Ad Widget .

ಉಪ್ಪಿನಂಗಡಿ: ಏಕಾಏಕಿ ಐರಾವತ ಬಸ್ ನಲ್ಲಿ‌ ಕಾಣಿಸಿಕೊಂಡ ಬೆಂಕಿ| ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಸಂಸ್ಥೆ ಯ ಐರಾವತ ಬಸ್ಸೊಂದಕ್ಕೆ ಬೆಂಕಿ ಹಿಡಿದ ಘಟನೆ ಇಲ್ಲಿನ ಹಳೆಗೇಟು ಬಳಿ ಜು.18 ಗುರುವಾರ ಬೆಳಗ್ಗೆ ನಡೆದಿದೆ. ಸ್ಥಳೀಯ ಯುವಕರ ಸಕಾಲಿಕ ಪ್ರಯತ್ನದಿಂದ ಬೆಂಕಿ ಆರಿಸಿದ ಕಾರಣ ಸಂಭವಿಸಬಹುದಾಗಿದ್ದ ಹೆಚ್ಚಿನ ಅವಘಡ ತಪ್ಪಿದೆ.

Ad Widget . Ad Widget .

ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ ಇಸಾಕ್, ಇಕ್ಬಾಲ್, ಸ್ಥಳೀಯರಾದ ಜಾಯಿ, ಸ್ನೇಕ್ ಝಕರಿಯಾ, ಸಿದ್ದೀಕ್ ಕೊಪ್ಪಳ ಸೇರಿದಂತೆ ಅಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ಸಿನ ಹಿಂಬದಿಗೆ ಹಾನಿಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *