Ad Widget .

ಸಂಪಾಜೆ: ನಿರಂತರ ಗುಡ್ಡ ಕುಸಿತ| ಕೊಯನಾಡು ಶಾಲೆ ಮೂರು‌ ತಿಂಗಳು ಬಂದ್| ತರಗತಿಗಳು ಪ್ರಾಥಮಿಕ ಶಾಲೆಗೆ ಶಿಪ್ಟ್

ಸಮಗ್ರ ನ್ಯೂಸ್: ಭಾರೀ ಮಳೆಯ ಪರಿಣಾಮ ಕೊಯನಾಡು ಶಾಲೆಯ ಹಿಂಬದಿಯ ಬರೆ ನಿರಂತರವಾಗಿ ಜರಿದು ಶಾಲೆಯ ಮೇಲೆ ಬೀಳುತ್ತಿದ್ದು, ಮಳೆಗಾಲ ಮುಗಿಯುವ ತನಕ ಶಾಲೆಯನ್ನು ಮುಚ್ಚಲು ಆದೇಶ ಮಾಡಲಾಗಿದೆ.

Ad Widget . Ad Widget .

ನಾಳೆಯಿಂದ ಕೊಯನಾಡು ಶಾಲೆ ಮಕ್ಕಳಿಗೆ ಪಕ್ಕದ ಸಂಪಾಜೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಇಲಾಖೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

Ad Widget . Ad Widget .

ಕೊಯನಾಡು ಶಾಲೆಯ ಹಿಂಬದಿ ದೊಡ್ಡ ಗಾತ್ರದ ಬರೆ ಇದ್ದು, ಕಳೆದ ವರ್ಷ ಮತ್ತು ಈ ಬಾರಿ ಮಳೆ ಆರಂಭದಲ್ಲೇ ಬರೆ ಜರಿದು ಶಾಲೆಯ ಬದಿಗೆ ಬಿದ್ದಿತ್ತು. ಇದೀಗ ಮತ್ತಷ್ಟು ಜರಿದಿದ್ದು, ಅಲ್ಲಿ ಮಕ್ಕಳು ಕುಳಿತುಕೊಳ್ಳುವುದು ಅಪಾಯವೆಂದರಿತ ಇಲಾಖೆ, ಇದೀಗ ಮುಂದಿನ ಮೂರು ತಿಂಗಳು ಶಾಲೆ ಮುಚ್ಚಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *