Ad Widget .

ಸುಳ್ಯ: ಮದ್ಯದ ಅಮಲಲ್ಲಿ‌ ನೆರೆಮನೆಯ ಬಾಗಿಲು ತಟ್ಟಿದ‌ ಯುವಕ| ಕದ ತೆರೆಯಲು ಯತ್ನಿಸಿದವ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಯುವಕನೋರ್ವ ತಡರಾತ್ರಿ ಇನ್ನೊಂದು ಮನೆಯ ಆವರಣಕ್ಕೆ ಬಂದು ಮನೆಯ ಬಾಗಿಲು ತೆರೆಯಲು ಯತ್ನಿಸಿರುವ ಘಟನೆ ನಡೆದಿದ್ದು, ಯುವಕನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ಜು. 14ರಂದು ಇಲ್ಲಿನ ಜಯನಗರದ ಮನೆಯೊಂದರ ಬಳಿಗೆ ಮನೆಯವರು ಮಲಗಿದ್ದ ವೇಳೆ ಅನುಮಾನಾಸ್ಪದ ರೀತಿಯ ವ್ಯಕ್ತಿ ಬಂದು ಬಾಗಿಲು ತೆರೆಯಲು ಯತ್ನಿಸಿದ್ದಾಗಿ ಹೇಳಲಾಗಿದೆ.

Ad Widget . Ad Widget .

ಇದು ಮನೆಯವರ ಗಮನಕ್ಕೆ ಬಂದಿದ್ದು, ಅವರು ಸಮೀಪದಲ್ಲೇ ಇರುವ ಸಂಬಂಧಿಕರಿಗೆ ಮಾಹಿತಿ ನೀಡಿದರು. ಅವರು ಬಂದು ಯುವಕನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದರು.

ಆರೋಪಿ ಯುವಕ ಅಲ್ಲೇ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿದ್ದ ಕೋಲ್ಕತ್ತ ಮೂಲದ ಕಾರ್ಮಿಕ ಎಂದು ತಿಳಿದುಬಂದಿದೆ. ಆತ ಮದ್ಯ ಸೇವಿಸಿದ ಅಮಲಿನಲ್ಲಿ ಹೀಗೆ ವರ್ತಿಸಿರಬೇಕು ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *