದಿಯಲ್ಲಿ ಪ್ರಕಟ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಈಗಾಗಲೇ ಭೂಕುಸಿತ ಸಂಭವಿಸಿದು, ಇದೀಗ ಮತ್ತೆ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿಯುವ ಆತಂಕ ಶುರುವಾಗಿದೆ. 2 ದಿನದ ಹಿಂದೆ ಶಿರೂರು ಬಳಿ ಮಣ್ಣು ಪರೀಕ್ಷೆ ನಡೆಸಿದ್ದ ಜಿಎಸ್ಐ (ಜಿಯಾಲಾಜಿಕಲ್ ಸೆರ್ವೆ ಆಪ್ ಇಂಡಿಯ) ತಜ್ಞರು, ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆಗಳಿವೆ ಎಂದು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ವರದಿ ನೀಡಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿದೆ. ಇನ್ನು ನಾಪತ್ತೆಯಾಗಿರುವ ಮೂವರ ಪತ್ತೆಗಾಗಿ ಇಸ್ರೋ ನೆರವಿನೊಂದಿಗೆ ಮುಂದೆ ಶೋಧ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

Ad Widget ... ..

ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಈಗಾಗಲೇ ಜಿಯಾಲಾಜಿಕಲ್ ಸೆರ್ವೆ ಆಪ್ ಇಂಡಿಯದವರು ಪರಿಶೀಲಿಸಿ ಪ್ರಾಥಮಿಕ ವರದಿ ನೀಡಿದ್ದು, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ವಾಹನ ಸಂಚಾರ ಸದ್ಯಕ್ಕೆ ನೀಡಬಾರದೆಂದು ತಿಳಿಸಿದ್ದಾರೆ. ತಜ್ಞರ ತಂಡ ಇನ್ನೂ ಐದು ದಿನಗಳಲ್ಲಿ ಇನ್ನೊಂದು ರಿಪೋರ್ಟ್ ನೀಡಲಿದ್ದಾರೆ. ತಜ್ಞರ ಅಭಿಪ್ರಾಯದ ಮೇರೆಗೆ ಮುಂದೆ ನಿರ್ಧಾರ ಎಂದು ಮಾಹಿತಿ ನೀಡಿದರು.

Ad Widget

Leave a Comment

Your email address will not be published. Required fields are marked *