Ad Widget .

ಪೊಲೀಸ್ ಸ್ಟೇಷನ್ ಒಳಗೆ ಪೊಲಿಸರೇ ಹೊಡೆದಾಡ್ಕೊಂಡ್ರಾ? ಎಎಸ್ಐ ಮೇಲೆ ಹೆಡ್ ಕಾನ್ಸ್ ಟೇಬಲ್ ಹಲ್ಲೆ!?

ಸಮಗ್ರ ನ್ಯೂಸ್: ಪೊಲೀಸ್ ಠಾಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಲಾಟೆ ಮಾಡಿಕೊಂಡು. ASI ಮೇಲೆ, HC ಹಲ್ಲೆಗೂ ಯತ್ನಿಸಿದ್ದಾರೆ ಎನ್ನಲಾದಂತ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.

Ad Widget . Ad Widget .

ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಎಸ್‌ಐ ಮಂಜುನಾಥ್ ಹಾಗೂ ಹೆಚ್ ಕಾನ್ಸ್ ಸ್ಟೇಬಲ್ ಅಂಜನಾಮೂರ್ತಿ ನಡುವೆ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

ಜುಲೈ.16ರಂದು ಪ್ರಕರಣವೊಂದರ ಬಗ್ಗೆ ಎಎಸ್‌ಐ ಮಂಜುನಾಥ್ ಅವರು ಬೇರೆ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿದ್ದಂತ ಸಂದರ್ಭದಲ್ಲಿ ಹೆಚ್ ಸಿ ಅಂಜನಾಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಷ್ಟೇ ಅಲ್ಲದೇ ಎಎಸ್‌ಐ ಮಂಜುನಾಥ್ ಮೇಲೆ ಹೆಡ್ ಕಾನ್ಸ್ ಸ್ಟೇಬಲ್ ಅಂಜನಾಮೂರ್ತಿ ಅವರು ಹಲ್ಲೆಗೂ ಮುಂದಾಗಿದ್ದಾರೆ. ಈ ವೇಳೆಯಲ್ಲಿ ಠಾಣೆಯಲ್ಲಿದ್ದಂತ ಇತರೆ ಸಿಬ್ಬಂದಿಗಳು ಜಗಳ ಬಿಡಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *