Ad Widget .

ಗರ್ಭಿಣಿ ಪತ್ನಿಗೆ ಚೂರಿ ಇರಿದ‌ ‘ನೇತ್ರಾವತಿ’ ಸೀರಿಯಲ್ ನಟ; ದೂರು ದಾಖಲು

ಸಮಗ್ರ ನ್ಯೂಸ್: ‘ನೇತ್ರಾವತಿ’ ಸೀರಿಯಲ್ ನಟ ಸನ್ನಿ ಮಹಿಪಾಲ್ ವಿರುದ್ಧ, ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೊಂದ ಪತ್ನಿ ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದ ಸನ್ನಿ ‌ಮಹಿಪಾಲ್ ತನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿರುವುದಾಗಿ ಯುವತಿ ವಿರುದ್ಧ ಹೆಚ್.ಎ.ಎಲ್. ಠಾಣೆಗೆ ದೂರು ನೀಡಿದ್ದಾರೆ.

Ad Widget . Ad Widget .

‘ನೇತ್ರಾವತಿ’ ಸೀರಿಯಲ್ ಖ್ಯಾತಿಯ ಸನ್ನಿ ಮಹಿಪಾಲ್ ತನ್ನನ್ನು ಬಿಟ್ಟು ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಪ್ರಶ್ನಿಸಲು ಹೋದ ಗರ್ಭಿಣಿ ಪತ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಆಕೆಗೆ ರಕ್ತಸ್ರಾವವಾಗಿ ಗರ್ಭಪಾತವಾಗಿದೆ ಎನ್ನಲಾಗಿದೆ.

Ad Widget . Ad Widget .

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸನ್ನಿ ಮಹಿಪಾಲ್ 2024ರ ಜನವರಿಯಲ್ಲಿ ಯುವತಿಗೆ ಪರಿಚಯವಾಗಿದ್ದ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಸ್ನೇಹ, ಪರಿಚಯವಾಗಿ ಬಳಿಕ ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ.. ಜೂನ್ 15ರಂದು ಯುವತಿ ಮಹಿಪಾಲ್ ಜೊತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಆಕೆ ಸದ್ಯ ಎರಡು ತಿಂಗಳ ಗರ್ಭಿಣಿಯಾಗಿದ್ದಾರೆ.

ಮದುವೆಯಾಗಿದ್ದರೂ ಪತ್ನಿಯೊಂದಿಗೆ ಇರದ ನಟ ಸನ್ನಿ ಮಹಿಪಾಲ್ ಪೋಷಕರನ್ನು ಒಪ್ಪಿಸಿ ಬರುವುದಾಗಿ ಹೇಳಿ ಹೋಗಿದ್ದರು. ನಾವಿಬ್ಬರು ಸ್ನೇಹಿತರಂತೆ ಇರಬೇಕೆಂದು ಷರತ್ತು ಹಾಕಿದ್ದ. ಸ್ನೇಹಿತರಂತೆಯೇ ಮೆಸೇಜ್ ಮಾಡಬೇಕು ಎಂದು ಷರತ್ತು ಹಾಕಿದ್ದು, ಅದರಂತೆಯೇ ನಡೆದುಕೊಂಡಿದ್ದೆ. ಕೆಲವು ದಿನಗಳ ಬಳಿಕ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಯುವತಿ ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *