Ad Widget .

ಆಗಸ್ಟ್‌ ನಲ್ಲಿ ನಿರ್ದೇಶಕ ತರುಣ್ ಸುಧೀರ್, ನಟಿ ಸೋನಲ್ ಮದುವೆ

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ನಟಿ ಸೋನಲ್ ಮಂಥೆರೋ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಮದುವೆ ಡೇಟ್ ಕೂಡ ಫಿಕ್ಸ್ ಆಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ.

Ad Widget . Ad Widget .

ಇದೇ ಆಗಸ್ಟ್ 10, 11ರಂದು ತರುಣ್ ಹಾಗೂ ಸೋನಲ್ ಮದುವೆ ನಡೆಯಲಿದೆ. ದರ್ಶನ್ ಅವರೇ ತರುಣ್ ಮತ್ತು ಸೋನಲ್ ಮದುವೆಗೆ ಮುನ್ನುಡಿ ಬರೆದಿದ್ರಂತೆ. ಹಾಗಾಗಿ ಮದುವೆ ಡೇಟ್ ಮುಂದಕ್ಕೆ ಹಾಕಲು ತರುಣ್ ತೀರ್ಮಾನಿಸಿದ್ದರು. ಆದರೆ ಹಿರಿಯರ ಸಲಹೆ ಮತ್ತು ದರ್ಶನ್ ಒತ್ತಾಯ ಮೇರೆಗೆ ಮದುವೆಗೆ ಮೊದಲೇ ನಿಶ್ಚಯಿಸಿದ ದಿನದಂದ ಮದುವೆಯಾಗಲು ತರುಣ್ ಮುಂದಾಗಿದ್ದಾರೆ.

Ad Widget . Ad Widget .

ತರುಣ್ ಹಾಗೂ ಸೋನಲ್ ಮದುವೆ ವಿಚಾರ ಮೊದಲೇ ದರ್ಶನ್‌ಗೆ ತಿಳಿದಿತ್ತು. ಜೈಲಿನಲ್ಲಿರುವ ಹಿನ್ನಲೆಯಲ್ಲಿ ತನ್ನ ಕಾರಣಕ್ಕೆ ತರುಣ್ ಮದುವೆ ಡೇಟ್ ಮುಂದೂಡಬಾರದು ಎಂದು ಪತ್ನಿ ವಿಜಯಲಕ್ಷ್ಮಿ ಕಡೆಯಿಂದ ದರ್ಶನ್ ಹೇಳಿ ಕಳುಹಿಸಿದ್ದರು. ಇದೀಗ ಜೈಲಿಗೆ ಭೇಟಿ ಕೊಟ್ಟ ವೇಳೆ ಕೂಡ ಇದನ್ನೇ ದರ್ಶನ್ ನಿರ್ದೇಶಕ ತರುಣ್‌ಗೆ ಹೇಳಿ ಕಳುಹಿಸಿದ್ದಾರೆ. ಇದೀಗ ದರ್ಶನ್ ಇಚ್ಛೆಯಂತೆ ಆಗಸ್ಟ್‌ 10,11ರಂದು ತರುಣ್ ಮದುವೆ ನಡೆಯಲಿದೆ.

ಕಾಟೇರ ಸಿನಿಮಾದ ಸೂಪರ್ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ನಟಿ ಸೋನಲ್ ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave a Comment

Your email address will not be published. Required fields are marked *