Ad Widget .

ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್| ಒಂಬತ್ತು ಮಂದಿಯ ರಕ್ಷಣೆ

ಸಮಗ್ರ ನ್ಯೂಸ್: ಒಮಾನ್ ಕರಾವಳಿಯಲ್ಲಿ ಹಡಗು ಮುಳುಗಿ 16 ಮಂದಿ ನಾಪತ್ತೆಯಾಗಿದ್ದು, ಅದರಲ್ಲಿ ಈಗ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಒಂಬತ್ತು ಸದಸ್ಯರಲ್ಲಿ ಎಂಟು ಮಂದಿ ಭಾರತೀಯರು ಮತ್ತು ಒಬ್ಬರು ಶ್ರೀಲಂಕಾದವರು ಎಂದು ಮೂಲಗಳು ತಿಳಿಸಿವೆ.

Ad Widget . Ad Widget .

ಒಮಾನ್​​ನ ಪ್ರಮುಖ ಬಂದರು ಡುಗ್ಮ್ ನಿಂದ ಹೊರಟಿದ್ದ ಪ್ರೆಸ್ಟೀಜ್ ಪಾಲ್ಕನ್ ಹಡಗು ಒಮಾನ್ ಸಾಗರ ಪ್ರದೇಶದಲ್ಲಿ ಮಗುಚಿದೆ. ಈ ಹಡಗಿನಲ್ಲಿ ಪೂರ್ವ ಕಾರ್ಮೋಸ್ ದೇಶದ ತೈಲ ಟ್ಯಾಂಕರ್ ಇತ್ತು ಎಂದು ಸಾಗರ ಭದ್ರತಾ ಕೇಂದ್ರ ಹೇಳಿದೆ. ಈ ಹಡಗು ಯೆಮನ್​​ನ ಅದೆನ್​​ಗೆ ಹೊರಟಿತ್ತು ಎಂದು ಹೇಳಲಾಗಿದೆ.

Ad Widget . Ad Widget .

ಮುಳುಗಿದ ತೈಲ ಟ್ಯಾಂಕರ್ ಜುಲೈ 15 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಒಮಾನ್ ಕರಾವಳಿಯಲ್ಲಿ ದುರಂತದ ಕರೆಯನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ರಾಯಭಾರ ಕಚೇರಿಯು ಒಮಾನಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಶೋಧ ಮತ್ತು ರಕ್ಷಣಾ (ಎಸ್‌ಎಆರ್) ಕಾರ್ಯಾಚರಣೆಯನ್ನು ಒಮನ್ ಸಮುದ್ರ ಭದ್ರತಾ ಕೇಂದ್ರವು ಸಮನ್ವಯಗೊಳಿಸುತ್ತಿದೆ. ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *