ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು, ಇದೀಗ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ತನ್ನ ಮೊಬೈಲ್ ನಿಂದ ಕಳುಹಿಸಿದ್ದಂತ ಅಶ್ಲೀಲ ಮೆಸೇಜ್ ಗಳ ಡೇಟಾವನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.
ಮೃತದೇಹ ಪತ್ತೆಯಾದ ನಂತ್ರ, ರೇಣುಕಾಸ್ವಾಮಿ ಕೊಲೆ ಹಿಂದಿನ ಅಸಲಿ ಕಾರಣ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದದ್ದು ಎಂಬುದಾಗಿ ಪೊಲೀಸರಿಗೆ ತಿಳಿದು ಬಂದಿತ್ತು. ಹೀಗಾಗಿ ಆತನ ಮೊಬೈಲ್ ಸಂಖ್ಯೆಯ ಮೂಲಕ ಆತ ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿನ ಡೇಟಾ ಮಾಹಿತಿ ಸಂಗ್ರಹಿಸೋದಕ್ಕೆ ಎಸ್‌ಐಟಿ ಪೊಲೀಸರು ಮುಂದಾಗಿದ್ದರು.
ರೇಣುಕಾಸ್ವಾಮಿ ಬಳಸುತ್ತಿದ್ದ ಎರಡು ಪೋನ್ ನಂಬರ್ ಗಳ ಪೈಕಿ ಒಂದು ನಂಬರ್ ಪತ್ನಿ ಹೆಸರಿನಲ್ಲಿ ಖರೀದಿಸಿದ್ದರು. ಆ ನಂಬರ್ ನನ್ನು ಸರ್ವೀಸ್ ಪ್ರೊವೈಡಿಂಗ್ ಕಂಪನಿಗೆ ಕಳುಹಿಸಿ, ಎರಡು ಪೋನ್ ನಂಬರ್ ನ ನಕಲಿ ಸಿಮ್ ಕಾರ್ಡ್ ಖರೀದಿಸಿದ್ದ ಪೊಲೀಸರು, ಆತನ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇದಷ್ಟೇ ಅಲ್ಲದೇ ರೇಣುಕಾಸ್ವಾಮಿ ಬಳಸುತ್ತಿದ್ದ ಸಾಮಾಜಿಕ ಖಾತೆಗಳಿಗೆ ಪ್ರವೇಶಿಸಿರುವ ಪೊಲೀಸರು, ಸಿಇಎನ್ ಠಾಣೆಯ ತಜ್ಞರ ಸಹಾಯದಿಂದ ಅದರಲ್ಲಿ ಇದ್ದಂತ ಡೇಟಾವನ್ನು ಕಲೆ ಹಾಕಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.