Ad Widget .

ಯುದ್ಧಪೀಡಿತ ಈ ದೇಶದಲ್ಲಿ ಆಹಾರ ಸಿಗಬೇಕಾದ್ರೆ ಸೈನಿಕರ ಜೊತೆ‌ ಸೆಕ್ಸ್ ಮಾಡ್ಲೇಬೇಕು!! ಇಲ್ಲಿ ಮಹಿಳೆಯರ, ಹಿರಿಯ ನಾಗರಿಕರ ಅವಸ್ಥೆ ಕೇಳೋದೇ ಬೇಡ!

ಸಮಗ್ರ ನ್ಯೂಸ್: ಕುಟುಂಬದ ಆರ್ಥಿಕ ನಿರ್ವಹಣೆಗಾಗಿ ಆಹಾರ ಬೇಕಾದರೆ ಮಹಿಳೆಯರು ಯೋಧರ ಜೊತೆ ಮಲಗುವಂತೆ ಒತ್ತಡ ಯುದ್ಧಪೀಡಿತ ಸೂಡಾನ್ ದೇಶದಲ್ಲಿ‌ ಹೇರಲಾಗುತ್ತಿದೆ.‌

Ad Widget . Ad Widget .

ಸುಡಾನ್ ನ ಒಮ್ರುಮನ್ ನಗರದ ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ತಾವು ಕೇವಲ ಕುಟುಂಬ ಹೊಟ್ಟೆ ತುಂಬಿಸಲು ಆಹಾರ ಮುಂತಾದ ಅಗತ್ಯ ವಸ್ತುಗಳನ್ನು ಪಡೆಯಲು ಸೈನಿಕರ ಜೊತೆ ದೇಹ ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

Ad Widget . Ad Widget .

ಆಹಾರ ಸಂಗ್ರಹಿಸುವ ಉಗ್ರಾಣ ಸೇರಿದಂತೆ ಕಾರ್ಖಾನೆಗಳು ಸೈನಿಕರ ವಶದಲ್ಲಿದೆ. ಇದರಿಂದ ದೇಶದ ಜನರು ಆಹಾರಕ್ಕಾಗಿ ಪರದಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈನಿಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ.

ನನ್ನ ಹೆತ್ತವರಿಗೆ ತುಂಬಾ ವಯಸ್ಸಾಗಿದೆ. ಅವರಿಗೆ ಆರೋಗ್ಯ ಬೇರೆಸರಿಯಿಲ್ಲ. ಆಹಾರಕ್ಕಾಗಿ ನಮ್ಮ ಮಗಳನ್ನು ಕಳುಹಿಸಲು ಇಷ್ಟವಿಲ್ಲ. ಆಹಾರ ಪಡೆಯುವ ಏಕೈಕ ಉದ್ದೇಶದಿಂದ ನಾನೇ ಸೈನಿಕರ ಬಳಿ ಹೋದೆ ಎಂದು ಮಹಿಳೆಯೊಬ್ಬರು ತಮ್ಮ ಕಹಿ ಅನುಭವವನ್ನು ಗಾರ್ಡಿಯನ್ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಮೇ ತಿಂಗಳಿನಿಂದ ಆಹಾರ ಸಂಸ್ಕರಣ ಕಾರ್ಖಾನೆಗಳಲ್ಲಿ ಸೈನಿಕರು ದೌರ್ಜನ್ಯ ಎಸಗುತ್ತಿದ್ದಾರೆ. ಆಹಾರ ವಸ್ತುಗಳು ಬೇಕು ಅಂದರೆ ಸೈನಿಕರ ಜೊತೆ ಸೆಕ್ಸ್ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಸೂಡಾನ್ ನಲ್ಲಿ ನಾಗರಿಕ ಧಂಗೆ ಶುರುವಾದ ಹಿನ್ನೆಲೆಯಲ್ಲಿ ಪ್ಯಾರಾ ಮಿಲಿಟರಿ ಹೇರಲಾಗಿದ್ದು, ದೇಶದ ಪ್ರಮುಖ ಫ್ಯಾಕ್ಟರಿ ಆವರಿಸಿಕೊಂಡಿರುವ ಸೈನಿಕರು ಊಟ ಬೇಕಾದರೆ ಸೆಕ್ಸ್ ಮಾಡಿ ಎಂದು ಮಹಿಳೆಯರ ಮೇಲೆ ಒತ್ತಡ ಹೇರುತ್ತಿದ್ದಾರೆ.

Leave a Comment

Your email address will not be published. Required fields are marked *