ಸಮಗ್ರ ನ್ಯೂಸ್: ಸರ್ಕಾರಿ ಶಾಲೆ, ಪಿಯು ಕಾಲೇಜುಗಳಿಗೆ ಉಚಿತ ವಿದ್ಯುತ್ ಒದಗಿಸಲು ಇಂಧನ ಇಲಾಖೆ ಎಸ್ಕಾಂಗಳಿಗೆ ಸೂಚನೆ ನೀಡಿದೆ. 2024 -25 ನೇ ಸಾಲಿನಲ್ಲಿ ವಿದ್ಯುತ್ ಬಳಕೆ ಮೊತ್ತವನ್ನು ನಮೂದಿಸಿ ಶೂನ್ಯ ಬಿಲ್ ನೀಡುವಂತೆ ಎಸ್ಕಾಂಗಳಿಗೆ ಇಂಧನ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಈಗಾಗಲೇ 2024- 25 ನೇ ಸಾಲಿನಲ್ಲಿ ಮೂರು ತಿಂಗಳು ಮುಗಿದಿದ್ದು, ಜುಲೈನಲ್ಲಿ ಕೆಲವು ಸ್ಥಾವರಗಳ ವಿದ್ಯುತ್ ಬಳಕೆ ಬಿಲ್ ಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಮಾಸಿಕ ಬಿಲ್ ಗಳ ಬಳಕೆ ಮತ್ತು ನಮೂದಿಸಿ ಶೂನ್ಯ ಬಿಲ್ ನೀಡಿ ಆ ಬಿಲ್ ಗಳ ಮೊತ್ತವನ್ನು ತ್ರೈಮಾಸಿಕವಾರು ಶಾಲಾ ಶಿಕ್ಷಣ ಆಯುಕ್ತರಿಗೆ ನೀಡಿ ಮರುಪಾವತಿಸಿ ಪಡೆಯುವಂತೆ ನಿರ್ದೇಶನ ನೀಡಲಾಗಿದೆ. ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ಶಾಲೆಮ ಪಿಯು ಕಾಲೇಜುಗಳ ವಿದ್ಯುತ್ ಬಳಕೆ ಬಿಲ್ ಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಶೂನ್ಯ ಬಿಲ್ ನೀಡಬೇಕು, ಏಪ್ರಿಲ್ 1, 2024 ರಿಂದ ಜೂನ್ 30, 2024ರ ತ್ರೈಮಾಸಿಕವಾರು ಸರ್ಕಾರಿ ಶಾಲೆ, ಪಿಯು ಕಾಲೇಜುಗಳ ವಿದ್ಯುತ್ ಬೇಡಿಕೆಯನ್ನು ಆಯಾ ಇಲಾಖೆ ಆಯುಕ್ತರಿಗೆ ನೀಡಿ ಪಾವತಿ ಪಡೆಯಬೇಕು ಎಂದು ಹೇಳಲಾಗಿದೆ.