Ad Widget .

ಪತ್ನಿ ಮೇಕಪ್ ಮಾಡುತ್ತಾಳೆ ಎಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ವಿಚಿತ್ರ ಘಟನೆಗೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ಡ್ರೆಸ್ ಹಾಗೂ ಮೇಕಪ್ ಬಗ್ಗೆ ಗಲಾಟೆ ನಡೆದು, ಬಳಿಕ ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತೊಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಅಸ್ಸಾಂ ಮೂಲದ ಗುಲ್ಜರ್ ಹುಸೇನ್ ಚೌದರಿ (28)ಮೃತ ವ್ಯಕ್ತಿ. ಇತ ಮೂರು ವರ್ಷಗಳ ಹಿಂದೆ ಕುಲ್ಸುಮ್ ಬೇಗಂ ಎಂಬುವವರ ಜೊತೆ ಮದುವೆ ಮಾಡಿಕೊಂಡಿದ್ದ. ಜೀವನ ಸಾಗಿಸುವ ನಿಟ್ಟಿನಲ್ಲಿ ನೆಲಮಂಗಲಕ್ಕೆ ಬಂದು ಖಾಸಗಿ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಮೃತ ಗುಲ್ಜರ್ ಡ್ರೈವರ್ ಆಗಿದ್ದ. ಇದೀಗ ಪತ್ನಿ ನಿದ್ರಿಸುವ ವೇಳೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಪತ್ನಿ ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದರಂತೆ, ಎಷ್ಟೆ ಹೇಳಿದರು ಪ್ರಯೋಜನವಾಗಿಲ್ಲ, ಇನ್ನೂ ಮೇಕಪ್ ವಿಚಾರವಾಗಿ ಜಗಳವಾಗಿತ್ತು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *