Ad Widget .

ಸೈದಾಪುರದಲ್ಲಿ ತ್ರಿಬಲ್ ಮರ್ಡರ್.. ಪತ್ನಿ, ಅತ್ತೆ ಮತ್ತು ಮಾವನನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಸಮಗ್ರ ನ್ಯೂಸ್: ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಅತ್ತೆ-ಮಾವ ಹಾಗೂ ಪತ್ನಿಯನ್ನು ಪಾಪಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಅನ್ನಪೂರ್ಣ (25), ಕವಿತಾ (45), ಬಸವರಾಜಪ್ಪ (52) ಕೊಲೆಯಾದವರು.

Ad Widget . Ad Widget .

ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣಳನನ್ನು ನವೀನ್‌ ಮದುವೆಯಾಗಿದ್ದ. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇತ್ತು. ಆದರೆ ಪತಿ ನವೀನ್‌ ಕಿರುಕುಳ ತಾಳಲಾರದೆ ಅನ್ನಪೂರ್ಣ ತವರು ಮನೆಗೆ ವಾಪಸ್‌ ಆಗಿದ್ದಳು. ಕಳೆದ ಒಂದು ವರ್ಷದ ಹಿಂದೆ ಅನ್ನಪೂರ್ಣ ತಂದೆ-ತಾಯಿ ಜತೆಗೆ ಇದ್ದಳು. ನಿನ್ನೆ ಬುಧವಾರ ಮತ್ತೆ ಜತೆಗೆ ಇರೋಣಾ ಬಾ ಎಂದು ಅನ್ನಪೂರ್ಣಳನ್ನು ನವೀನ್ ಕರೆದಿದ್ದ. ನ್ಯಾಯಾ ಪಂಚಾಯತಿ ಬಳಿಕ ಮತ್ತೆ ಈ ದಂಪತಿ ಜೊತೆಗಿರಲು ಮುಂದಾಗಿದ್ದರು.

Ad Widget . Ad Widget .

ಇತ್ತ ಪೋಷಕರು ಮಗಳನ್ನು ಗಂಡನ ಮನೆಗೆ ಬಿಡಲು ಬಂದಿದ್ದರು. ರಾಜೀ ಪಂಚಾಯತಿ ಬಳಿಕ ಅತ್ತೆ- ಮಾವನನ್ನು ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಡಲು ಹೋದಾಗ, ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಇರಿದು ನವೀನ್‌ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ವಡಗೇರಾ ತಾಲೂಕಿನ ಜೋಳದಡಗಿ ಬಳಿ ಶವ ಬಿಸಾಡಿದ್ದಾನೆ. ಸದ್ಯ ಅನ್ನಪೂರ್ಣಳ ಶವ ಪತ್ತೆಯಾಗಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Leave a Comment

Your email address will not be published. Required fields are marked *