ಉಡುಪಿ: ಸತ್ತ ನಾಯಿಯ ಕಳೇಬರವನ್ನು ಬೈಕ್ ಗೆ ಕಟ್ಟಿ‌ ಎಳೆದೊಯ್ದು ವಿಕೃತಿ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ
ಕಾಪು ತಾಲೂಕಿನ ಶಿರ್ವದಲ್ಲಿ ನಾಯಿಯ ಕಳೇಬರವನ್ನು ಸ್ಕೂಟರ್​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ ವಿರುದ್ಧ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget ... ..

ಶಿರ್ವಾ ಪಟ್ಟಣದಲ್ಲಿ ಈ ಕ್ರೂರ ಘಟನೆ ನಡೆದಿದೆ. ಕಿಲೋಮೀಟರ್ ಗಟ್ಟಲೆ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ಹಾಕಿ ಎಳೆದೊಯ್ಯಲಾಗಿದೆ. ಮಲ್ಲರ್ ನಿವಾಸಿಯಾಗಿರುವ ಈತ ನಾಯಿ ಮೇಲೆ ಕ್ರೂರವಾಗಿ ವರ್ತಿಸಿದ್ದಾನೆ. ನಾಯಿ ಕೊರಳಿಗೆ ಚೈನ್ ಕಟ್ಟಲಾಗಿದೆ. ಬಳಿಕ ನಾಯಿ ಚೈನ್‌ನ್ನು ಸ್ಕೂಟರ್ ಹಿಂಭಾಗಕ್ಕೆ ಕಟ್ಟಿ ಎಳೆದೊಯ್ಯಲಾಗಿದೆ.

Ad Widget

ಕೊಂಬಗುಡ್ಡೆಯ ನಿವಾಸಿ ಖಾದ‌ರ್, ಮೃತಪಟ್ಟ ನಾಯಿಯ ಕೊರಳಿಗೆ ಸರಪಳಿ ಹಾಕಿ, ಸ್ಕೂಟರ್‌ನ ಸೀಟಿಗೆ ಸರಪಳಿ ​​ಕಟ್ಟಿಕೊಂಡು ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಕ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಶಿರ್ವ ಪೊಲೀಸರು ಆರೋಪಿ ಖಾದ‌ರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *