ಸುಳ್ಯ: ಕಮರಿಗೆ ಉರುಳಿದ ಕಾರು| ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದವರು ಆಸ್ಪತ್ರೆಗೆ

ಸಮಗ್ರ ನ್ಯೂಸ್: ಎಡೆಬಿಡದೆ ಸುರಿಯುವ ಮಳೆಯ ನಡುವೆ ಸುಳ್ಯ ವ್ಯಾಪ್ತಿಯಲ್ಲಿ ಹಲವೆಡೆ ರಸ್ತೆ ಅಪಘಾತಗಳು ಸುದ್ದಿಯಾಗುತ್ತಿವೆ. ವಿಪರೀತ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಮರಿಗೆ ಪಲ್ಟಿಯಾದ ಘಟನೆ ಸುಳ್ಯದಿಂದ ವರದಿಯಾಗಿದೆ.

Ad Widget ... ..

ಪೆರಾಜೆ ಗ್ರಾಮದ ದಾಸರಹಿತ್ಲುವಿನಲ್ಲಿ ಜು.18ರಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ .
ಕಾಸರಗೋಡಿನಿಂದ ಮಡಿಕೇರಿಗೆ ಮದುವೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಕಾಸರಗೋಡು ಮೂಲದ ಮೂವರು ಪ್ರಯಾಣಿಕರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಮರಿಗೆ ಬಿದ್ದಿದೆ.

Ad Widget

ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ತಿಳಿದುಬಂದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ‌ಸಾಗಿಸಲಾಗಿದೆ.

Leave a Comment

Your email address will not be published. Required fields are marked *