Ad Widget .

ಶಾಲಾ ಕೊಠಡಿಯಲ್ಲೇ ಗುರುವಿಲ್ಲದ ವಿದ್ಯೆ ಪ್ರಯೋಗಿಸಿದ ಶಿಕ್ಷಕರು| ಕಾಮದಾಟದ ವಿಡಿಯೋ ಎಲ್ಲೆಡೆ ವೈರಲ್

ಸಮಗ್ರ ನ್ಯೂಸ್: ವಿದ್ಯೆ ಬೋಧಿಸುವ ಶಿಕ್ಷಕರು ಶಾಲಾ ಕೊಠಡಿಯಲ್ಲೇ ಪ್ರಣಯದಲ್ಲಿ ಮುಳುಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲದಿನಗಳಿಂದ ಭಾರೀ ವೈರಲ್ ಆಗುತ್ತಿದೆ. ಶಾಲಾ ಮುಖ್ಯ ಶಿಕ್ಷಕನೊಬ್ಬ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಯುವತಿ ಜೊತೆ ಏಕಾಂತದಲ್ಲಿ ತೊಡಗಿದ್ದು, ಇದೀಗ ಅವರಿಬ್ಬರ ಖಾಸಗಿ ಕ್ಷಣದ ವಿಡಿಯೋಗಳು ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್‌, ಇನ್ಸ್‌ಟಾಗ್ರಾಂ, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ನೆಟ್ಟಿಗರಿಗೆ ಆಹಾರವಾಗಿದೆ.

Ad Widget . Ad Widget .

ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಮುಖ್ಯ ಶಿಕ್ಷಕನೊಬ್ಬ, ಶಿಕ್ಷಕಿಯನ್ನು ತನ್ನ ಹತ್ತಿರಕ್ಕೆ ಎಳೆದುಕೊಂಡು ತನ್ನ ತೋಳುಗಳಲ್ಲಿ ಎತ್ತುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ನಂತರ ಆಕೆಯನ್ನು ತಬ್ಬಿಕೊಂಡ ಆತ ತುಟಿಗೆ ತುಟಿ ಇಟ್ಟು ದೀರ್ಘವಾಗಿ ಚುಂಬಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ಶಿಕ್ಷಕಿಯ ಬೆನ್ನು ಸೇರಿದಂತೆ ದೇಹದಲ್ಲೆಲ್ಲ ಕೈಯಾಡಿಸುವ ದೃಶ್ಯವೂ ವಿಡಿಯೋದಲ್ಲಿ ಇದೆ. ನಂತರ ಆತ ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತಾನೆ.

Ad Widget . Ad Widget .

ವಿಡಿಯೋದಲ್ಲಿ, ಅಟಲ್ ಬಿಹಾರಿ ವಾಜಪೇಯಿ, ಮಹಾರಾಣಾ ಪ್ರತಾಪ್, ಭಗತ್ ಸಿಂಗ್ ಮತ್ತು ಇತರ ಹೆಸರಾಂತ ವ್ಯಕ್ತಿಗಳ ಫೋಟೋಗಳು ಕೋಣೆಯ ಗೋಡೆಗಳ ಮೇಲೆ ನೇತಾಡುತ್ತಿವೆ. ಈ ವಿಡಿಯೋ ಜಾನ್‌ಪುರದ ಸರ್ಪಥ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ವೆಂಟ್ ಶಾಲೆಯದ್ದು ಎಂದು ಹೇಳಲಾಗಿದೆ. ಶಾಲಾ ಕೊಠಡಿಯನ್ನೇ ತಮ್ಮ ತೀಟೆ ತೀರಿಸಿಕೊಳ್ಳಲು ಬಳಸಿರುವ ಶಾಲೆಯ ಶಿಕ್ಷಕನ ಮತ್ತು ಆತನಿಗೆ ಸಹಕರಿಸಿರುವ ಶಿಕ್ಷಕಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *