Ad Widget .

ಕರಾವಳಿಗೆ ಜು.18, 19ರಂದು ರೆಡ್ ಅಲರ್ಟ್

ಸಮಗ್ರ ನ್ಯೂಸ್: ಮುಂದಿನ ಎರಡು ದಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು ಅದರಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.18 ಮತ್ತು 19 ರಂದು ರೆಡ್‌ ಅಲರ್ಟ್‌ ಘೋಷಿಸಿದೆ.

Ad Widget . Ad Widget .

ಕರಾವಳಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ನೀರಿನ ಮೂಲಗಳು ತುಂಬಿವೆ. ಜೀವನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

Ad Widget . Ad Widget .

ಮುಂದಿನ ಎರಡು ದಿನಗಳು ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗುಂಬೆ, ಚಿಕ್ಕಮಗಳೂರು, ಸಕಲೇಶಪುರ ಘಾಟ್ ನಲ್ಲಿ ಭಾರೀ ಮಳೆಯಾದ ಪರಿಣಾಮ ಕರಾವಳಿಯ ನದಿಗಳು ಭರ್ತಿಯಾಗಿವೆ. ನದಿ, ಹೊಳೆ ಪಾತ್ರದ ಗದ್ದೆಗಳಲ್ಲಿ ನೆರೆಯ ವಾತಾವರಣ ಕಂಡುಬಂದಿದೆ. ನದಿ, ಸಮುದ್ರ ತೀರದ ಜನಕ್ಕೆ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದ್ದು, ಎರಡು ದಿನ ಸಮುದ್ರ ಮೀನುಗಾರಿಕೆ ನಿಷೇಧಿಸಿದೆ.

Leave a Comment

Your email address will not be published. Required fields are marked *