Ad Widget .

ಸಹಾಯಕ ಕೋಚ್‌ ಆಯ್ಕೆ/ ಗಂಭೀರ್‌ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ಸಮಗ್ರ ನ್ಯೂಸ್‌: ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ನೇಮಿಸಿದ ಬಳಿಕ ಅವರು ತಮ್ಮ ಜತೆ ಕೆಲಸ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದೆ ಮಾರ್ನೆ ಮಾರ್ಕೆಲ್ ಮತ್ತು ಅಭಿಷೇಕ್ ನಾಯರ್ ಅವರನ್ನು ಕ್ರಮವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ತರಬೇತುದಾರರಾಗಿ ನೇಮಕ ಮಾಡುವಂತೆ ಮ್ಯಾನೇಜೇಂಟ್ ವಿನಂತಿಸಿದರು ಎಂದು ವರದಿಯಾಗಿತ್ತು. ವರದಿಗಳ ಪ್ರಕಾರ, ಬಿಸಿಸಿಐ ಅವರ ಬೇಡಿಕೆಗಳನ್ನು ರದ್ದು ಮಾಡಿದೆ. ಇದಲ್ಲದೆ ಮಾಜಿ ಆರಂಭಿಕ ಆಟಗಾರ ರಿಯಾನ್ ಟೆನ್ ಡೊಸ್ಟಾಟ್ ಮತ್ತು ಜಾಂಟಿ ರೋಡ್ಸ್ ಅವರನ್ನು ಫೀಲ್ಡಿಂಗ್ ತರಬೇತುದಾರರಾಗಿ ಹೊಂದುವ ಆಯ್ಕೆಗಳನ್ನು ಕೋರಿದ್ದರು. ಆದರೆ ಅಂತಿಮವಾಗಿ ಅದನ್ನು ತಿರಸ್ಕರಿಸಲಾಯಿತು.

Ad Widget . Ad Widget .

ಈ ಮೊದಲು ರವಿಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದ ಸಂದರ್ಭದಲ್ಲಿ ತಮಗೆ ಬೇಕಾದ ಸಹಾಯಕ ಕೋಚ್ ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿತ್ತು. ಆದರೆ ಗೌತಮ್ ಗಂಭೀರ್ ವಿಚಾರದಲ್ಲಿ ಹಾಗಾದಂತೆ ಕಾಣಿಸುತ್ತಿಲ್ಲ.

Ad Widget . Ad Widget .

ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ನೇಮಿಸಿಕೊಳ್ಳಲು ಗೌತಮ್ ಗಂಭೀರ್‌ ಬಿಸಿಸಿಐ ಸಲಹೆ ನೀಡಿದೆ ಎನ್ನಲಾಗುತ್ತಿದೆ. ಈ ಮೊದಲು ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದಾಗ ಪರಾಸ್ ಮಾಂಬ್ರೆ ಬೌಲಿಂಗ್ ಕೋಚ್ ಹಾಗೂ ಟಿ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ಕೆಲವು ವರದಿಗಳ ಪ್ರಕಾರ ಈ ಇಬ್ಬರನ್ನೇ ಮತ್ತೆ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *