Ad Widget .

ರೇಣುಕಾಸ್ವಾಮಿ ಕೊಲೆ ಪ್ರಕರಣ| ಈ ಭಯಾನಕ ಕೃತ್ಯ ಐಫೋನ್ ನಲ್ಲಿ ಸೆರೆ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕೊಲೆ ಮಾಡಿದ ಆರೋಪಿಗಳು ಹಲ್ಲೆ ಮಾಡಿದ ಬಳಿಕ ಐ ಫೋನ್‌ನಲ್ಲಿ ರೆಕಾರ್ಡ್‌ ಕೂಡ ಮಾಡಿರುವುದು ತಿಳಿದು ಬಂದಿದೆ. ಹಲ್ಲೆ ಬಳಿಕ ಹೊಡೆದ ಜಾಗದಲ್ಲಿ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದರಂತೆ. ಸ್ಯಾಕ್ಷಿ ನಾಶ ಮಾಡಬೇಕು ಎಂದು ಪ್ಲ್ಯಾನ್‌ ಕೂಡ ಆಗಿತ್ತು. ಅದರಲ್ಲಿಯೇ ಒಬ್ಬ ಆರೋಪಿ ಹಲ್ಲೆ ನಡೆದ ಬಳಿಕ ಐಫೋನ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರಂತೆ.

Ad Widget . Ad Widget .

ಐವರು ಆರೋಪಿಗಳಿಗೆ ಸಿಮ್ ಕಾರ್ಡ್ ಕೊಟ್ಟಿದ್ದವರ ವಿಚಾರಣೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮಾಡುತ್ತಿದ್ದಾರೆ. ಸಿಮ್ ಕಾರ್ಡ್ ಕೊಟ್ಟ ಬಗ್ಗೆ ಐವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. A2 ಆರೋಪಿ ನಟ ದರ್ಶನ್‌ಗೆ ಹೇಮಂತ್ ಸಿಮ್ ಕೊಟ್ಟಿದ್ದ .ಹೇಮಂತ್ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿದ್ದರು. ಬೆಂಗಳೂರಿನ ಪ್ರಕಾಶ್ ನಗರ ನಿವಾಸಿ ಹೇಮಂತ್. ಎ1 ಆರೋಪಿ ಪವಿತ್ರಾಗೌಡಗೆ ಸಿಮ್ ಕಾರ್ಡ್ ಕೊಟ್ಟಿದ್ದ ವ್ಯಕ್ತಿ ವಿಚಾರಣೆ ಆಗಿದೆ. ಮನೋಜ್ ಎಂಬಾತನ ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮನೋಜ್ ಬಸವೇಶ್ವರನಗರ ನಿವಾಸಿಯಾದ್ದರು. ಹಾಗೂ ಉಳಿದ ಮೂವರು ಆರೋಪಿಗಳಿಗೆ ಸಿಮ್ ಕೊಟ್ಟವರ ವಿಚಾರಣೆ ಆಗಿದೆ. ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಗೆ ಸಿಮ್ ಕಾರ್ಡ್ ಕೊಟ್ಟವರ ವಿಚಾರಣೆ ಕೂಡ ಆಗಿದೆ.

Ad Widget . Ad Widget .

ಕಾರ್ತಿಕ್ ಎಂಬುವ ವೇಲು ಎಂಬಾತನ ಹೆಸರಲ್ಲಿದ್ದ ಸಿಮ್ ಬಳಸಿದ್ದ . ಗೀತಾ ಹೆಸರಲ್ಲಿದ್ದ ಸಿಮ್ ಬಳಸಿದ್ದ ನಿಖಿಲ್ ನಾಯಕ್. ಐದು ಮಂದಿಯನ್ನ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಪೊಲೀಸರು. ಕೊಲೆ ವೇಳೆ ಬೇರೊಬ್ಬರ ಹೆಸರಲ್ಲಿದ್ದ ಸಿಮ್ ಕಾರ್ಡ್ ಆರೋಪಿಗಳು ಬಳಸಿದ್ದರು. ಐವರು ಆರೋಪಿಗಳ ಪೋನ್ ಪರಿಶೀಲನೆ ವೇಳೆ ಸಿಮ್ ಕಾರ್ಡ್ ಸಿಕ್ರೇಟ್ ಬಯಲಾಗಿದೆ.

Leave a Comment

Your email address will not be published. Required fields are marked *