ಪುತ್ತೂರು: ಲಾರಿ‌ ಟಯರ್ ಬದಲಿಸುವ ವೇಳೆ ಸ್ಪೋಟ| ಇಬ್ಬರು ಕಾರ್ಮಿಕರು ಗಂಭೀರ

ಸಮಗ್ರ ನ್ಯೂಸ್: ಲಾರಿಯೊಂದರ ಟಯರ್ ಬದಲಿಸುವ ವೇಳೆ ಟಯರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಕ್ಕೆ ಒಳಗಾದ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ ರಾತ್ರಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಪೋಟದ ಭೀಕರತೆ ತೋರಿಸುತ್ತಿದೆ.

Ad Widget ... ..

ಗಾಯಗೊಂಡವರನ್ನು ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಎಂದು ಗುರುತಿಸಲಾಗಿದೆ. ಕಲ್ಲು ಸಾಗಾಟದ ಲಾರಿಯ ಟಯರ್‌ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು.

Ad Widget

ಬಳಿಕ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್‌ ತಂದಿದ್ದರು. ಟಯರ್‌ ಬದಲಿಸುವ ವೇಳೆ ಒಮ್ಮೆಲೇ ಟಯರ್‌ ಸ್ಟೋಟಗೊಂಡಿದ್ದು, ಅದರ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ ಟಯರ್‌ ಸಹಿತ ರಶೀದ್ ಅವರು ತುಸು ದೂರ ಕಾಂಪೌಂಡ್‌ ಗೆ ಎಸೆಯಲ್ಪಟ್ಟಿದ್ದಾರೆ.

Leave a Comment

Your email address will not be published. Required fields are marked *