Ad Widget .

ಮದುವೆ ಮಾತುಕತೆಗೆ ಬಂದ ಯುವತಿಯ ತಾಯಿ ಜೊತೆ ಯುವಕನ ತಂದೆ ಎಸ್ಕೇಪ್!!

ಸಮಗ್ರ ನ್ಯೂಸ್: ಮದುವೆ ಮಾತುಕತೆಗೆ ಬಂದ ಯುವತಿಯ ತಾಯಿಯ ಜೊತೆ ಯುವಕನ ತಂದೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ಮಗನ ಮದುವೆ ಮಾತುಕತೆ ಆರಂಭಗೊಂಡಿತ್ತು. ತಂದೆ ಹಾಗೂ ತಾಯಿ ಮಗನಿಗೆ ಮದುವೆ ಮಾಡಿಸಲು ಹುಡುಗಿ ಹುಡುಕಾಟ ಶುರು ಮಾಡಿದ್ದರು. ಕೊನೆಗೆ ಒಂದು ಹುಡುಗಿಯ ಫೋಟೋ ಮಗನಿಗೆ ತೋರಿಸಿದಾಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹುಡುಗ ಮತ್ತು ಹುಡುಗಿಗೆ ಒಪ್ಪಿಗೆಯಾದ ಕಾರಣ ಹುಡುಗಿ ನೋಡುವ ಶಾಸ್ತ್ರ ಫಿಕ್ಸ್ ಮಾಡಿದ್ದಾರೆ.

Ad Widget . Ad Widget .

ಅಂತೆಯೇ ಹುಡುಗ, ಆತನ ಪೋಷಕರು ಹಾಗೂ ಆಪ್ತರು ಹುಡುಗಿ ಮನೆಗೆ ಹೋಗಿ ಹುಡುಗಿ ನೋಡುವ ಶಾಸ್ತ್ರ ಮುಗಿಸಿದ್ದಾರೆ. ಎಲ್ಲರಿಗೂ ಒಪ್ಪಿಗೆಯಾಗಿದೆ. ಹುಡುಗ ಹಾಗೂ ಹುಡುಗಿ ಮಾತನಾಡಿಕೊಂಡಿದ್ದು, ಹುಡುಗಿ ನೋಡುವ ಶಾಸ್ತ್ರ ಯಾವುದೇ ಅಡೆತಡೆ ಇಲ್ಲದೇ ಮುಕ್ತಾಯಗೊಂಡಿದೆ.

Ad Widget . Ad Widget .

ಈ ವೇಳೆ ಮದುವೆ, ಶಾಸ್ತ್ರ, ಮಾತುಕತೆಗಳಿಗೆ ಎರಡೂ ಮನೆಯವರ ಫೋನ್ ನಂಬರ್ ಎಕ್ಸ್ ಚೇಂಜ್ ಆಗಿವೆ. ಇತ್ತ ಹುಡುಗ, ಹುಡುಗಿ ಕೂಡ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಇನ್ನೂ ಹುಡುಗನ ಅಪ್ಪ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ಮುಗಿದ ನಂತರ ಮುಂದಿನ ಶಾಸ್ತ್ರಕ್ಕಾಗಿ ಹುಡುಗನ ಅಪ್ಪ, ಹುಡುಗಿಯ ತಾಯಿಗೆ ಕಾಲ್ ಮಾಡಿದ್ದಾರೆ. ಬಳಿಕ ಎರಡು ಕುಟುಂಬಸ್ಥರು ಮದುವೆ ಶಾಸ್ತ್ರಗಳನ್ನು ನಡೆಸಿದ್ದಾರೆ.

ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ಮಾತುಕತೆ ಒಂದೆರೆಡು ದಿನಕ್ಕೊಮ್ಮೆ ನಡೆಯುತ್ತಿತ್ತು. ಬಳಿಕ ದಿನಕ್ಕೊಂದು ಬಾರಿಗೆ ತಿರುಗಿತ್ತು. ಮಗನ ಮದುವೆ ಮಾತುಕತೆಯ ನಡುವೆ ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ನಡುವೆ ಪ್ರೀತಿ ಶುರುವಾಗಿದೆ. ಬಳಿಕ ಮಗನ ಮದುವೆ ಮಾತುಕತೆ ನೆಪದಲ್ಲಿ ಇವರಿಬ್ಬರ ಪ್ರೀತಿ ಜೋರಾಗಿದೆ.

ಮಗನ ಮದುವೆಗೂ ಮೊದಲೇ ಹುಡುಗನ ತಂದೆ ಹಾಗೂ ಹುಡುಗಿಯ ತಾಯಿ ಪರಾರಿಯಾಗಿದ್ದಾರೆ. ಇಬ್ಬರು ನಾಪತ್ತೆಯಾದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಹುಡುಗಿ ತಂದೆ ಅಪಹರಣ ದೂರು ನೀಡಿದ್ದಾರೆ. ಪೊಲೀಸರ ತನಿಖೆ ವೇಳೆ ಇವರಿಬ್ಬರ ಫೋನ್ ಕಾಲ್ ಲಿಸ್ಟ್ ತೆಗೆದಾಗ ಅಚ್ಚರಿಯಾಗಿದೆ. ಪರಾರಿಯಾಗಿರುವ ತಾಯಿಗೆ 6 ಮಕ್ಕಳಿದ್ದರೆ, ಹುಡುಗನ ತಂದೆಗೆ 10 ಮಕ್ಕಳಿದ್ದಾರೆ.

Leave a Comment

Your email address will not be published. Required fields are marked *